ETV Bharat / state

ಅಜ್ಜೀಬಳದಲ್ಲಿ 15ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನ ಪತ್ತೆ

author img

By

Published : Jan 24, 2020, 4:21 PM IST

ಶಾಸನ ಕಲ್ಲಿನ ಶಿರೋ ಭಾಗ ತುಂಡಾಗಿದೆ. ಶಾಸನದ ಬಹು ಭಾಗ ತೃಟಿತಗೊಂಡಿದ್ದು ಓದಲು ಕಷ್ಟವಾಗಿದೆ. ಈ ಶಾಸನವು ನಾಲ್ಕು ಅಡಿ ಎತ್ತರ, ಎರಡೂವರೆ ಅಡಿ ಅಗಲ ಇದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ.

ಶಿಲಾ ಶಾಸನ , rock-inscriptio
ಶಿಲಾ ಶಾಸನ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜೀಬಳದಲ್ಲಿ ಇತ್ತೀಚೆಗೆ 15ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವೊಂದು ಪತ್ತೆ ಹಚ್ಚಲಾಗಿದೆ.

ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಬಾಲಕೃಷ್ಣ ಹೆಗಡೆ ಈ ಶಾಸನವನ್ನು ಪತ್ತೆ ಮಾಡಿದ್ದಾರೆ. ಶಾಸನವು ಹದಿನಾರು ಸಾಲುಗಳನ್ನು ಹೊಂದಿದ್ದು, ಇದು ಕನ್ನಡ ಲಿಪಿ ಭಾಷೆಯಲ್ಲಿದೆ. ಇದರ ಕಾಲ ಸುಮಾರು 15ನೇ ಶತಮಾನದ್ದಿರಬಹುದೆಂದು ಅಂದಾಜಿಸಲಾಗಿದೆ.

ಶಾಸನ ಕಲ್ಲಿನ ಶಿರೋ ಭಾಗ ತುಂಡಾಗಿದೆ. ಶಾಸನದ ಬಹು ಭಾಗ ತೃಟಿತಗೊಂಡಿದ್ದು ಓದಲು ಕಷ್ಟವಾಗಿದೆ. ಈ ಶಾಸನವು ನಾಲ್ಕು ಅಡಿ ಎತ್ತರ, ಎರಡೂವರೆ ಅಡಿ ಅಗಲ ಇದ್ದು, ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಇವುಗಳಲ್ಲಿ ಯುದ್ಧದ ಚಿತ್ರಗಳು, ಓರ್ವ ವೀರ ಮತ್ತು ಅವನ ಮಡದಿಯ ಚಿತ್ರ, ಸ್ತ್ರೀಯರು ಅವರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ಮೇಲಿನ ಮೊದಲ ಪಟ್ಟಿಕೆಯ ಬಲ ಭಾಗದಲ್ಲಿ ವೀರನೋರ್ವ ಕುಳಿತಿರುವ ಚಿತ್ರ, ಎಡ ಭಾಗದಲ್ಲಿ ನಂದಿ ಚಿತ್ರ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳನ್ನು ಕೆತ್ತಲಾಗಿದೆ.

ಕೆಳಗಿನ ಪಟ್ಟಿಕೆ ನೆಲದಲ್ಲಿ ಹೂತು ಹೋಗಿದೆ. ‘ಕರೂರು’, ‘ಶಂಕರ’ ಎಂಬಿತ್ಯಾದಿ ಪದಗಳು ಶಾಸನದಲ್ಲಿ ಗೋಚರಿಸುತ್ತಿದ್ದು, ಅಜ್ಜೀಬಳಿಗೆ ಅನತಿ ದೂರದಲ್ಲಿರುವ ಕರೂರು ಗ್ರಾಮವನ್ನೇ ಇಲ್ಲಿ ಉಲ್ಲೇಖ ಮಾಡಿರಬೇಕು ಎನ್ನಲಾಗ್ತಿದೆ. ಹಾಗೆಯೇ ಇತ್ತೀಚೆಗೆ ಜೀರ್ಣೋದ್ಧಾರವಾಗಿರುವ ಶ್ರೀ ಶಂಕರನಾರಾಯಣ ದೇವಸ್ಥಾನವನ್ನೇ ಈ ಹಿಂದೆ ಶಂಕರ ಎಂದು ಕರೆಯುತ್ತಿರಬಹುದು ಎಂಬುದು ಈ ಶಾಸನದಿಂದ ತಿಳಿದುಬರುತ್ತದೆ.

