ETV Bharat / state

ಅದ್ಧೂರಿ ಅಮೃತ ಮಹೋತ್ಸವ.. 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿದ ಮಿಲಿಂದ್

author img

By

Published : Aug 13, 2022, 10:32 AM IST

ಕಾರವಾರ ತಾಲೂಕಿನ ಕಡವಾಡದ ಕಲಾವಿದ ಮಿಲಿಂದ್ ಅಣ್ವೇಕರ್ ಅವರು 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ 35 ಗ್ರಾಂ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿ ದೇಶಪ್ರೇಮ ಮೆರೆದಿದ್ದಾರೆ.

ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ
parliament house

ಕಾರವಾರ: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ಅಕ್ಕಸಾಲಿಗರೊಬ್ಬರು ಬೆಳ್ಳಿಯಲ್ಲಿ ಸಂಸತ್ ಭವನ ಹೋಲುವ ಪುಟ್ಟ ಕಲಾಕೃತಿಯನ್ನ ರಚಿಸಿ ಗಮನ ಸೆಳೆದಿದ್ದಾರೆ. ಕಾರವಾರ ತಾಲೂಕಿನ ಕಡವಾಡದ ಮಿಲಿಂದ್ ಅಣ್ವೇಕರ್ ಸಂಸತ್ ಭವನವನ್ನ ಸುಂದರವಾಗಿ ಬೆಳ್ಳಿಯಲ್ಲಿ ಕೆತ್ತಿದ ಕಲಾಕಾರ.

ಐದು ದಿನಗಳಲ್ಲಿ ಸುಮಾರು 35 ಗ್ರಾಂ ತೂಕದ ಬೆಳ್ಳಿಯಲ್ಲಿ ಕಲಾಕೃತಿ ತಯಾರಿಸಲಾಗಿದೆ. ಎರಡು ಇಂಚು ಅಗಲ, ಒಂದೂವರೆ ಇಂಚು ಉದ್ದದ ಈ ಬೆಳ್ಳಿಯ ಕಲಾಕೃತಿ, ಥೇಟ್ ಸಂಸತ್ ಭವನದಂತೆಯೇ ಗೋಚರವಾಗುತ್ತದೆ. ಸಂಸತ್ ಭವನದಂತೆಯೇ ಕಮಾನುಗಳು, ಮೆಟ್ಟಿಲು, ಭವನದ ಮೇಲೆ ಧ್ವಜವನ್ನೂ ನಿರ್ಮಿಸಲಾಗಿದೆ.

ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿದ ಮಿಲಿಂದ್ ಅಣ್ವೇಕರ್

ಈ ಹಿಂದೆ ಒಂದು ಗ್ರಾಂ ಗಿಂತ ಕಡಿಮೆ (0.960 ಗ್ರಾಂ) ಚಿನ್ನದಲ್ಲಿ ತೆಂಡೂಲ್ಕರ್ ಚೈನ್ ತಯಾರಿಸಿ ಲಿಮ್ಕಾ ದಾಖಲೆ ಮಾಡಿದ್ದ ಅಣ್ವೇಕರ್, ಇದಾದ ನಂತರದಲ್ಲಿ ತಿರುಗುವ ಪೆಂಡೆಂಟ್, 1.3 ಸೆಂ.ಮೀ. ಚಿನ್ನದ ಫ್ಯಾನ್, ಎಂಟು ಗ್ರಾಂ ಉಂಗುರದ ಮೇಲೆ ತಾಜ್ ಮಹಲ್, ಕಟ್ಟಿಗೆಯಲ್ಲಿ ಬಂಗಾರದ ಪೆಂಡೆಂಟ್, ಕೇವಲ 12 ಗ್ರಾಂ ಚಿನ್ನದಲ್ಲಿ ಹಂಪಿಯ ಕಲ್ಲಿನ ರಥದ ಮಾದರಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಬಂಗಾರ, ಬೆಳ್ಳಿ ಹಾಗೂ ತಾಮ್ರ ಮಿಶ್ರಿತ ಒಟ್ಟು 54 ಗ್ರಾಂ ತೂಕದ ಲೋಹದಿಂದ ಕೇದಾರನಾಥ ದೇವಾಲಯದ ಪುಟ್ಟ ಪ್ರತಿಕೃತಿ, 36 ಗ್ರಾಂ ಬೆಳ್ಳಿಯಲ್ಲಿ ವಿಜಯ ರಥ, ರಥವನ್ನೇ ಹೋಲುವ ಆಕಾಶಬುಟ್ಟಿ ತಯಾರಿಸಿ ಗಮನ ಸೆಳೆದಿದ್ದರು.

ಇದನ್ನೂ ಓದಿ: ಸ್ವಾತಂತ್ರ್ಯ ಅಮೃತ ಮಹೋತ್ಸವ: ತಿರಂಗಾ ಹಾರಿಸುವ ಮುನ್ನ, ಹಾರಿಸಿದ ನಂತರ ರಾಷ್ಟ್ರಧ್ವಜದ ಘನತೆ ಬಗ್ಗೆ ಎಚ್ಚರವಿರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.