ETV Bharat / state

ಕೂರ್ಮಗಡ ದ್ವೀಪ ಜಾತ್ರೆ ದುರಂತ ಎಚ್ಚೆತ್ತ ಜಿಲ್ಲಾಡಳಿತ... ಸುರಕ್ಷತೆಗೆ ಹೆಚ್ಚಿನ ಆದ್ಯತೆ

author img

By

Published : Sep 21, 2019, 4:31 AM IST

ಕಳೆದ ಜನವರಿ 21 ರಂದು ಕಾರವಾರದ ಕೂರ್ಮಗಡ ದ್ವೀಪದ ಬಳಿ ನಡೆದ ದುರಂತ ಈಡಿ ರಾಜ್ಯವನ್ನೆ ಬೆಚ್ಚಿ ಬಿಳಿಸಿತ್ತು. ಸುರಕ್ಷತೆ ಇಲ್ಲದೇ ಬೋಟ್‌ನಲ್ಲಿ ತೆರಳಿದ ಬೋಟ್ ಮಗುಚಿ 16 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಸುರಕ್ಷತೆ ಇಲ್ಲದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬೋಟ್, ದೋಣಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಕೂರ್ಮಗಡ ದ್ವೀಪ ಜಾತ್ರೆ ದುರಂತದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ: ಈ ಬಾರಿ ಮುಂಜಾಗೃತಾ ಕ್ರಮಕ್ಕೆ ಆದೇಶ

ಕಾರವಾರ: ವರ್ಷದ ಹಿಂದೆ ಕಡಲನಗರಿ ಕಾರವಾರದಲ್ಲಿ ದುರಂತವೊಂದು ನಡೆದುಹೋಗಿತ್ತು. ಸಮುದ್ರಮಧ್ಯದ ಕೂರ್ಮಗಡ ದ್ವೀಪ ಜಾತ್ರೆಗೆ ತೆರಳಿದ ದೋಣಿಯೊಂದು ಮಗುಚಿ ನೋಡ ನೋಡುತ್ತಿದ್ದಂತೆ 16 ಜನರು ನೀರುಪಾಲಾಗಿದ್ದರು. ಭದ್ರತಾ ಪರಿಕರ ಬಳಸದೇ ದೋಣಿ ಏರಿದ ಪರಿಣಾಮ ಭಾರಿ ದುರಂತ ನಡೆದಿತ್ತು. ಸದ್ಯ ಈ ಘಟನೆಯಿಂದ ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಪ್ರವಾಸೋದ್ಯಮ ಚಟುವಟಿಕೆ, ನೀರಮಧ್ಯದ ಜಾತ್ರೆ ಸೇರಿದಂತೆ ಇನ್ನಿತರ ಕಾರಣಗಳಿಗೆ ನೀರಿಗಿಳಿಯುವ ಪ್ರತಿಯೊಂದು ಬೋಟ್ ಮತ್ತು ದೋಣಿಗಳಿಗೆ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವನ್ನು ಕಡ್ಡಾಯಗೊಳಿಸಿದೆ.

ಕೂರ್ಮಗಡ ದ್ವೀಪ ಜಾತ್ರೆ ದುರಂತದಿಂದ ಎಚ್ಚೆತ್ತ ಜಿಲ್ಲಾಡಳಿತ

ಪ್ರವಾಸಿಗರನ್ನು ಅಥವಾ ಸಾರ್ವಜನಿಕರನ್ನು ಕರೆದುಕೊಂಡು ಹೋಗುವ ಬೋಟ್​ನಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಲೈಫ್ ಜಾಕೆಟ್ ಹಾಕಿಕೊಂಡು ಹೋಗಬೇಕೆನ್ನುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಬೋಟ್ ಹಾಗೂ ದೋಣಿಯ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಮೀನುಗಾರಿಕಾ ಇಲಾಖೆ ಹಾಗೂ ಬಂದರು ಇಲಾಖೆಯಿಂದ ಅನುಮತಿ ಪಡೆದ ದೋಣಿಗಳಲ್ಲಿ ಮಾತ್ರ ಪ್ರವಾಸಿಗರು ಸಂಚರಿಸಲು ಅನುಮತಿ ನೀಡಿದೆ.

