ETV Bharat / state

ಆದಿತ್ಯರಾವ್‌ ಕುಟುಂಬದ ಕುರಿತು ನೆರೆಮನೆ ನಿವಾಸಿಗಳು ಹೇಳೋದೇನು?

author img

By

Published : Jan 23, 2020, 9:17 AM IST

ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯರಾವ್ ಕುರಿತು​ ಅವರ ನೆರೆಮನೆಯವರು ಏನು ಹೇಳಿದ್ದಾರೆ ಅನ್ನೋದನ್ನು ನೋಡೋಣ.

mangalore-bomb-accused-neighbors-reaction
ಮಂಗಳೂರು ಬಾಂಬ್​ ಪ್ರಕರಣ

ಉಡುಪಿ : ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟಿರುವ ಪ್ರಕರಣದ ಆರೋಪಿ ಆದಿತ್ಯರಾವ್‌ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಮಣಿಪಾಲದ ಅನಂತನಗರದಲ್ಲಿರುವ ಆರೋಪಿ ಮನೆಯ ಹತ್ತಿರ ವಾಸವಾಗಿರೋ ನೆರೆಮನೆಯವರು ಪ್ರಕರಣದ ಕುರಿತು ಮಾತನಾಡಿದ್ದಾರೆ.

ಎಂಬಿಎ ಮತ್ತು ಬಿಇ ಪದವಿ ಪಡೆದಿದ್ದ ಆದಿತ್ಯನನ್ನು ನಾವು ನೋಡಿಯೇ ಕೆಲವು ವರ್ಷಗಳಾಗಿವೆ. ಆತನ ತಾಯಿ ನಮ್ಮ ಜೊತೆ ಬೆರೀತಾ ಇದ್ದರು. ತಂದೆಗೆ ಮಾತು ಕಡಿಮೆ. ಆದಿತ್ಯನನ್ನು ನೋಡಿ ಬಹಳ ವರ್ಷಗಳಾಗಿದ್ದವು. ಈ ಸುದ್ದಿ ಕೇಳಿ ತುಂಬಾ ಅಚ್ಚರಿಯಾಯ್ತು ಅಂತಾರೆ ನೆರೆಮನೆ ನಿವಾಸಿ ಪೂರ್ಣಿಮಾ.

ಆರೋಪಿ ಬಗ್ಗೆ ನೆರೆಮನೆಯ ನಿವಾಸಿಗಳು ಹೇಳೋದೇನು?

ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ. ಇವರು ಮಾತ್ರ ಅಂತಲ್ಲ, ಅನಂತನಗರದ ಬಹುತೇಕ ಮನೆಯವರು ಸ್ಥಿತಿವಂತರು. ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುವವರು. ಹೀಗಾಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಅವನ ತಾಯಿ ಅಪರೂಪಕ್ಕೆ ನೋಡಲು ಸಿಗುತ್ತಿದ್ದರು. ಆದರೆ ಆದಿತ್ಯರಾವ್‌ನನ್ನು ನೋಡಿ ಬಹಳ ವರ್ಷಗಳಾಗಿವೆ ಅನ್ನೋದು ಸ್ಥಳೀಯ ನಿವಾಸಿ ಗಣೇಶ್​ ರಾಜ್ ಮಾತು.​

Intro:ಉಡುಪಿ
ಬಾಂಬರ್ ಆದಿತ್ಯರಾವ್ ನೆರೆಮನೆವರು ಹೇಳಿದ್ದೇನು.

