ETV Bharat / state

ಹಿಜಾಬ್​ ವಿಚಾರದಲ್ಲಿ ವಿದ್ಯಾರ್ಥಿನಿಯರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ : ಸಚಿವ ಶ್ರೀನಿವಾಸ ಪೂಜಾರಿ

author img

By

Published : Feb 20, 2022, 11:01 PM IST

ವರ್ಗ ಸಂಘರ್ಷಕ್ಕೆ ಪ್ರೇರಣೆ ಕೊಡುವವರ ಮಾತು ಕೇಳಬೇಡಿ. ವೋಟಿಗಾಗಿ, ಧರ್ಮಕ್ಕಾಗಿ ಪ್ರೇರೇಪಣೆ ಕೊಡುವವರ ಬಗ್ಗೆ ಕಿವಿಗೊಡಬೇಡಿ. ಧರ್ಮಾಂಧತೆಗೆ ಉತ್ತೇಜನ ಕೊಡುವ ಪ್ರಕ್ರಿಯೆ ನಿಲ್ಲಬೇಕು. ಸಮವಸ್ತ್ರ ಅಂದರೆ ಸಮಾನತೆಯ ಸಂಕೇತ. ಬುರ್ಖಾ ಮತ್ತು ಹಿಜಾಬ್ ಎಂಬ ಸಂವಿಧಾನಾತ್ಮಕ ವಿಚಾರವನ್ನು ಯಾರು ಪ್ರಶ್ನೆ ಮಾಡಿಲ್ಲ. ಕಾನೂನನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಎಳೆಯ ಮಕ್ಕಳು ಶಿಕ್ಷಣ ಕಲಿಯಲು ಶಾಲಾ-ಕಾಲೇಜಿಗೆ ಬರುತ್ತಾರೆ, ಹಿಜಾಬ್​​​ ವಿಚಾರದಲ್ಲಿ ಸರ್ಕಾರದ ಆದೇಶ, ಕೋರ್ಟ್ ಮಧ್ಯಂತರ ತೀರ್ಪು ಸ್ಪಷ್ಟವಾಗಿದೆ. ಮುಂದಿನ ಆದೇಶದವರೆಗೆ ಸಮವಸ್ತ್ರ ಮಾತ್ರ ಹಾಕಿಕೊಂಡು ಶಾಲಾ-ಕಾಲೇಜಿಗೆ ಬರಬೇಕೆಂದು ಕೋರ್ಟ್ ಹೇಳಿದೆ. ನ್ಯಾಯಾಲಯ ಹೇಳಿದ ನಂತರ ಕೇಸರಿ ಶಾಲುಗಳು ಕಾಣಿಸಿಕೊಂಡಿಲ್ಲ. ಹಿಜಾಬ್ ಹಾಕಿದ ಮಕ್ಕಳು ನಾವೆಲ್ಲ ಒಂದು ಎಂಬ ಭಾವನೆ ಹೊಂದಿದ್ದಾರೆ. ಆದರೆ ವಿದ್ಯಾರ್ಥಿನಿಯರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಸೇರಿದಂತೆ ಕೆಲ ಶಕ್ತಿಗಳು ಹಿಜಾಬ್ ವೈಭವೀಕರಿಸುತ್ತಿರುವುದು ದುರಾದೃಷ್ಟ. ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಒಟ್ಟಾಗಿ ಒಂದಾಗಿ ಬದುಕುವ ಸಂದೇಶ ನೀಡಿದ್ದಾರೆ. ಮುಸ್ಲಿಂ ಮಹಿಳೆಯರು ನನ್ನ ತಂಗಿಯರು ಎಂದು ತ್ರಿವಳಿ ತಲಾಖ್ ರದ್ದು ಮಾಡಲಾಯಿತು. ಮುಸಲ್ಮಾನ ಮಹಿಳೆಯರ ನೆಮ್ಮದಿಗಾಗಿ ತಲಾಖ್ ವಿರುದ್ಧ ಬಿಲ್ ತರಲಾಗಿದೆ. ಹಿಜಾಬ್ ಹೋರಾಟ ಮಾಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು ಎಂದರು.