ನಿಗದಿಗಿಂತ ಹೆಚ್ಚಿನ ಪ್ರವಾಸಿಗರನ್ನ ಪ್ರಯಾಣಿಕರನ್ನು ಸುರಕ್ಷತೆ ಇಲ್ಲದೇ ಕರೆದುಕೊಂಡು ಹೋದರೆ ಬೋಟ್ ಹಾಗೂ ದೋಣಿಯ ಪರವಾನಗಿ ರದ್ದು ಮಾಡಲು ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಒಂದೊಮ್ಮೆ ನಿರ್ಲಕ್ಷ್ಯದಿಂದ ದುರಂತ ನಡೆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ಹರೀಶ್​ ಕುಮಾರ್ ತಿಳಿಸಿದ್ದಾರೆ.‌

Intro:Body:ಕಾರವಾರ: ವರ್ಷದ ಹಿಂದೆ ಕಡಲನಗರಿ ಕಾರವಾರದಲ್ಲಿ ನಡೆಯಬಾರದ ದುರಂತವೊಂದು ನಡೆದುಹೋಗಿತ್ತು. ಸಮುದ್ರಮಧ್ಯದ ಕೂರ್ಮಗಡ ದ್ವೀಪ ಜಾತ್ರೆಗೆ ತೆರಳಿದ ದೋಣಿಯೊಂದು ಮಗುಚಿ ನೋಡ ನೋಡುತ್ತಿದ್ದಂತೆ ೧೬ ಜನರು ನೀರುಪಾಲಾಗಿದ್ದರು. ಸೇಫ್ಟಿ ಪರಿಕರ ಬಳಸದೇ ದೋಣಿ ಏರಿರುವುದು ಇಂತಹದೊಂದು ಬಹುದೊಡ್ಡ ದುರಂತಕ್ಕೆ ಕಾರಣವಾಗಿತ್ತು. ಆದರೆ ಇದೀಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಇನ್ನೇನು ಗರಿಗೇದರಲಿರುವ ಪ್ರವಾಸೋದ್ಯಮ ಚಟುವಟಿಕೆ, ನೀರಮಧ್ಯದ ಜಾತ್ರೆ ಸೇರಿದಂತೆ ಇನ್ನಿತರ ಕಾರಣಗಳಿಗೆ ನೀರಿಗಿಳಿಯುವ ಪ್ರತಿಯೊಂದು ಬೋಟ್ ಮತ್ತು ದೋಣಿಗಳಿಗೆ ಸುರಕ್ಷತೆ ಹಾಗೂ ಮುಂಜಾಗೃತಾ ಕ್ರಮ ಕೈಗೊಳ್ಳಲು ಕಡ್ಡಾಯಗೊಳಿಸಿದೆ.
ಹೌದು ಕಳೆದ ಜನವರಿ ೨೧ ರಂದು ಕಾರವಾರದ ಕೂರ್ಮಗಡ ದ್ವೀಪದ ಬಳಿ ನಡೆದ ದುರಂತ ಈಡಿ ರಾಜ್ಯವನ್ನೆ ಬೆಚ್ಚಿ ಬಿಳಿಸಿತ್ತು. ಸುರಕ್ಷತೆ ಇಲ್ಲದೇ ಬೋಟ್‌ನಲ್ಲಿ ತೆರಳಿದ ಬೋಟ್ ಮಗುಚಿ 16 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆದರೆ ಘಟನೆಯಿಂದ ಎಚ್ಚೆತ್ತುಕೊಂಡಿರುವ ಉತ್ತರಕನ್ನಡ ಜಿಲ್ಲಾಡಳಿತ ಸುರಕ್ಷತೆ ಇಲ್ಲದೇ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬೋಟ್, ದೋಣಿಗಳಿಗೆ ಕಡಿವಾಣ ಹಾಕಲು ಮುಂದಾಗಿದೆ. ಪ್ರವಾಸಿಗರನ್ನು ಅಥವಾ ಸಾರ್ವಜನಿಕರನ್ನು ಕರೆದುಕೊಂಡು ಹೋಗುವ ಬೋಟ್ ನಲ್ಲಿ ಕಡ್ಡಾಯವಾಗಿ ಪ್ರಯಾಣಿಕರು ಲೈಫ್ ಜಾಕೆಟ್ ಹಾಕಿಕೊಂಡು ಹೋಗಬೇಕೆನ್ನುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಬೋಟ್ ಹಾಗೂ ದೋಣಿಯ ಫಿಟ್ನೆಸ್ ಸರ್ಟಿಫಿಕೇಟ್ ಪಡೆದು ಮೀನುಗಾರಿಕಾ ಇಲಾಖೆ ಹಾಗೂ ಬಂದರು ಇಲಾಖೆಯಿಂದ ಅನುಮತಿ ಪಡೆದ ದೋಣಿಗಳಲ್ಲಿ ಮಾತ್ರ ಪ್ರವಾಸಿಗರು ಸಂಚರಿಸಲು ಅನುಮತಿ ನೀಡಿದೆ. ನಿಗದಿಗಿಂತ ಹೆಚ್ಚಿನ ಪ್ರವಾಸಿಗರನ್ನ ಪ್ರಯಾಣಿಕರನ್ನು ಸುರಕ್ಷತೆ ಇಲ್ಲದೇ ಕರೆದುಕೊಂಡು ಹೋದರೆ ಬೋಟ್ ಹಾಗೂ ದೋಣಿಯ ಪರವಾನಗಿ ರದ್ದು ಮಾಡಲು ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಒಂದೊಮ್ಮೆ ನಿರ್ಲಕ್ಷದಿಂದ ದುರಂತ ನಡೆದರೆ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ.
ಇನ್ನು ಪ್ರವಾಸಿಗರ ತವರೂರು ಎಂದೇ ಕರೆಸಿಕೊಳ್ಳುವ ಉತ್ತರಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಇಲ್ಲಿನ ಕಲೆ, ಸಂಸ್ಕೃತಿ, ಹಬ್ಬ, ಜಾತ್ರೆಗಳೂ ತುಂಬಾ ಭಿನ್ನವಾಗಿರುತ್ತವೇ. ಅದರಲ್ಲೂ ಕಡಲಮಧ್ಯದ ಜಾತ್ರೆಗಳು ಇನ್ನು ವಿಶಿಷ್ಟವಾಗಿ ಆಕರ್ಷಿಸುತ್ತವೆ. ಈ ಕಾರಣದಿಂದ ಸಹಜವಾಗಿ ಎಲ್ಲರಿಗೂ ಕೂತುಹಲ ಹೆಚ್ಚಾಗಿ ಬೋಟ್ ಇಲ್ಲವೇ ದೋಣಿಗಳ ಮೂಲಕ ತೆರಳಲು ಪ್ರವಾಸಿಗರು ಸೇರಿದಂತೆ ಸ್ಥಳೀಯರು ಮುಗ್ಗಿ ಬಿಳ್ಳುತ್ತಾರೆ. ಆದರೆ ಹೀಗೆ ತೆರಳುವವರನ್ನು ಸುರಕ್ಷಿತವಾಗಿ ಕರೆದುಕೊಂಡ ಹೋಗಬೇಕಾಗಿರುವುದು ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಲೈಫ್ ಜಾಕೆಟ್, ಬೋಟ್ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ನೀಡಿರುವ ಆದೇಶ ಮೆಚ್ಚುವಂತದ್ದು, ಇದನ್ನು ಎಲ್ಲರೂ ಪಾಲಿಸಬೇಕು. ಅದೇ ರಿತಿ ಗ್ರಾಮೀಣ ಭಾಗಗಳಲ್ಲಿಯೂ ಸಣ್ಣ ಪುಟ್ಟ ದೋಣಿಗಳಲ್ಲಿ ನಿತ್ಯ ಸಂಚರಿಸುವವರಿಗೂ ಸುರಕ್ಷಾ ಪರಿಕರಗಳನ್ನು ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.‌
ಒಟ್ಟಿನಲ್ಲಿ ಇನ್ನೇನು ಕೆಲ ದಿನಗಳಲ್ಲಿ ಪ್ರವಾಸಿ ಚಟುವಟಿಕೆ ಜಾತ್ರೆ ಸಮಾರಂಭಗಳು ಜೋರಾಗಲಿದ್ದು, ನೀರಿನತ್ತ ಆಕರ್ಷಿಸುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಈ ಕಾರಣದಿಂದ ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಲು ಉತ್ತರಕನ್ನಡ ಜಿಲ್ಲಾಡಳಿತ ಈ ಬಾರಿ ಮುಂಚಿತವಾಗಿಯೇ ಮುಂಜಾಗ್ರತ ಕ್ರಮಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಬೈಟ್೧. ಡಾ. ಹರೀಶಕುಮಾರ್. ಕೆ, ಜಿಲ್ಲಾಧಿಕಾರಿ ಉತ್ತರಕನ್ನಡ
ಬೈಟ್ ೨. ರವಿ ಕಸಬೇಕರ್, ಸ್ಥಳೀಯರು


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.