ETV Bharat / state

ಹಿಜಾಬ್- ಕೇಸರಿ ವಿವಾದ- ಎನ್​​​ಐಎ ತನಿಖೆ ಆಗಬೇಕು: ಶಾಸಕ ರಘುಪತಿ ಭಟ್

author img

By

Published : Feb 11, 2022, 3:24 PM IST

ಉಡುಪಿ ಕಾಲೇಜಿನಿಂದ ಆರಂಭವಾದ ಹಿಜಾಬ್ ​ ​- ಕೇಸರಿ ಶಾಲು ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಹಿಂದೆ ಹಲವರ ಕೈವಾಡ ಇರುವ ಶಂಕೆಯಿದ್ದು, ಎನ್​​​ಐಎ ತನಿಖೆಗೆ ನಡೆಸಬೇಕೆಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.

Raghupati Bhatt requseted for NIA investigation on controversy
ಎನ್​​​ಐಎ ತನಿಖೆಗೆ ಶಾಸಕ ರಘುಪತಿ ಭಟ್ ಆಗ್ರಹ

ಉಡುಪಿ: ಹಿಜಾಬ್- ಕೇಸರಿ ವಿವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2021 ನವೆಂಬರ್​​​​​ನಲ್ಲಿ ವ್ಯೂಹ ರಚನೆ ಮಾಡಲಾಗಿದೆ. ಎಲ್ಲ ಯೋಜನೆ ಮಾಡಿ ಹೋರಾಟ ಗಲಭೆ ಎಬ್ಬಿಸಲಾಗಿದೆ.ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಾಗಿದೆ. ಎನ್​​​ಐಎ ತನಿಖೆಗೆ ಒತ್ತಾಯ ಮಾಡುತ್ತೇನೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಎನ್​​​ಐಎ ತನಿಖೆಗೆ ಶಾಸಕ ರಘುಪತಿ ಭಟ್ ಆಗ್ರಹ

ಇಷ್ಟು ದಿನ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬೆಂಬಲ ನೀಡಿತ್ತು. ಯೂತ್​ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ​ಬಿ .ವಿ.ಶ್ರೀನಿವಾಸ್ ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ಇದರಿಂದ ರಾಜ್ಯದ ಜನತೆಗೆ ಕಾಂಗ್ರೆಸ್​ ನಿಲುವು ಏನೆಂದು ತಿಳಿಯುತ್ತದೆ. ನಾವು ಹಿಜಾಬ್ ಸಂಪೂರ್ಣ ಬ್ಯಾನ್ ಮಾಡಲು ಮುಂದಾಗಿಲ್ಲ. ತರಗತಿಗೆ ಹಿಜಾಬ್ ಬೇಡ ಎಂಬುದು ನಮ್ಮ ನಿಲುವಾಗಿತ್ತು ಎಂದರು.

ಉಡುಪಿಯಲ್ಲಿ ಆರಂಭವಾದ ವಿವಾದ ಇಡೀ ರಾಷ್ಟ್ರಕ್ಕೆ ವ್ಯಾಪಿಸಿದೆ. ಇದರ ಹಿಂದೆ ಅಂತಾರಾಷ್ಟ್ರೀಯ ಸಂಚು ಇರುವ ಬಗ್ಗೆ ಗುಮಾನಿ ಇದೆ. ಈ ಕುರಿತಂತೆ ಗೃಹ ಸಚಿವ ಆರಗ ಜ್ಞಾನೆಂದ್ರ ಅವರಿಗೆ ದೂರು ನೀಡುತ್ತೇನೆ. ಸಿಎಫ್ಐ, ಪಿಎಫ್ಐ ಸಂಘಟನೆಗೆ ವಿದ್ಯಾರ್ಥಿಗಳನ್ನು ದಾಳ ಮಾಡಲಾಗಿದೆ. ಎಬಿವಿಪಿ ಹೋರಾಟ ಆಗಿದ್ದು, ಒಂದು ವಿದ್ಯಾರ್ಥಿನಿಯ ಪರವಾಗಿ ನಡೆದಿದೆ ಎಂದರು.

ಹೈದರಾಬಾದ್​​, ಕೇರಳದಿಂದ ರಾಜ್ಯಕ್ಕೆ ಹಿಜಾಬ್ ಹೋರಾಟಕ್ಕಾಗಿ ಟ್ರೈನರ್ಸ್​​​​​​ರನ್ನು ಹೋರಾಟದ ಸಲಹೆ, ತರಬೇತಿಗಾಗಿ ನೇಮಕ ಮಾಡಿದ ಗುಮಾನಿ ಇದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ನಾನು ಈಗಾಗಲೇ ಪತ್ರ ಕೊಟ್ಟಿದ್ದೇನೆ. ಹಿಜಾಬ್ ವಿವಾದ ಸಂಪೂರ್ಣವಾಗಿ ತನಿಖೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದೇನೆ ಎಂದರು. ಜಿಲ್ಲೆಯ ಮುಸಲ್ಮಾನ ಮುಖಂಡರು ನಮ್ಮ ಜೊತೆ ಚೆನ್ನಾಗಿದ್ದಾರೆ.ಜಿಲ್ಲಾ ಮುಸ್ಲಿಂ ಮುಖಂಡರ ಜೊತೆ ಹಲವಾರು ಸಭೆಗಳು ಆಗಿದೆ.ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರ ಇರೋದು ಗೊತ್ತಾಗಿದೆ.ಈ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ‌ಎಂದರು.

ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿ ಮನೆಗೆ 'ಮಹಾ' ಕೈ ಶಾಸಕ ಭೇಟಿ: ಘೋಷಣೆ ಕೂಗಿದ್ದಕ್ಕೆ ಐಫೋನ್‌, ಸ್ಮಾರ್ಟ್‌ವಾಚ್‌ ಗಿಫ್ಟ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.