ETV Bharat / state

ಉಡುಪಿ: ಕೊಲೆ ಯತ್ನ ನಡೆಸಿದ್ದಾತನೇ ಆತ್ಮಹತ್ಯೆ ಮಾಡಿಕೊಂಡ

author img

By

Published : Jan 26, 2023, 7:27 PM IST

Updated : Jan 26, 2023, 7:59 PM IST

ಉಡುಪಿಯಲ್ಲಿ ಭಾವ ಹಾಗೂ ಸಹೋದರನ ಕೊಲೆಗೆ ಯತ್ನಿಸಿದ್ದ ಕೃಷ್ಣ ಎಂಬಾತ ತಾನೇ ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

Burnt Car
ಸುಟ್ಟುಹೋದ ಕಾರು

ಕೊಲೆ ಯತ್ನ ನಡೆಸಿದ್ದಾತನೇ ಆತ್ಮಹತ್ಯೆ ಮಾಡಿಕೊಂಡ

ಉಡುಪಿ: ಆಸ್ತಿ ವಿಚಾರದಲ್ಲಿ ಮನನೊಂದು ಇಬ್ಬರ ಕೊಲೆಯತ್ನ‌ ನಡೆಸಿದ ಆರೋಪಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ‌ ತಾಲೂಕು ಮುಂಡ್ಕೂರಿನಲ್ಲಿ ನಡೆದಿದೆ. ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರೊಟ್ಟುನಲ್ಲಿ ಈ ಘಟನೆ ನಡೆದಿದೆ. ಕಾರ್ಕಳ‌ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರೊಟ್ಟು ನಿವಾಸಿ ಕೃಷ್ಣ ಸಫಲಿಗ (46 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಆಸ್ತಿ ವಿಚಾರದಲ್ಲಿ ಮನನೊಂದು ತನ್ನ ಸಹೋದರ ಮತ್ತು ಭಾವನನ್ನು ಇದೇ ದಿನ ರಾತ್ರಿ ಪೆಟ್ರೋಲ್ ಸುರಿದು ಕೊಲೆಯತ್ನ ನಡೆಸಿದ್ದರು. ಆಕಸ್ಮಿಕವಾಗಿ ಸಣ್ಣ ಪುಟ್ಟ ಗಾಯಗಳೊಂದಿಗೆ ಇವರಿಬ್ಬರು ಪಾರಾಗಿದ್ದರು.

ನಂತರ ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಈತ ತನ್ನ ಮಾರುತಿ ಓಮಿನಿ ಕಾರನ್ನು ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಕಿ ಹಚ್ಚಿಕೊಂಡ ನಂತರ ಓಮಿನಿಯಿಂದ ಹೊರಗೆ ಅನತಿ ದೂರದಲ್ಲಿ ಬಿದ್ದು ಕೃಷ್ಣ ಸಪಲಿಗ ಸಾವನ್ನಪ್ಪಿದ್ದಾನೆ.