ವರ್ಗ ಸಂಘರ್ಷಕ್ಕೆ ಪ್ರೇರಣೆ ಕೊಡುವವರ ಮಾತು ಕೇಳಬೇಡಿ. ವೋಟಿಗಾಗಿ, ಧರ್ಮಕ್ಕಾಗಿ ಪ್ರೇರೇಪಣೆ ಕೊಡುವವರ ಬಗ್ಗೆ ಕಿವಿಗೊಡಬೇಡಿ. ಧರ್ಮಾಂಧತೆಗೆ ಉತ್ತೇಜನ ಕೊಡುವ ಪ್ರಕ್ರಿಯೆ ನಿಲ್ಲಬೇಕು. ಸಮವಸ್ತ್ರ ಅಂದರೆ ಸಮಾನತೆಯ ಸಂಕೇತ. ಬುರ್ಖಾ ಮತ್ತು ಹಿಜಾಬ್ ಎಂಬ ಸಂವಿಧಾನಾತ್ಮಕ ವಿಚಾರವನ್ನು ಯಾರು ಪ್ರಶ್ನೆ ಮಾಡಿಲ್ಲ. ಕಾನೂನನ್ನು ಗೌರವಿಸುವ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ನ್ಯಾಯಾಲಯದ ಆದೇಶ ವಿರೋಧಿಸಲು ಕಾಂಗ್ರೆಸ್ ಪ್ರೇರೇಪಣೆ ಕೊಡುತ್ತಿದೆ. ನ್ಯಾಯಾಲಯ ಆದೇಶ ಉಲ್ಲಂಘನೆ ಚರ್ಚೆಗಳಾಗುತ್ತಿವೆ, ಇಂತಹ ಚರ್ಚೆಗಳಿಗೆ ಮುಸಲ್ಮಾನ ಸಮುದಾಯದ ವಿದ್ಯಾರ್ಥಿನಿಯರು ಅವಕಾಶ ಕೊಡಬಾರದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.

ಸಂವಿಧಾನಕ್ಕೆ ಗೌರವ ಕೊಟ್ಟು ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ :

ಉಡುಪಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಹೇಳಿಕೆ

ಇದೇ ವಿಚಾರವಾಗಿ ನಗರದಲ್ಲಿ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿದ್ದು, ಆರು ಜನ ವಿದ್ಯಾರ್ಥಿನಿಯರ ಹೋರಾಟ ರಾಜ್ಯ- ರಾಷ್ಟ್ರಕ್ಕೆ ವ್ಯಾಪಿಸಿದೆ. ಸಮವಸ್ತ್ರ ನೀತಿ ಸಂಹಿತೆ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಹಿಂದಿನಿಂದ ಇದೆ. ಹೈಕೋರ್ಟ್ ಮಧ್ಯಂತರ ತೀರ್ಪಿನಲ್ಲಿ ಸಮವಸ್ತ್ರ ಪಾಲಿಸಲು ಸೂಚಿಸಲಾಗಿದೆ, ಸಂವಿಧಾನಕ್ಕೆ, ಕೋರ್ಟಿಗೆ ಈ ದೇಶಕ್ಕೆ ಗೌರವ ಕೊಡಬೇಕು. ಕೋರ್ಟ್ ವಿರುದ್ಧ ಯಾರು ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ಸಂವಿಧಾನಕ್ಕೆ ಗೌರವ ಕೊಟ್ಟು ಕೇಸರಿ ಹುಡುಗರು ಹೋರಾಟದಿಂದ ಹಿಂದೆ ಸರಿದಿದ್ದಾರೆ. ಸಂವಿಧಾನದಲ್ಲಿ ನ್ಯಾಯ ಕೇಳುವವರು ಸಂವಿಧಾನದ ವಿರುದ್ಧ ನಡವಳಿಕೆ ಮಾಡುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಕಲ್ಮಶಗಳು ಇಲ್ಲ. ದೇಶ ವಿರೋಧಿ ಚಟುವಟಿಕೆ ನಡೆಸುವ ಸಂಘಟನೆಗಳ ಕುಮ್ಮಕ್ಕು ಇದೆ. ಇನ್ನಾದರೂ ಸಂವಿಧಾನಕ್ಕೆ ಕೋರ್ಟ್​ಗೆ ಗೌರವ ಕೊಟ್ಟು ನಡೆದುಕೊಳ್ಳಿ. ಸಂವಿಧಾನದ ಚೌಕಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವವಿದೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಿಯಮ ಮಾಡಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.