ಆಗಸದಲ್ಲಿ ಹ್ಯಾಲೋರಿಂಗ್ ಕೌತುಕ: ಕುಮುಟಾ ಮಂದಿಯಲ್ಲಿ ಕುತೂಹಲ

author img

By

Published : Sep 26, 2021, 8:21 PM IST

kumuta-public-witness-for-halo-ring-sun

ಕುಮುಟಾ ಭಾಗದಲ್ಲಿ ಸೂರ್ಯನ ಸುತ್ತಲೂ ಪ್ರಭಾವಳಿಯಂತಹ ಬೆಳಕು ಗೋಚರಿಸಿದ್ದು ನೋಡುಗರನ್ನು ಚಕಿತಗೊಳಿಸಿತು.

ಕಾರವಾರ (ಉ.ಕ): ಕುಮುಟಾ ಸುತ್ತಲಿನ ಪ್ರದೇಶದ ಆಗಸದಲ್ಲಿಂದು ಕೌತುಕ ನಿರ್ಮಾಣಗೊಂಡಿತ್ತು. ಮೋಡಗಳ ಮರೆಯಲ್ಲಿನ ಸೂರ್ಯನ ಸುತ್ತ ಕಾಮನಬಿಲ್ಲಿನ ಕಂಕಣ ಮೂಡಿತ್ತು. ವೈಜ್ಞಾನಿಕವಾಗಿ ಹ್ಯಾಲೋರಿಂಗ್ ಎಂದು ಕರೆಸಿಕೊಳ್ಳುವ ಈ ಕೌತುಕವನ್ನು ಜನರು ಕಣ್ತುಂಬಿಕೊಂಡರು.

kumuta-public-witness-for-halo-ring-sun
ಆಗಸದಲ್ಲಿ ಹ್ಯಾಲೋರಿಂಗ್ ಕೌತುಕ

ಸೂರ್ಯನ ಕಿರಣಗಳು ಮೋಡಗಳ ಮೂಲಕ ಹಾದು ಹೋಗುವಾಗ ಉಂಗುರದಂತೆ ಬೆಳಕು ಪ್ರಜ್ವಲಿಸುತ್ತದೆ. ಈ ವಿದ್ಯಮಾನವು ಸಾಮಾನ್ಯವಾಗಿ ಶೀತ ದೇಶಗಳಲ್ಲಿ ಕಂಡುಬರುತ್ತದೆ ಎಂದು ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಂಜೀವ್ ದೇಶಪಾಂಡೆ ಸ್ಪಷ್ಟಪಡಿಸಿದರು.

ಸೂರ್ಯನ ಸುತ್ತ ಮೂಡಿದ್ದ ಈ ಅಚ್ಚರಿಯನ್ನು ಜನರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಖುಷಿಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.