ಭಟ್ಕಳದ ಕೋರ್ಟ್ನಲ್ಲಿ ಆಕಸ್ಮಿಕ ಬೆಂಕಿ : ದಾಖಲೆಗಳು ಅಗ್ನಿಗಾಹುತಿ

ಭಟ್ಕಳದ ಕೋರ್ಟ್ನಲ್ಲಿ ಆಕಸ್ಮಿಕ ಬೆಂಕಿ : ದಾಖಲೆಗಳು ಅಗ್ನಿಗಾಹುತಿ
ಸ್ಥಳಕ್ಕೆ ಭಟ್ಕಳ ನಗರ ಠಾಣೆ ಪಿಎಸ್‌ಐ ಸುಮಾ, ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ್ ಶಿವಪೂಜಿ, ಸಹಾಯಕ ಆಯುಕ್ತೆ ಮಮತಾ ದೇವಿ, ತಹಶೀಲ್ದಾರ್ ರವಿಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ..
ಭಟ್ಕಳ : ತಾಲೂಕಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಶುಕ್ರವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ದಾಖಲಾತಿ, ಕಡತಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ನಗರದಲ್ಲಿ ರಾತ್ರಿ ಭಾರಿ ಮಳೆ ಸುರಿದಿದೆ. ಇದರ ನಡುವೆ ಬೆಂಕಿ ಕಾಣಿಸಿದೆ. ಬೆಳಗ್ಗೆ ಪ್ರಾರ್ಥನೆಗೆ ತೆರಳುತ್ತಿರುವವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ನ್ಯಾಯಾಲಯದ ಮೇಲ್ಛಾವಣಿ ಸುಟ್ಟು ಹೋಗಿದೆ. ಜತೆಗೆ ಟೇಬಲ್, ಖುರ್ಚಿ, ಬೀರುಗಳು ಸೇರಿದಂತೆ ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಭಟ್ಕಳ ನಗರ ಠಾಣೆ ಪಿಎಸ್‌ಐ ಸುಮಾ, ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ್ ಶಿವಪೂಜಿ, ಸಹಾಯಕ ಆಯುಕ್ತೆ ಮಮತಾ ದೇವಿ, ತಹಶೀಲ್ದಾರ್ ರವಿಚಂದ್ರನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.
