ETV Bharat / state

ಸಂಬಂಧಿಕರ ಮದುವೆಗೆಂದು ಮುಂಬೈನಿಂದ ಬಂದವನ ಬರ್ಬರ ಹತ್ಯೆ

author img

By

Published : Oct 20, 2019, 4:15 AM IST

ಶ್ಯಾನಭಾಗ ರೆಸಿಡೆನ್ಸಿಯಲ್ಲಿ ಪುರವರ್ಗದ ಮುಂಗಳಿಹೊ‌ಂಡ ನಿವಾಸಿ ಅಫಾನ್ ಜಬಾಲಿ ಎಂಬಾತನನ್ನು 5-6 ಜನರ ತಂಡವೊಂದು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿ

ಭಟ್ಕಳ: ನಗರದ ಹೃದಯ ಭಾಗವಾದ ರಾಷ್ಟ್ರೀಯ ಹೆದ್ದಾರಿ- 66ರ ಸಮೀಪದ ಶ್ಯಾನಭಾಗ ರೆಸಿಡೆನ್ಸಿಯಲ್ಲಿ ಯುವಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ಘಟನೆ ಶನಿವಾರ ರಾತ್ರಿ ನಡೆದಿದೆ.

ಹತ್ಯೆಯಾದ ಯುವಕ ಪುರವರ್ಗದ ಮುಂಗಳಿಹೊ‌ಂಡ ನಿವಾಸಿ ಅಫಾನ್ ಜಬಾಲಿ(25) ಎಂದು ತಿಳಿದು ಬಂದಿದೆ. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಸಂಬಂಧಿಕರ ಮದುವೆಯ‌ ನಿಮಿತ್ತ ಶನಿವಾರ ಬೆಳಿಗ್ಗೆ ಮುಂಬೈನಿಂದ ಭಟ್ಕಳಕ್ಕೆ ಬಂದಿಳಿದಿದ್ದ ಎನ್ನಲಾಗಿದೆ.

ಕೊಲೆಯಾದ ವ್ಯಕ್ತಿ

ಕುತ್ತಿಗೆ, ಕಾಲುಕಟ್ಟಿ ಹತ್ಯೆಗೈದ ಆರೋಪಿಗಳು

ಯಾವುದೋ ವಿಚಾರಕ್ಕೆ 5-6 ಮಂದಿ ಹೊಟೆಲ್ ರೂಮು ಸೇರಿ‌ ಮಾತುಕತೆ ನಡೆಸಿದ್ದರು. ಮಾತುಕತೆ ವಿಫಲವಾದ ಹಿನ್ನೆಲೆ ನಡೆದ ಗಲಾಟೆ ಅಫಾನ್​ಕೊಲೆಯಲ್ಲಿ ಅಂತ್ಯವಾಗಿದೆ. ಯುವಕ ಅಫಾನ್​ನನ್ನುಆರೋಪಿಗಳು ಕುತ್ತಿಗೆ, ಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಒಬ್ಬ ಆರೋಪಿ

ಆರೋಪಿಗಳು ಆಫಾನ್​ನನ್ನು ಕೊಂದು ಹೋಟೆಲ್​​ನಿಂದ ಪರಾರಿಯಾಗುವ ವೇಳೆ ಇಕ್ಬಾಲ್ ಎಂಬಾತನನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಈತನ ಜೊತೆಗಿದ್ದವರು ಪರಾರಿಯಾಗಿದ್ದಾರೆ. ಪೊಲೀಸರ ವಶದಲ್ಲಿರುವ ಆರೋಪಿ‌ ಇಕ್ಬಾಲ್ ಮೃತ ಆಫಾನ್ ಊರಾದ ಮುಗಳಿಹೊಂಡದವನು ಎನ್ನುವ ಮಾಹಿತಿ ಲಭಿಸಿದ್ದು, ಪರಾರಿಯಾದ ಆರೋಪಿಗಳಲ್ಲಿ 3-4 ಮಂದಿ ಮಂಗಳೂರು ಮೂಲದವರು ಎಂದು ಶಂಕಿಸಲಾಗಿದೆ.

