ETV Bharat / state

ದಶಕಗಳಿಂದ ಡಾಂಬರು ಕಾಣದೆ ಹದೆಗೆಟ್ಟ ರಸ್ತೆ: ಯಾಣದಲ್ಲಿ ಪ್ರವಾಸಿಗರು ಹೈರಾಣ

author img

By

Published : Dec 27, 2019, 3:13 PM IST

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಭೈರವೇಶ್ವರನ ದರ್ಶನ ಪಡೆಯಲು ಪ್ರವಾಸಿಗರು 2 ಕಿಲೋಮೀಟರ್​ಗೂ ಅಧಿಕ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿಯಿದೆ.

ಶಿರಸಿ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಉತ್ತರ ಕನ್ನಡ ಜಿಲ್ಲೆಯ ಯಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಭೈರವೇಶ್ವರನ ದರ್ಶನ ಪಡೆಯಲು ಪ್ರವಾಸಿಗರು 2 ಕಿಲೋಮೀಟರ್​ಗೂ ಅಧಿಕ ದೂರ ಕಾಲ್ನಡಿಗೆಯಲ್ಲಿ ಸಾಗಬೇಕಾದ ಪರಿಸ್ಥಿತಿಯಿದೆ.

ಗೋಕರ್ಣ-ಶಿರಸಿ ರಾಜ್ಯ ಹೆದ್ದಾರಿಯಿಂದ ಯಾಣಕ್ಕೆ ಕೇವಲ 3 ಕಿ.ಮೀ ಅಂತರವಿದೆ. ಆದ್ರೆ ಹದೆಗೆಟ್ಟ ರಸ್ತೆಯಿಂದಾಗಿ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ನಡೆದುಕೊಂಡೇ ಹೋಗುವಂತಾಗಿದೆ. ಜೊತೆಗೆ ಇಕ್ಕಟ್ಟಾದ ರಸ್ತೆಯಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.

2002ರಲ್ಲಿ ಎಡಿಬಿ ಯೋಜನೆಯಿಂದ ಯಾಣದ ಮೂರು ಕಿಲೋಮೀಟರ್​ ರಸ್ತೆ ಡಾಂಬರೀಕರಣಕ್ಕೆಂದು 2 ಲಕ್ಷ ರೂಪಾಯಿ ಮಂಜೂರಾಗಿತ್ತು. ಆ ಬಳಿಕ ಈ ರಸ್ತೆಗೆ ಯಾವುದೇ ವಿಶೇಷ ಅನುದಾನಗಳು ಬಿಡುಗಡೆಗೊಂಡಿಲ್ಲ. ಹೀಗಾಗಿ ದಶಕಗಳ ಹಿಂದಿನ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜೊತೆಗೆ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮರಗಳು ಬಾಗಿದ್ದು, ಪೊದೆಗಳಿಂದ ತುಂಬಿ ದುರ್ಗಮ ರಸ್ತೆಯಾಗಿ ಬದಲಾಗಿದೆ. ಅಲ್ಲದೆ ಯಾಣದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳ ಕೊರತೆ ಕಂಡುಬರುತ್ತಿದೆ. ಹೀಗಾಗಿ ಸರ್ಕಾರ ಕೂಡಲೇ ರಸ್ತೆ ಅಭಿವೃದ್ಧಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಪ್ರವಾಸಿಗರಿಗೆ ಕಲ್ಪಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Intro:ಶಿರಸಿ :
Intro : ( web lead ) :
ರಾಜ್ಯ ಪ್ರಸಿದ್ಧ ಪ್ರವಾಸಿ ತಾಣವೆಂದೇ ಗುರುತಾಗಿರುವ ಜಿಲ್ಲೆಯ ಯಾಣಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಯಾಣದ ಆಕಾಶಚುಂಬಿ ಶಿಖರದ ಬುಡದಲ್ಲಿ ವಿರಾಜಮಾನ ಭೈರವೇಶ್ವರನ ದರ್ಶನ ಪಡೆಯಲು ಬರೋಬ್ಬರಿ 2 ಕಿ.ಮೀಗೂ ಅಧಿಕ ದೂರ ನಡೆದು ಸಾಗಬೇಕಿದೆ. ಆ ನಿಟ್ಟಿನಲ್ಲಿ ಯಾಣದ ಪ್ರವಾಸ ಪ್ರಯಾಸ ಎಂಬಂತಾಗಿದೆ.

