ETV Bharat / state

ಉತ್ತರ ಕನ್ನಡದಲ್ಲಿ ತೌಕ್ತೆ ಅಬ್ಬರ: ಗಾಳಿಸಹಿತ ಮಳೆಗೆ ಜನಜೀವನ ಅಸ್ತವ್ಯಸ್ಥ

author img

By

Published : May 16, 2021, 8:45 AM IST

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಗಾಳಿಸಹಿತ ಮಳೆಯಾಗುತ್ತಿದ್ದು, ಜನ ಜೀವನಕ್ಕೆ ತೊಂದರೆಯಾಗಿದೆ.

Heavy rain in Uttara Kannada
ಉತ್ತರ ಕನ್ನಡದಲ್ಲಿ ತೌಕ್ತೆ ಅಬ್ಬರ

ಕಾರವಾರ: ತೌಕ್ತೆ ಹೆಸರಿನ ಚಂಡಮಾರುತದ ಅಬ್ಬರಕ್ಕೆ ಜಿಲ್ಲೆಯ ಕರಾವಳಿ ಭಾಗ ತತ್ತರಿಸಿದೆ. ತಡರಾತ್ರಿ ಸುರಿದ ಭಾರಿ ಗಾಳಿಸಹಿತ ಮಳೆಗೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಕಡಲತೀರಗಳ ಮನೆಗಳಿಗೆ ನೀರು ನುಗ್ಗಿ ಜನಜೀವನಕ್ಕೆ ಸಮಸ್ಯೆಯಾಗಿದೆ.

ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಕರಾವಳಿ ಭಾಗದಲ್ಲಿ ಮಳೆಗಿಂತಲೂ ಗಾಳಿಯ ಅಬ್ಬರವೇ ಜೋರಾಗಿದೆ. ಗಾಳಿಯ ಹೊಡೆತಕ್ಕೆ ಕಾರವಾರದ ಕೆಎಎಸ್​ಆರ್​ಟಿಸಿ ಡಿಪೋ ಬಳಿ ಬೃಹತ್‌ ಗಾತ್ರದ ಮರ ಧರಾಶಾಹಿಯಾಗಿದೆ. ಹೀಗಾಗಿ ಕೆಲ ಕಾಲ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದೆ.

ಇದನ್ನೂ ಓದಿ: ತೌಕ್ತೆ ಹೊಡೆತಕ್ಕೆ ಆಳ ಸಮುದ್ರದಲ್ಲಿ ಸಿಲುಕಿದ ಎರಡು ಬೋಟ್​ಗಳು; 5 ಮಂದಿ ನಾಪತ್ತೆ

ಕಾರವಾರದ ಹಾರವಾಡ ಹಾಗೂ ಮಾಜಾಳಿಯಲ್ಲಿ ತಡರಾತ್ರಿ ಬೃಹತ್ ಅಲೆಗಳು ಅಪ್ಪಳಿಸಿದ್ದು ಸಮುದ್ರ ತೀರದ ಮನೆಗಳಿಗೆ ನೀರು ನುಗ್ಗಿತು. ಹೀಗಾಗಿ ಜನರು ಪರದಾಡುವಂತಾಯಿತು. ಸಮುದ್ರ ತೀರದಲ್ಲಿದ್ದ ದೋಣಿಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಹಾನಿಗೊಳಗಾಗಿವೆ. ಕಡಲ ತೀರದ ನಿವಾಸಿಗಳು ರಾತ್ರಿಪೂರ್ತಿ ನಿದ್ದೆಗೆಟ್ಟು ಭಯದಲ್ಲೇ ಸಮಯ ಕಳೆಯುವಂತಾಗಿತ್ತು. ಘಟ್ಟದ ಮೇಲ್ಬಾಗದಲ್ಲಿಯೂ ಗಾಳಿಯ ಆರ್ಭಟ ಜೋರಾಗಿದೆ. ರಾತ್ರಿಯಿಂದಲೇ ಹಲವೆಡೆ ವಿದ್ಯುತ್ ಕಡಿತಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.