ಯಾವರ ಕಾರಣಕ್ಕೆ ಅಫಾನ್​ನನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ. ಈ ಘಟನೆ ಭಟ್ಕಳ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Intro:ಭಟ್ಕಳ: ಇಲ್ಲಿನ ಹ್ರದಯ ಭಾಗವಾದ ರಾಷ್ಟ್ರೀಯ ಹೆದ್ದಾರಿ- 66 ರ ಸಮೀಪದ ಶ್ಯಾನಭಾಗ ರೆಸಿಡೆನ್ಸಿಯಲ್ಲಿ ರಾತ್ರಿ ವೇಳೆ ಯುವಕನೋರ್ವನ ಮೇಲೆ ನಾಲ್ಕು ಮಂದಿ ಅಪರಿಚಿತರಿಂದ‌ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ಘಟನೆ ಶನಿವಾರದಂದು ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.Body:ಭಟ್ಕಳ: ಇಲ್ಲಿನ ಹ್ರದಯ ಭಾಗವಾದ ರಾಷ್ಟ್ರೀಯ ಹೆದ್ದಾರಿ- 66 ರ ಸಮೀಪದ ಶ್ಯಾನಭಾಗ ರೆಸಿಡೆನ್ಸಿಯಲ್ಲಿ ರಾತ್ರಿ ವೇಳೆ ಯುವಕನೋರ್ವನ ಮೇಲೆ ನಾಲ್ಕು ಮಂದಿ ಅಪರಿಚಿತರಿಂದ‌ ಹಲ್ಲೆ ನಡೆಸಿ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದ ಘಟನೆ ಶನಿವಾರದಂದು ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.



ಬರ್ಬರ ಹತ್ಯೆಯಾದ ಯುವಕ ಇಲ್ಲಿನ ಪುರವರ್ಗದ ಮುಂಗಳಿಹೊ‌ಂಡ ನಿವಾಸಿ ಅಫಾನ್ ಜಬಾಲಿ(25) ವರ್ಷ ಎಂದು ತಿಳಿದು ಬಂದಿದೆ. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು ಸಂಬಂಧಿಕರ ಮದುವೆಯ‌ ನಿಮಿತ್ತ ಶನಿವಾರದಂದು ಬೆಳಿಗ್ಗೆ ಮುಂಬೈನಿಂದ ಭಟ್ಕಳಕ್ಕೆ ಬಂದಿಳಿದಿದ್ದ ಯುವಕ ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕೆ ಯುವಕನ ಮೇಲೆ ಹತ್ಯೆಯ ಸಂಚು ರೂಪಿಸಿದ್ದಾರೆಂದು ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ.

ಯುವಕ ತನ್ನ ಮನೆಯಿಂದ ಲಾಡ್ಜ ಬಳಿ ಯಾಕೆ ಬಂದಿದ್ದಾನೆಂದು ತಿಳಿದು ಬಂದಿಲ್ಲವಾಗಿದೆ. ಆದರೆ ಕೆಲವು ಮಾಹಿತಿಗಳ ಪ್ರಕಾರ ಯುವಕನ ಹೆಸರಿನಲ್ಲಿ ಮೂರು ತಿಂಗಳ ಹಿಂದೆ ಶ್ಯಾನಭಾಗ ಡಿಲಕ್ಸ ರೂಮ್ ಬುಕ್ ಆಗಿರುವ ಬಗ್ಗೆಯೂ ಕೆಲವು ಕಡೆಗಳಿಂದ ವಿಷಯ ತಿಳಿದು ಬಂದಿದೆ.



