ETV Bharat / state

ಕಡಲನಗರಿಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ: ಜನರನ್ನ ಆಕರ್ಷಿಸುತ್ತಿರುವ ಸಾಮೂಹಿಕ ಗರ್ಬಾ, ದಾಂಡಿಯಾ

author img

By

Published : Oct 4, 2019, 3:32 PM IST

ನವರಾತ್ರಿ ಉತ್ಸವ ಆರಂಭವಾಗುತ್ತಿದ್ದಂತೆ ಕಡಲನಗರಿಯಲ್ಲಿ ಗಮನ ಸೆಳೆಯುವ ಗುಜರಾತಿ ಮೂಲದ ದಾಂಡಿಯಾ ನೃತ್ಯವೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದ್ದು, ಕರಾವಳಿಯಾದ್ಯಂತ ನವರಾತ್ರಿಯನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತಿದೆ.

ಕಡಲನಗರಿಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ: ಜನರನ್ನ ಆಕರ್ಷಿಸುತ್ತಿರುವ ಸಾಮೂಹಿಕ ಗರ್ಬಾ, ದಾಂಡಿಯಾ

ಕಾರವಾರ: ನವರಾತ್ರಿ ಉತ್ಸವದ ರಂಗು ಕಾರವಾರದಲ್ಲಿ ಕಳೆಗಟ್ಟಿದ್ದು, ಜಗಮಗಿಸೋ ಲೈಟಿಂಗ್ ಮಧ್ಯೆ ಉತ್ತರಭಾರತದ ಜನಪ್ರಿಯ ನೃತ್ಯ ದಾಂಡಿಯಾಗೆ ಕಡಲನಗರಿ ಜನರು ಹೆಜ್ಜೆ ಹಾಕಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಕಡಲನಗರಿಯಲ್ಲಿ ಕಳೆಗಟ್ಟಿದ ನವರಾತ್ರಿ ಉತ್ಸವ: ಜನರನ್ನ ಆಕರ್ಷಿಸುತ್ತಿರುವ ಸಾಮೂಹಿಕ ಗರ್ಬಾ, ದಾಂಡಿಯಾ

ಯುವಕ-ಯುವತಿಯರು, ಹೆಂಗಸರು ಮಕ್ಕಳೆನ್ನದೇ ಎಲ್ಲಾ ವರ್ಗದವರೂ ಕೈಯಲ್ಲಿ ಕೋಲು ಹಿಡಿದು ಡಿಜೆಗೆ ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಇಲ್ಲಿ ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ನವರಾತ್ರಿಯ 9 ರಾತ್ರಿಗಳು ಕೂಡ ದೇವಿಯ ಉತ್ಸವ ಮೂರ್ತಿ ಎದುರು ಗರ್ಬಾ, ದಾಂಡಿಯಾ ನೃತ್ಯವೂ ಕಳೆಕಟ್ಟಲ್ಲಿದ್ದು, ಭಕ್ತರು ಭಕ್ತಿಯೊಂದಿಗೆ ಮನರಂಜಿಸಿಕೊಳ್ಳುವಂತಾಗಿದೆ.

ನವರಾತ್ರಿ ದಾಂಡಿಯಾಕ್ಕಾಗಿ ವಾರಗಳಿಂದಲೇ ಸಿದ್ಧತೆ ನಡೆಸುವ ಕರಾವಳಿಯ ಜನರು ದೇವಿ ದೇವಸ್ಥಾನ ಇಲ್ಲವೇ ಉತ್ಸವ ಮೂರ್ತಿ ಸ್ಥಾಪಿಸಿ ನವರಾತ್ರಿ ಆಚರಿಸುತ್ತಾರೆ. ದೇವಿಗೆ ಒಂಭತ್ತು ದಿನವೂ ಒಂಭತ್ತು ರೀತಿಯ ಅಲಂಕಾರ ಮಾಡಿ ಪೂಜಿಸಲಾಗುತ್ತದೆ.

ಇನ್ನೂ ದಾಂಡಿಯಾ, ಕಾರವಾರಿಗರು ಗುಜರಾತಿಗಳಿಂದ ನೋಡಿ ಕಲಿತ ಕಲೆ. ಹಿಂದೆ ಗುಜರಾತ್​ನಿಂದ ಕಾರವಾರಕ್ಕೆ ವ್ಯಾಪಾರಕ್ಕಾಗಿ ಬರುತ್ತಿದ್ದ ಗುಜರಾತಿಗಳು ಒಟ್ಟಾಗಿ ಸೇರಿ ನವರಾತ್ರಿ ವೇಳೆ ದಾಂಡಿಯಾ ನೃತ್ಯ ಮಾಡುತ್ತಿದ್ದರು. ಇದರಿಂದ ಪ್ರಭಾವಿತರಾದ ಕಾರವಾರಿಗರೂ ಕೂಡ ಕ್ರಮೇಣ ಈ ನೃತ್ಯವನ್ನ ಮುಂದುವರೆಸಿಕೊಂಡು ಬಂದಿದ್ದಾರೆ. ಹೀಗಾಗಿ ಪ್ರತಿ ವರ್ಷ ಕಾರವಾರದ ಐತಿಹಾಸಿಕ ಶಿವಾಜಿ ಕೋಟೆಯಲ್ಲಿನ ದುರ್ಗಾದೇವಿ ದೇವಸ್ಥಾನ. ಕುಂಟಿಮಹಾಮ್ಮಾಯಿ, ದೆವಳಿವಾಡ, ಬಾಂಡಿಶಿಟ್ಟಾ, ಕಡವಾಡ ಹೀಗೆ ಹತ್ತಾರು ಭಾಗಗಳಲ್ಲಿ ದಾಂಡಿಯಾ ನೃತ್ಯ ನಡೆಸಲಾಗುತ್ತದೆ.

ಒಟ್ಟಿನಲ್ಲಿ ನವರಾತ್ರಿ ಉತ್ಸವ ಆರಂಭವಾಗುತ್ತಿದ್ದಂತೆ ಕಡಲನಗರಿಯಲ್ಲಿ ಗಮನ ಸೆಳೆಯುವ ಗುಜರಾತಿ ಮೂಲದ ದಾಂಡಿಯಾ ನೃತ್ಯವೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದ್ದು, ಕರಾವಳಿಯಾದ್ಯಂತ ನವರಾತ್ರಿಯನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತಿದೆ.