ಬಾಂಬರ್ ಆದಿತ್ಯ ರಾವ್ ಬಂಧನವಾಗಿದ್ದು ವಿಚಾರಣೆ ಮುಂದುವರಿದಿದ್ದು ಪೋಲಿಸರು ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ. ನಿನ್ನೆ ಸಂಜೆ ವೇಳೆ ಆದಿತ್ಯರಾವ್ ವರ್ಷದ ಹಿಂದೆ ವಾಸ ಮಾಡಿಕೊಂಡಿದ್ದ ಮನೆಯ ಬೀಗ ಒಡೆಯೋಕೆ ಪೋಲಿಸ್ ಟೀಮ್ ಬರುತ್ತೆ ಅನ್ನೋ ಊಹಾಪೋಹಗಳು ವ್ಯಕ್ತವಾಗಿತ್ತು. ಆದ್ರೆ ಪೋಲಿಸ್ ಇಲಾಖೆ ಈ ಬಗ್ಗೆ ಇವತ್ತಿನವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಉಡುಪಿಯ ಮಣಿಪಾಲದಲ್ಲಿರುವ ಮನೆಯಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಮಣಿಪಾಲದ
ಅನಂತನಗರದಲ್ಲಿರುವ ಆದಿತ್ಯ ರಾವ್ ಮನೆಯಲ್ಲಿ ಸದ್ಯ ಯಾರೂ ವಾಸ್ತವ್ಯ ಇಲ್ಪ.ಕೆಲವು ದಿನಗಳಿಂದ ಬಾಗಿಲು ಹಾಕಿರುವ ಮನೆ ಹತ್ತಿರ ವಾಸವಾಗಿರೋ ನೆರೆಮನೆಯವರು ಆದಿತ್ಯರಾವ್ ಕುಟುಂಬದ ಬಗ್ಗೆ ಕೆಲವು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರು ಏನಂತಾರೆ?

ಬಾಂಬರ್ ಆದಿತ್ಯ ರಾವ್ ನನ್ನು ಇತ್ತೀಚೆಗೆ ಸ್ಥಳೀಯರು ನೋಡಿಯೇ ಇಲ್ಲ.ಎಂಬಿಎ ಮತ್ತು ಬಿಇ ಪದವಿ ಪಡೆದಿದ್ದ ಆದಿತ್ಯನನ್ನು ನೆರೆಹೊರೆಯವರು ನೋಡಿಯೇ ಕೆಲವು ವರ್ಷಗಳಾಗಿವೆ ಅಂತಾರೆ ಪೂರ್ಣಿಮಾ ಭೋಜರಾಜ್.ಆದಿತ್ಯನ ತಾಯಿ ನೆರೆಮನೆಯವರ ಜೊತೆ ಬೆರೀತಾ ಇದ್ದರು.ತಂದೆಗೆ ಮಾತು ಕಡಿಮೆ.ಆದಿತ್ಯನನ್ನು ನೋಡಿ ಬಹಳ ವರ್ಷಗಳಾಗಿದ್ದವು.ಈ ಸುದ್ದಿ ಕೇಳಿ ತುಂಬಾ ಆಶ್ಚರ್ಯ ಆಗಿದೆ.

- ಪೂರ್ಣಿಮಾ ಭೋಜರಾಜ್ ,ನೆರೆಮನೆಯಾಕೆ

ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ.ಇವರು ಮಾತ್ರ ಅಂತಲ್ಲ ,ಅನಂತನಗರದ ಬಹುತೇಕ ಮನೆಯವರು ಸ್ಥಿತಿವಂತರು.ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುವವರು.ಹೀಗಾಗಿ ಅವರ ಪಾಡಿಗೆ ಅವರು ಇರುತ್ತಿದ್ದರು.ಆದಿತ್ಯನ ತಂದೆ ತಾಯಿ ಅಪರೂಪಕ್ಕೆ ನೋಡಲು ಸಿಗುತ್ತಿದ್ದರು.ಆದರೆ ಆದಿತ್ಯ ರಾವ್ ನನ್ನು ಸ್ಥಳೀಯರು ನೋಡಿ ಬಹಳ ವರ್ಷಗಳಾಗಿವೆ

- ಗಣೇಶ್ ರಾಜ್ ಸರಳಬೆಟ್ಟು ,ಸ್ಥಳೀಯ ನಿವಾಸಿBody:AditysConclusion:Adithya
ETV Bharat Logo

Copyright © 2024 Ushodaya Enterprises Pvt. Ltd., All Rights Reserved.