ಕುತ್ತಿಗೆ, ಕಾಲುಕಟ್ಟಿ ಹತ್ಯೆಗೈದ ಆರೋಪಿಗಳು: ಯಾವುದೋ ವಿಚಾರಕ್ಕೆ 5-6 ಮಂದಿಗಳು ಹೊಟೆಲ್ ರೂಮು ಸೇರಿ‌ ಮಾತುಕತೆಗಿಳಿಸಿದ್ದು ಮಾತುಕತೆ ವಿಫಲವಾಗಿದೆ. ಈ ವೇಳೆ ನಡೆದ ಗಲಾಟೆಯಲ್ಲಿ ಹತ್ಯೆಯ ಹಂತಕ್ಕೆ ತಲುಪಿದ್ದು ಉಳಿದ 3-4 ಮಂದಿ ಯುವಕ ಅಫಾನ ಕುತ್ತಿಗೆ ಕಾಲು ಕಟ್ಟಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಹತ್ಯೆಯಾದ ಯುವಕ ಆಫಾನ್ ಜಬಾಲಿ ಕೊಲೆಗೆ ಹಣಕಾಸು ವ್ಯವಹಾರವೇ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೊಂದು ಕಡೆ ಸಲಿಂಗಕಾಮದ ಕರಿನೆರಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.‌ ಯಾವುದೋ ದೊಡ್ಡ ಡೀಲ್ ಕುದುರಿಸಲು ಆಫಾನ ಸೇರಿದಂತೆ 4-5 ಜನರು ಶಾನಭಾಗ್ ವಸತಿಗೃಹದ ಕೋಣೆಯನ್ನು ಸೇರಿ ಮಾತುಕತೆ ನಡೆಸುತ್ತಿದ್ದರು ಮಾತುಕತೆ ವಿಫಲವಾಗಿ ಕೊಲೆ ಘಟನೆಯವರೆಗೂ ಬಂದು ನಿಂತಿದೆ ಎಂಬ ಮಾಹಿತಿ ಲಭ್ಯವಾಗಿದೆ.



ಓರ್ವ ವಶಕ್ಕೆ : ಬಂಧಿತ ಆರೋಪಿ ಇಕ್ಬಾಲ್ ಎಂದು ತಿಳಿದು ಬಂದಿದೆ. ಆರೋಪಿಗಳು ಆಫಾನ್ ನನ್ನ ಕೊಂದು ಹೋಟೆಲಿನಿಂದ ಪರಾರಿಯಾಗುವ ಯತ್ನದಲ್ಲಿ ಇರುವಾಗಲೇ ಓರ್ವನನ್ನು ಹಿಡಿಯಲಾಗಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಉಳಿದವರು ತಪ್ಪಿಸಿಕೊಂಡಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿ ಇರುವ ಆರೋಪಿ‌ ಇಕ್ಬಾಲ್ ಮೃತ ಆಫಾನ್ ಊರಾದ ಮುಗಳಿಹೊಂಡದವನು ಎನ್ನುವ ಮಾಹಿತಿ ಲಭಿಸಿದೆ.



ಪರಾರಿಯಾದ ಆರೋಪಿಗಳಲ್ಲಿ 3-4 ಮಂದಿ ಮಂಗಳುರು ಮೂಲದವರು ಎಂದು ಶಂಕಿಸಲಾಗುತ್ತಿದ್ದು , ಈ ಕುಕೃತ್ಯಕ್ಕಾಗಿಯೇ ಭಟ್ಕಳಕ್ಕೆ ಬಂದಿದ್ದರು ಎಂಬ ಗುಮಾನಿ ವ್ಯಕ್ತವಾಗಿದೆ. ಈ ಬಗ್ಗೆ ಮ್ರತ ಯುವಕನ ಸಹೋದರ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.



ಶವ ಮಣಿಪಾಲಕ್ಕೆ ರವಾನೆ: ತಕ್ಷಣ ಸ್ಥಳಕ್ಕೆ ಬಂದ ಎಎಸ್ಪಿ ನಿಖಿಲ್ ಬಿ., ಸಿಪಿಐ ರಾಮಚಂದ್ರ ನಾಯ್ಕ, ನಗರ ಹಾಗೂ ಗ್ರಾಮೀಣ ಠಾಣೆ ಪಿಎಸ್ಐಗಳು ಭೇಟಿ ನೀಡಿ ಕೊಲೆ ನಡೆದ ಹೊಟೇಲ್ ರೂಮ್ ಪರಿಶೀಲನೆ ನಡೆಸಿ ಮ್ರತ ದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಕೊಲೆಯ ವಿಚಾರ ಕೇಳಿ ಬಂದಿದ್ದು ಸಾವಿರಾರು ಜನ ಬಂದು ಮ್ರತ ದೇಹ ವೀಕ್ಷಿಸಿ ತೆರಳಿದ್ದಾರೆ. ಪಾರೆಂಸಿಕ್ ಲ್ಯಾಬ ಮಣಿಪಾಲಕ್ಕೆ ಮ್ರತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಭಟ್ಕಳದಿಂದ ಪೊಲೀಸ ಭದ್ರತಾ ವಾಹನದ ಜೊತೆಗೆ ಕಳುಹಿಸಲಾಗಿದೆ.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.