Intro:ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಅಜ್ಜೀಬಳದಲ್ಲಿ ಇತ್ತೀಚೆಗೆ 15ನೇ ಶತಮಾನಕ್ಕೆ ಸೇರಿದ ಶಿಲಾ ಶಾಸನವೊಂದನ್ನು ಇಲ್ಲಿಯ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಹೆಗಡೆ ಪತ್ತೆ ಮಾಡಿದ್ದಾರೆ. ಈ ಶಾಸನವು ಹದಿನಾರು ಸಾಲುಗಳನ್ನು ಹೊಂದಿದ್ದು, ಇದು ಕನ್ನಡ ಲಿಪಿ ಭಾಷೆಯಲ್ಲಿದೆ. ಇದರ ಕಾಲ ಸುಮಾರು 15ನೇ ಶತಮಾನದ್ದಿರಬಹುದೆಂದು ಅಂದಾಜಿಸಲಾಗಿದೆ.

ಶಾಸನ ಕಲ್ಲಿನ ಶಿರೋ ಭಾಗ ತುಂಡು ತುಂಡಾಗಿದೆ. ಶಾಸನದ ಬಹು ಭಾಗ ತೃಟಿತಗೊಂಡಿದ್ದು ಓದಲು ಕಷ್ಟವಾಗಿದೆ. ಈ ಶಾಸನವು ನಾಲ್ಕು ಅಡಿ ಎತ್ತರ, ಎರಡುವರೆ ಅಡಿ ಅಗಲ ಇದ್ದು ನಾಲ್ಕು ಪಟ್ಟಿಕೆಗಳನ್ನು ಹೊಂದಿದೆ. ಇವುಗಳಲ್ಲಿ ಯುದ್ಧದ ಚಿತ್ರಗಳು, ಓರ್ವ ವೀರ ಮತ್ತು ಅವನ ಮಡದಿಯ ಚಿತ್ರ. ಸ್ತ್ರೀಯರು ಅವರನ್ನು ಸ್ವರ್ಗಕ್ಕೆ ಕೊಂಡೊಯ್ಯುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ಮೇಲಿನ ಮೊದಲ ಪಟ್ಟಿಕೆಯ ಬಲ ಭಾಗದಲ್ಲಿ ವೀರನೊಬ್ಬ ಕುಳಿತಿರುವ ಚಿತ್ರ, ಎಡ ಭಾಗದಲ್ಲಿ ನಂದಿ ಚಿತ್ರ ಮಧ್ಯದಲ್ಲಿ ಶಿವಲಿಂಗದ ಚಿತ್ರಗಳನ್ನು ಕೆತ್ತಲಾಗಿದೆ.

Body:ಮೂರು ಪಟ್ಟಿಕೆಗಳಲ್ಲಿ ಶಾಸನವನ್ನು ಕೆತ್ತಲಾಗಿದೆ. ಈಗ ಮೇಲಿನ ಎರಡು ಪಟ್ಟಿಕೆಗಳು ಮಾತ್ರ ಗೋಚರಿಸುತ್ತವೆ. ಕೆಳಗಿನ ಪಟ್ಟಿಕೆ ನೆಲದಲ್ಲಿ ಹೂತು ಹೋಗಿದೆ. ‘ಕರೂರು’, ‘ಶಂಕರ’ ಎಂಬಿತ್ಯಾದಿ ಪದಗಳು ಗೋಚರಿಸುತ್ತಿದ್ದು, ಅಜ್ಜೀಬಳಿಗೆ ಅನತಿ ದೂರದಲ್ಲಿರುವ ಕರೂರು ಗ್ರಾಮವೇ ಇದು ಇದ್ದಿರಬೇಕು. ಶಂಕರ ಎಂದರೆ ಕರೂರಿನಲ್ಲಿರುವ ಇತ್ತೀಚೆಗೆ ಜೀರ್ಣೋದ್ಧಾರವಾಗಿರುವ ಶ್ರೀ ಶಂಕರನಾರಾಯಣ ದೇವಸ್ಥಾನವೇ ಇರಬೇಕು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಇನ್ನ ಮೇಲಷ್ಟೆ ಅದರ ಜೀರ್ಣೋದ್ಧಾರ ಕಾರ್ಯ ಆಗಬೇಕಿದೆ.
..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.