ನಿನ್ನೆ ರಾತ್ರಿ ತಮ್ಮನ ಮನೆಯಲ್ಲಿ ಮೆಂಹದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷ್ಣ ಸಫಲಿಗ, ಯಾವುದೋ ಕಾರಣಕ್ಕೆ ಮನನೊಂದು ಸಹೋದರ ಹಾಗೂ ಭಾವನನ್ನು ಕೊಲೆ ಮಾಡಲು ಯತ್ನಿಸಿದ್ದ ಎನ್ನಲಾಗಿದೆ. ನಂತರ ತಾನೂ ಕೂಡ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರ್ಕಳ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕಾರ್ಕಳ ತಾಲೂಕು ಸಚ್ಚರಿಪೇಟೆ ನಿವಾಸಿ ಪೂವಪ್ಪ ಅವರಿಗೆ ಐದು ಜನ ಗಂಡು ಮಕ್ಕಳು ಹಾಗೂ ಐದು ಜನ ಹೆಣ್ಣು ಮಕ್ಕಳು. ಇವರೆಲ್ಲರೂ ಕೂಡ ಪಿತ್ರಾರ್ಜಿತ ಆಸ್ತಿಯನ್ನು ಪಾಲು ಮಾಡ್ಕೋಬೇಕು ಎಂದು ನಿರ್ಧರಿಸಿದ್ದರು. ಆದರೆ, ಅದರ ರಿಜಿಸ್ಟ್ರೇಷನ್​ ಯಾವುದೂ​ ಆಗಿರಲಿಲ್ಲ. ಅದರಲ್ಲಿ ಒಬ್ಬ ಕೃಷ್ಣ ಸಫಲಿಗ ಎನ್ನುವವರು ಮನೆ ತನಗೆ ಬೇಕು ಎಂದು ಕೇಳಿದ್ದಾರೆ. ಆದರೆ ಅದು ರಿಜಿಸ್ಟರ್​ ಆಗಿರಲಿಲ್ಲ. ಮನೆ ರಿಜಿಸ್ಟ್ರೇಶನ್​​ ಮಾಡಿಕೊಡಿ ಎಂದು ಕೇಳಿದ್ದಾನೆ. ಆದರೆ ಅವರೆಲ್ಲ ಅದರ ರಿಜಿಸ್ಟ್ರೇಶನ್​​ ನೀನೇ ಮಾಡಿಕೊ ಎಂದು ಹೇಳಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಎಎಸ್ಪಿ​ ಸಿದ್ದಲಿಂಗಪ್ಪ ಟಿ, ’’ಈ ರಿಜಿಸ್ಟರ್​ ಮಾಡಿಕೊಳ್ಳುವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಸ್ವಲ್ಪ ಮಾನಸಿಕವಾಗಿ ಜರ್ಜರಿತವಾಗಿದ್ದನು. ನಿನ್ನೆ ರಾತ್ರಿ ಅವರ ಅಕ್ಕನ ಮಗಳ ಮದುವೆಯ ಮೆಹೆಂದಿ ಕಾರ್ಯಕ್ರಮ ಇತ್ತು. ಮನೆ ಮುಂದೆ ಶಾಮಿಯಾನ ಹಾಕಿದ್ದರು. ಎಲ್ಲರೂ ಮನೆ ಒಳಗೆ ಮಲಗಿದ್ದರೆ ಅವನ ತಮ್ಮ ಒಬ್ಬ ಹಾಗೂ ಅವನ ಭಾವ ಇಬ್ಬರು ಮನೆಯಿಂದ ಹೊರಗೆ ಶಾಮಿಯಾನದ ಅಡಿ ಮಲಗಿದ್ದರು. ಸಾಮಾನ್ಯವಾಗಿ ಈತ ತನ್ನ ಮಾರುತಿ ಓಮಿನಿಯ ಹಿಂದೆ ನೀರಿನ ಬಾಟಲಿಯಲ್ಲಿ ಪೆಟ್ರೋಲ್​ ತುಂಬಿಸಿಟ್ಟಿರುತ್ತಿದ್ದನು. ಅದನ್ನೇ ತೆಗೆದುಕೊಂಡು ಹೋಗಿ ತನ್ನ ತಮ್ಮ ಹಾಗೂ ಭಾವನ ಮೇಲೆ ಸಿಂಪಡಿಸಿ ಬೆಂಕಿ ಹಚ್ಚಿದ್ದಾನೆ‘‘ ಎಂದು ಹೇಳಿದರು.

ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಷ್ಟರಲ್ಲಿ ಅವರು ಬೊಬ್ಬೆ ಹಾಕಿದ್ದಾರೆ. ಎಲ್ಲರೂ ಓಡಿ ಬಂದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವನೂ ಕಾರಿನೊಳಗೆ ಕುಳಿತು ಪೆಟ್ರೋಲ್​ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟಿರುವಂತೆ ಕಂಡುಬಂದಿದೆ. ಜ್ವಾಲೆ ಹೆಚ್ಚಾದಾಗ ಕಾರಿನಿಂದ ಹೊರಗೆ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಸು ಹಾಗೂ ಪ್ರತಿಕೇಸು ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಾಲ್ಕು ಕಡೆ ಡೆತ್​ನೋಟ್​ ಬರೆದು ಅಂಟಿಸಿದ್ದಾನೆ. ಅದರಲ್ಲಿ ಕೆಲವರ ಹೆಸರೂ ಕೂಡ ಬರೆದಿಟ್ಟಿದ್ಧಾನೆ. ಈಗ ಪ್ರಕರಣ ದಾಖಲಾಗಿದೆ. ತನಿಖೆಯಲ್ಲಿ ಹೆಚ್ಚಿನ ವಿಷಯ ಗೊತ್ತಾಗಲಿದೆ ಎಂದು ಎಎಸ್ಪಿ​ ಸಿದ್ದಲಿಂಗಪ್ಪ ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಏಳು ಜನರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​: ಸಂಬಂಧಿಕನಿಂದಲೇ ಕೊಲೆ?

Last Updated : Jan 26, 2023, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.