ETV Bharat / state

ಕಾಮನ್​ವೆಲ್ತ್ ಗೇಮ್ಸ್ ವಿಜೇತರ ಹೆಸರು ಗೊತ್ತಿಲ್ಲದವರು ಅಥ್ಲೆಟಿಕ್ಸ್ ಅಧ್ಯಕ್ಷರಾಗಿರೋದು ದುರಂತ: ಕಾಶಿನಾಥ ನಾಯ್ಕ

author img

By

Published : Aug 10, 2021, 7:22 PM IST

Updated : Aug 10, 2021, 8:27 PM IST

ನೀರಜ್ ಚೋಪ್ರಾ ಕೋಚ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಥ್ಲೆಟಿಕ್​ ಕಾಶಿನಾಥ ನಾಯ್ಕ ಅವರು, ನನ್ನ ಹೆಸರು ಅಥ್ಲೆಟಿಕ್​ ಅಧ್ಯಕ್ಷರಾಗಿರುವ ಅಡಿಲ್ಲೆ ಸುಮರಿವಾಲ್ಲಾ ಅವರಿಗೆ ಗೊತ್ತಿಲ್ಲದೆ ಇರೋದು ದುರಂತ. ಇವರಿಗೆ ಕಾಮನ್‌ವೆಲ್ತ್ ಗೇಮ್ಸ್​​ನಲ್ಲಿ ಪದಕ ಪಡೆದವರ ಹೆಸರೇ ಗೊತ್ತಿಲ್ಲ ಎಂಬುದು ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

athletic-kashinath-naik
ಕಾಶಿನಾಥ ನಾಯ್ಕ

ಕಾರವಾರ: ಕಾಮನ್‌ವೆಲ್ತ್ ಗೇಮ್ಸ್ ಪದಕ ಗೆದ್ದವರ ಹೆಸರೇ ಗೊತ್ತಿಲ್ಲದವರು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷರೋ ಅಥವಾ ಹೊರ ದೇಶದ ಅಧ್ಯಕ್ಷರೋ ಎಂದು ಕಾಶಿನಾಥ ನಾಯ್ಕ ಬೇಸರದ ಜೊತೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನೀರಜ್​​ 'ಕೋಚ್​​' ಕುರಿತು ಕಾಶಿನಾಥ ನಾಯ್ಕ ಸ್ಪಷ್ಟನೆ

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ನನ್ನ ಹೆಸರು ಅಡಿಲ್ಲೆ ಸುಮರಿವಾಲ್ಲಾ ಅವರಿಗೆ ಗೊತ್ತಿಲ್ಲದೆ ಇರೋದು ದುರಂತ. ಇವರಿಗೆ ಕಾಮನ್‌ವೆಲ್ತ್ ಗೇಮ್ಸ್​​ನಲ್ಲಿ ಪದಕ ಪಡೆದವರ ಹೆಸರೇ ಗೊತ್ತಿಲ್ಲ ಎಂಬುದು ನೋವುಂಟು ಮಾಡಿದೆ. ಅಲ್ಲದೆ ಆಶ್ಚರ್ಯದ ಜೊತೆ ಜೊತೆಗೆ ನಗು ಕೂಡ ಬಂದಿದೆ. ಇವರು ನಿಜವಾಗಲೂ ಅಥ್ಲೆಟಿಕ್ಸ್ ಅಧ್ಯಕ್ಷರಾ? ಇಲ್ಲ ಹೊರ ದೇಶದ ಅಧ್ಯಕ್ಷರಾ ಅನ್ನೊಂದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರಜ್​​ 'ಕೋಚ್​​' ಕುರಿತು ಸ್ಪಷ್ಟವಾಗಿ ಹೇಳಿದ್ದೇನೆ: ನಾನು 2015-2017 ರವರೆಗೆ ಕೋಚ್ ಆಗಿರುವ ಬಗ್ಗೆ ಹೇಳಿದ್ದೇನೆ. ಅಲ್ಲದೆ ನನ್ನ ನಂತರ ವಿದೇಶಿ ಕೋಚ್​ಗಳು ಅವರನ್ನು ತರಬೇತಿಗೊಳಿಸಿದ ಬಗ್ಗೆಯೂ ಸ್ಪಷ್ಟವಾಗಿ ತಿಳಿಸಿದ್ದೇನೆ. ಆದರೆ ಈ ನಡುವೆ ಅಥ್ಲೆಟಿಕ್ಸ್ ಫೆಡರೇಷನ್ ಆಪ್ ಇಂಡಿಯಾದ ಅಧ್ಯಕ್ಷ ಅಡಿಲ್ಲೆ ಸುಮರಿವಾಲ್ಲಾ ಅವರು ಕಾಶಿನಾಥ ನಾಯ್ಕ ಯಾರೆಂಬುದೇ ಗೊತ್ತಿಲ್ಲ ಎಂದು ಹೇಳಿರುವುದು ಬೇಸರ ತಂದಿದೆ ಎಂದರು.

ನನ್ನ ಬಳಿ ದಾಖಲೆಗಳಿವೆ: ಕಾಮನ್ ವೆಲ್ತ್ ಗೇಮ್ಸ್​ನಲ್ಲಿ ಕಂಚಿನ ಪದಕ ಪಡೆದ ಬಗ್ಗೆ ಹಾಗೂ ನಾನು ಕೋಚ್ ಆಗಿರುವ ಬಗ್ಗೆ ಗೊತ್ತಿಲ್ಲದೆ ಇದ್ದಲ್ಲಿ ಹುಡುಕಿ ನೋಡಲಿ. ನನ್ನ ಬಳಿ ಎಲ್ಲ ದಾಖಲೆಗಳಿವೆ ಎಂದು ಕಾಶಿನಾಥ್​ ನಾಯ್ಕ್​ ಅವರು ಸ್ಪಷ್ಟಪಡಿಸಿದ್ದಾರೆ.

Last Updated : Aug 10, 2021, 8:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.