Body:V- 1 :
ಗೋಕರ್ಣ-ವಡ್ಡಿ-ಶಿರಸಿ ರಾಜ್ಯ ಹೆದ್ದಾರಿಯ ಕಿ.ಮೀ 46ರ ಬಳಿಯ ಒಳ ಗ್ರಾಮೀಣ ರಸ್ತೆಯಿಂದ ಯಾಣಕ್ಕೆ ಕೇವಲ 3ಕಿ.ಮೀ ಅಂತರವಿದೆ. ಆದರೆ, ಯಾಣದ ಹದಗೆಟ್ಟ ರಸ್ತೆಯಿಂದಾಗಿ ಪ್ರವಾಸಿಗರ ನೂರಾರು ವಾಹನಗಳು 2ಕಿ.ಮೀ ದೂರದಲ್ಲಿಯೇ ಸಾಲಾಗಿ ನಿಂತಿರುವಂತಾಗಿದೆ. ಅಲ್ಲಲ್ಲಿ ಸ್ಥಳಿಯರೊಂದಿಗೆ ಪ್ರವಾಸಿಗರು ಘಟ್ಟದ ಮಧ್ಯೆ ನಿಂತ ವಾಹನಗಳನ್ನು ತಳ್ಳುತ್ತಿರುವುದು, ಇಕ್ಕಟ್ಟಾದ ರಸ್ತೆಯಿಂದ ವಾಹನಗಳ ಮುಖಾಮುಖಿ ಡಿಕ್ಕಿ ಇಂತಹ ಘಟನೆಗಳು ನಿತ್ಯದ ಸಹಜ ಪ್ರಕ್ರಿಯೆಗಳಾಗಿವೆ.
ಸ್ಥಳಿಯ ಮತ್ತಿಘಟ್ಟ, ದೇವನಳ್ಳಿ, ಮುಂಡಗನಮನೆ, ಅಚವೆ, ವಾಡೆಗಾರ್ ಸೇರಿದಂತೆ ಹತ್ತಕ್ಕೂ ಅಧಿಕ ಯುವ ಬಳಗ, ಸಂಘ ಸಂಸ್ಥೆಗಳ ಪ್ರಮುಖರು ಒಂದಾಗಿ ವಾರಕ್ಕೊಮ್ಮೆ ಯಾಣದ ರಸ್ತೆ ದುರಸ್ಥಿ ಕಾರ್ಯ ಮಾಡುತ್ತಿದ್ದಾರೆ.

ಬೈಟ್ (೧) : ಬಾಲಚಂದ್ರ ಶೆಟ್ಟಿ, ಸ್ಥಳೀಯ ನಿವಾಸಿ.


V-2 :
2002ರಲ್ಲಿ ಎಡಿಬಿ ಯೋಜನೆಯಿಂದ ಯಾಣದ ಮೂರು ಕಿ.ಮೀ ರಸ್ತೆ ಡಾಂಬರೀಕರಣಕ್ಕೆಂದು 2ಲಕ್ಷ ರು ಮಂಜೂರತಾಗಿತ್ತು. ಆ ನಂತರದಲ್ಲಿ ಪ್ರವಾಸಿತಾಣ, ಭೈರವೇಶ್ವರನ ಸನ್ನಿಧಿಯ ರಸ್ತೆಗೆ ಯಾವುದೇ ವಿಶೇಷ ಅನುದಾನಗಳು ಬಿಡುಗಡೆಗೊಂಡಿಲ್ಲ. ದಶಕಗಳ ಹಿಂದಿನ ಡಾಂಬರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಲ್ಲಿ ಡಾಂಬರೀಕರಣದ ಕುರುಹುಗಳು ಕಾಣಸಿಗುತ್ತವೆ. ಎರಡೂ ಕಡೆಗಳಲ್ಲಿ ಮರಗಳು ರಸ್ತೆಗೆ ಹೊಂದಿಕೊಂಡಿರುವದರಿಂದ ಇಕ್ಕಟ್ಟಾದ ರಸ್ತೆಯಿಂದ ವಾಹನ ಸಂಚಾರ ದುರ್ಗಮವಾಗಿದೆ. ಕೂಡಲೆ ಸರ್ಕಾರ
ಯಾವುದೇ ಯೋಜನೆಯಡಿ 1ಕೋಟಿ ರು ಅನುದಾನ ಬಿಡುಗಡೆ ಮಾಡುವ ಮೂಲಕ ಯಾಣದ ರಸ್ತೆಗೆ ಮರುಜೀವ ನೀಡಬೇಕೆಂದು ಸ್ಥಳಿಯ ಒತ್ತಾಯಿಸಿದ್ದಾರೆ.

ಬೈಟ್ (೨) : ಬಾಲಚಂದ್ರ ಶೆಟ್ಟಿ, ಸ್ಥಳೀಯ

Conclusion:V-3 :
ಒಟ್ಟಾರೆಯಾಗಿ ಪ್ರವಾಸಿ ತಾಣದ ನಾಡಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿ ಕೇಂದ್ರಗಳು ಸೊರಗುತ್ತಿದೆ. ಸರ್ಕಾರ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ ಪಣತೊಟ್ಟು, ಯಾಣ ಸೇರಿದಂತೆ ಇನ್ನಿತರ ಕೇಂದ್ರವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಸ್ಥಳೀಯ ಆಶಯವಾಗಿದೆ.‌
...........
ಸಂದೇಶ ಭಟ್ ಶಿರಸಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.