ETV Bharat / state

ಮೂರೂರು ಮುಸ್ಗುಪ್ಪೆಯಲ್ಲಿ 8 ಅಡಿ ಆಳದ ಗುಹೆ ಪತ್ತೆ: ಗ್ರಾಮಸ್ಥರಲ್ಲಿ ಕುತೂಹಲ

author img

By

Published : Dec 11, 2022, 2:21 PM IST

Updated : Dec 11, 2022, 3:28 PM IST

ಮಿರ್ಜಾನ್ ಕೋಟೆ ನಿರ್ಮಿಸಿದ್ದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆಯ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಲಭವಾಗಿ ತಪ್ಪಿಸಿಕೊಳ್ಳಲು ಕೆಲ ಗುಪ್ತ ಸುರಂಗ ಮಾರ್ಗಗಳನ್ನು ಕೊರೆಯಿಸಿದ್ದರಂತೆ. ಈ ಗುಪ್ತ ದ್ವಾರಗಳು ಕೋಟೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿವೆ ಎನ್ನಲಾಗುತ್ತಿದೆ.

Cave discovered in Kumata Musguppe
ಕುಮಟಾ ಮುಸ್ಗುಪ್ಪೆಯಲ್ಲಿ ಗುಹೆ ಪತ್ತೆ

ಕುಮಟಾ ಮುಸ್ಗುಪ್ಪೆಯಲ್ಲಿ ಗುಹೆ ಪತ್ತೆ

ಕಾರವಾರ: ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಗುಹೆಯೊಂದು ಕುಮಟಾ ತಾಲೂಕು ಮೂರೂರು ಮುಸ್ಗುಪ್ಪೆಯಲ್ಲಿ ಪತ್ತೆಯಾಗಿದೆ. ಇದು ಸ್ಥಳೀಯರಲ್ಲಿ ಕುತೂಹಲ ಹೆಚ್ಚಿಸಿದೆ. ಮೂರೂರು ಗ್ರಾ.ಪಂ ವ್ಯಾಪ್ತಿಯ ಮುಸ್ಗುಪ್ಪೆಯ ರಸ್ತೆ ಬದಿಯಲ್ಲಿ ಮಣ್ಣು ಅಗೆಯುತ್ತಿರುವಾಗ ಗುಹೆ ಕಂಡುಬಂದಿದೆ. ಮೊದಮೊದಲು ಭೂಮಿಯ ಪೊಳ್ಳು ಪದರವಿರುವ ಜಾಗವಿರಬಹುದೆಂದು ಅಗೆಯುತ್ತಾ ಹೋದಂತೆ ಗುಹೆಯ ಆಳ ಜಾಸ್ತಿಯಾಗುತ್ತಾ ಹೋಗಿದೆ.

ಸುಮಾರು 8 ಅಡಿ ಆಳದಲ್ಲಿ ಗುಹೆ ಪತ್ತೆಯಾಗಿದೆ. ಆದರೆ ಇನ್ನೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಈ ಗುಹೆಯಿಂದ ಮಿರ್ಜಾನ್ ಕೋಟೆಗೆ ಸಂಪರ್ಕ ಇರಬಹುದೆಂದು ಸ್ಥಳೀಯರು ಊಹಿಸಿದ್ದಾರೆ. ಮಿರ್ಜಾನ್ ಕೋಟೆ ನಿರ್ಮಿಸಿದ ಆದಿಲ್ ಶಾಹಿಗಳ ಪಾಳೆಗಾರರು ಕೋಟೆಯ ಮೇಲೆ ಶತ್ರುಗಳ ದಾಳಿಯಾದರೆ ಪಾಳೆಗಾರರು ಸುಲಭವಾಗಿ ತಪ್ಪಿಸಿಕೊಳ್ಳಲು ಕೆಲ ಗುಪ್ತ ಸುರಂಗಗಳನ್ನು ಕೊರೆಯಿಸಿದ್ದರಂತೆ. ಈ ಗುಪ್ತ ದ್ವಾರಗಳು ಕೋಟೆಯ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿವೆ ಎಂದು ಹೇಳಲಾಗುತ್ತಿದೆ.

ಕೆಲ ವರ್ಷಗಳ ಹಿಂದೆ ಚುತುಷ್ಪಥ ಕಾಮಗಾರಿಗೆ ಮಿರ್ಜಾನ್ ದುಂಡ್ಕುಳಿಯ ಮಧ್ಯಭಾಗದಲ್ಲಿ ಗುಡ್ಡವನ್ನು ಕೊರೆಯುವಾಗ ಅಲ್ಲಿಯೂ ಬೃಹತ್ ಸುರಂಗವೊಂದು ಪತ್ತೆಯಾಗಿತ್ತು. ಆಗಲೂ ಅಲ್ಲಿನ ಸ್ಥಳೀಯರು ಇದು ಮಿರ್ಜಾನ್ ಕೋಟೆಯನ್ನು ಸಂಪರ್ಕಿಸುವ ಗುಹೆ ಎಂದೇ ವಿಶ್ಲೇಷಿಸಿದ್ದರು.

ಆದರೆ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ತಜ್ಞರ ತಂಡ ಪರಿಶೀಲಿಸಿದ ಬಳಿಕ ಗುಹೆ ಅಲ್ಲ. ಭೂಮಿಯಲ್ಲಿ ಉಂಟಾಗುವ ಪೊಳ್ಳು ಪದರ ಎಂದು ಸ್ಪಷ್ಟಪಡಿಸಿದ್ದರು. ಅದರಂತೆ ಮುಸ್ಗುಪ್ಪೆಯಲ್ಲಿ ಪತ್ತೆಯಾಗಿರುವ ಗುಹೆ ಬಗ್ಗೆಯೂ ಸಂಬಂಧಪಟ್ಟ ತಜ್ಞರ ತಂಡ ಪರಿಶೀಲಿಸಿದ ಬಳಿಕವೇ ಸತ್ಯಾಸತ್ಯತೆ ಗೊತ್ತಾಗಲಿದೆ ಎನ್ನಲಾಗಿದೆ.

ಇದನ್ನೂಓದಿ: ಕಾಡುಹಂದಿಗಳ ದಿಢೀರ್‌ ಸಾವು: ಚಾಮರಾಜನಗರ ಕಾಡಂಚಿನ ರೈತರಲ್ಲಿ ಆತಂಕ

Last Updated : Dec 11, 2022, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.