ETV Bharat / state

ಮಾಸ್ಕ್‌ ಹಾಕಿದ್ದವರನ್ನ ಕಪಿಗೆ ಹೋಲಿಸಿದ್ದ ಅನಂತ್‌ಕುಮಾರ್‌ ಹೆಗ್ಡೆಗೇ ಕೊರೊನಾ

author img

By

Published : Sep 14, 2020, 6:00 PM IST

ಯಾವುದೇ ಕಾರ್ಯಕ್ರಮದಲ್ಲಿಯೂ ಮಾಸ್ಕ್ ಕೂಡ ಧರಿಸದೇ ಇರುತ್ತಿದ್ದ ಹೆಗಡೆ, ಮಾಸ್ಕ್ ಧರಿಸಿದವರನ್ನು ರಾಮಾಯಣದ ಕಪಿಗಳಿಗೆ ಈ ಹಿಂದೆ ಹೋಲಿಸಿದ್ದರು..

Ananth Kumar Hegde
ಅನಂತಕುಮಾರ್​ ಹೆಗಡೆ

ಶಿರಸಿ(ಉತ್ತರ ಕನ್ನಡ): ಕೆನರಾ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ಸಂಸತ್ ಅಧಿವೇಶನ ಸಂದರ್ಭದಲ್ಲಿ ನಡೆಸಿದ ಕಡ್ಡಾಯ ಕೋವಿಡ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್​ ಇರುವುದು ದೃಢವಾಗಿದೆ.

ಈ ಹಿಂದೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೊರೊನಾ ಇಲ್ಲ ಏನೂ ಇಲ್ಲ, ಇವೆಲ್ಲ ಬರೀ ಗಿಮಿಕ್, ಇದು ಕೆಲ ಕಂಪನಿಗಳು ಲಾಭ ಗಳಿಕೆಗಾಗಿ ಕ್ರಿಯೇಟ್ ಮಾಡಿರುವುದು ಎಂದು ಹೇಳಿಕೆ ನೀಡಿದ್ದ ಅನಂತ್‌ಕುಮಾರ್ ಹೆಗಡೆ ಈಗ ಅದೇ ಸೋಂಕಿನಿಂದ ಬಳಲುವಂತಾಗಿದೆ.

ಯಾವುದೇ ಕಾರ್ಯಕ್ರಮದಲ್ಲಿಯೂ ಮಾಸ್ಕ್ ಕೂಡ ಧರಿಸದೇ ಇರುತ್ತಿದ್ದ ಹೆಗಡೆ, ಮಾಸ್ಕ್ ಧರಿಸಿದವರನ್ನು ರಾಮಾಯಣದ ಕಪಿಗಳಿಗೆ ಈ ಹಿಂದೆ ಹೋಲಿಸಿದ್ದರು. ಇದನ್ನು ಸರ್ಕಾರದ ವಿರುದ್ಧದ ಹೇಳಿಕೆ ಎಂದು ಆ ಸಂದರ್ಭದಲ್ಲಿ ವಿಶ್ಲೇಷಣೆ ಮಾಡಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.