Intro:ಕಾರವಾರ: ಜಗಮಗಿಸೋ ಲೈಟಿಂಗ್ ಮಧ್ಯೆ ಮಸ್ತ್ ಮಸ್ತ್ ಸಾಂಗ್ ಗೆ ಸ್ಟೇಪ್ ಹಾಕುತ್ತಿರೋ ಬ್ಯೂಟಿಗಳು. ಎಷ್ಟೇ ನೋಡಿದರು ಬೇಸರ ತರಿಸದ ಉತ್ಸವವನ್ನು ಕಣ್ ತುಂಬಿಕೊಳ್ಳಲು ಕಿಕ್ಕಿರಿದು ಸೇರಿ ಜನರು. ವಾವ್ ಏನ್ ಚಂದಾ ಅಲ್ವಾ.
ಅಂದ ಹಾಗೆ ಹೀಗೆ ಕೈಯಲ್ಲಿ ಕೋಲುಗಳನ್ನು ಹಿಡಿದು ಸ್ಟೆಪ್ ಹಾಕುತ್ತಿರುವುದು ಕಾರವಾರದಲ್ಲಿ. ಎಲ್ಲೆಡೆಯಂತೆ ಕಾರವಾರದಲ್ಲಿಯೂ ನವರಾತ್ರಿ ಉತ್ಸವ ಕಳೆಕಟ್ಟಿದ್ದು, ಉತ್ತರಭಾರತದ ಜನಪ್ರೀಯ ನೃತ್ಯ ದಾಂಡಿಯಾಗೆ ಕಡಲನಗರಿ ಜನರು ಮನಸೋತಿದ್ದಾರೆ. ಈ ಕಾರಣದಿಂದ ಕಳೆದ ಹಲವು ವರ್ಷಗಳಿಂದ ತಪ್ಪದೆ ನವರಾತ್ರಿ ವೇಳೆ ಗರ್ಬಾ, ದಾಂಡಿಯಾ ನೃತ್ಯವೂ ಕಳೆಕಟ್ಟಲ್ಲಿದ್ದು, ದೇವಿಯ ಉತ್ಸವ ಮೂರ್ತಿ ಎದುರು ಒಂಬತ್ತು ದಿನಗಳವರೆಗೂ ಡಿಜೆ ಸದ್ದಿಗೆ ಸ್ಟೇಪ್ ಹಾಕಿ ಖುಷಿಯಲ್ಲಿ ಮಿಂದೇಳುತ್ತಿದ್ದಾರೆ.
ನವರಾತ್ರಿ ದಾಂಡಿಯಾಕ್ಕಾಗಿ ವಾರಗಳಿಂದಲೇ ಸಿದ್ದತೆ ನಡೆಸುವ ಕರಾವಳಿಯ ಜನರು ದೇವಿ ದೇವಸ್ಥಾನ ಇಲ್ಲವೇ ಉತ್ಸವ ಮೂರ್ತಿ ಸ್ಥಾಪಿಸಿ ನವರಾತ್ರಿ ಆಚರಿಸಲಾಗುತ್ತದೆ. ದೇವಿಗೆ ಒಂಬತ್ತು ದುನವೂ ಒಂಬತ್ತು ರಿತಿಯ ಅಲಾಂಕಾರ ಮಾಡಿ ಪೂಜಿಸಲಾಗುತ್ತದೆ. ಅಲ್ಲದೆ ಸ್ಥಳದಲ್ಲಿ ಝಗಮಗಿಸುವ ಲೈಟ್ ಹಾಕಿ ಡಿಜೆ ಇಟ್ಟು ಮೊದಲು ಗರ್ಬಾ ನೃತ್ಯ, ದಾಂಡಿಯಾ ನೃತ್ಯ ಆಡಲಾಗುತ್ತದೆ. ಈ ವೇಳೆ ಸುತ್ತಮುತ್ತಲಿನ ಮಹಿಳೆಯರು, ಮಕ್ಕಳು, ಯುವಕರು, ಯುವತಿಯರು, ಸೇರಿದಂತೆ ಎಲ್ಲರೂ ಎಲ್ಲ ಕಷ್ಟ ನೋವುಗಳನ್ನು ಮರೆತು ದಾಂಡಿಯಾ ಆಡುತ್ತಾರೆ ಎನ್ನುತ್ತಾರೆ ನಗರದ ದೇವಿಳಿವಾಡದ ನಿವಾಸಿ ಕಾಂಚನಾ.
ಇನ್ನು ದಾಂಡಿಯಾ ನೃತ್ಯ ಕಾರವಾರಿಗರೂ ನೋಡಿ ಕಲಿತ ಕಲೆ. ಗುಜರಾತ್ ಗಳಿಂದ ಕಾರವಾರಕ್ಕೆ ವ್ಯಾಪರಕ್ಕಾಗಿ ಬಂದಿದ್ದ ಅಲ್ಲಿನ ಜನರು ಇಲ್ಲಿ ಒಟ್ಟಾಗಿ ನವರಾತ್ರಿ ವೇಳೆ ದಾಂಡಿಯಾ ಆಡುತ್ತಿದ್ದರು. ಈ ನೃತ್ಯ ನೋಡಿ ಮನಸೋತ ಕಾರವಾರಿಗರು ಕ್ರಮೇಣ ಎಲ್ಲೆಡೆ ಪ್ರಾರಂಭಿಸಿದ್ದರು. ಇದರಿಂದಾಗಿ ಪ್ರತಿ ವರ್ಷ ಕಾರವಾರದ ಐತಿಹಾಸಿಕ ಶಿವಾಜಿ ಕೋಟೆಯಲ್ಲಿನ ದುರ್ಗಾದೇವಿ ದೇವಸ್ಥಾನ. ಕುಂಟಿಮಹಾಮ್ಮಾಯಿ, ದೆವಳಿವಾಡ, ಬಾಂಡಿಶಿಟ್ಟಾ, ಕಡವಾಡ ಹೀಗೆ ಹತ್ತಾರು ಭಾಗಗಳಲ್ಲಿ ದಾಂಡಿಯಾ ನೃತ್ಯ ನಡೆಸಲಾಗುತ್ತದೆ. ದಾಂಡಿಯಾ ನೋಡುವುದಕ್ಕಾಗಿ ಜನರು ಕಿಕ್ಕಿರಿದು ನೆರೆಯುತ್ತಾರೆ. ತುಂಬಾ ಅಚ್ಚುಕಟ್ಟಾಗಿ ನಡೆಯುವ ಉತ್ಸವದಲ್ಲಿ ಎಲ್ಲರೂ ಹೊಸ ಬಟ್ಟೆ ತೊಟ್ಟು ಖುಷಿ ಖುಷಿಯಾಗಿ ಭಾಗವಹಿಸುತ್ತಾರೆ ಎನ್ನುತ್ತಾರೆ ಸ್ಥಳೀಯ ನಗರಸಭೆ ಸದಸ್ಯೆ ಸಂಧ್ಯಾ ಬಾಡಕರ್.
ಒಟ್ಟಿನಲ್ಲಿ ನವರಾತ್ರಿ ಉತ್ಸವ ಆರಂಭವಾಗುತ್ತಿದ್ದಂತೆ ಕಡಲನಗರಿಯಲ್ಲಿ ಗಮನ ಸೆಳೆಯುವ ಗುಜರಾತಿ ಮೂಲದ ದಾಂಡಿಯಾ ನೃತ್ಯವೂ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದ್ದು, ಕರಾವಳಿಯಾದ್ಯಂತ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತಿದೆ.

ಬೈಟ್ ೧ ಕಾಂಚನ ಸ್ಥಳೀಯರು (ಒಬ್ಬರೆ ನಿಂತವರು)
ಬೈಟ್ ೨ ಸಂಧ್ಯಾ ಬಾಡ್ಕರ್ ನಗರಸಭೆ ಸದಸ್ಯೆ ( ಇಬ್ಬರು ಇದ್ದವರು)


Body:ಕ


Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.