ETV Bharat / state

ಕುಂದಾಪುರ ತಾಲೂಕಿನ ಗುಳ್ವಾಡಿಯಲ್ಲಿ ಅಪರೂಪದ ಶಾಸನ ಪತ್ತೆ

author img

By

Published : Jun 28, 2019, 11:04 AM IST

Updated : Jun 28, 2019, 11:13 AM IST

ಪ್ರದೀಪ ಕುಮಾರ್ ಬಸ್ರೂರು ಎಂಬುವವರು ಸತತವಾಗಿ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಪುರಾತನ ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದು, ತಾಲೂಕಿನ ಗುಲ್ವಾಡಿ ಸೌಕೂರು ಕಂಬಳದ ಬಳಿ ಒಂದು ಹಾಗೂ ಶಂಕರನಾರಾಯಣ ಸಮೀಪ ಒಂದು ಶಾಸನ ಪತ್ತೆಯಾಗಿದೆ.

Udupi

ಕುಂದಾಪುರ: ತಾಲೂಕಿನ ಗುಲ್ವಾಡಿ ಸೌಕೂರು ಕಂಬಳದ ಗದ್ದೆಯ ಬಳಿ ಅಪರೂಪದ ಶಾಸನ ಪತ್ತೆಯಾಗಿದೆ.

ಅಪ್ಪಣ್ಣ ಶೆಟ್ಟಿ ಎನ್ನುವವರ ಮನೆಯ ಬಳಿಯಿರುವ ಬರದ್ಕಲ್ ಗದ್ದೆಯಲ್ಲಿ ಶಾಸನ ಪತ್ತೆಯಾಗಿದ್ದು, ಇದರ ಮೇಲೆ ಶಿವಲಿಂಗ, ಸೂರ್ಯ, ಚಂದ್ರ, ಆನೆ, ಲಿಂಗದ ಮೇಲೆ ಪುಷ್ಪವನ್ನು ಸಮರ್ಪಿಸುವ ಸನ್ನಿವೇಶ ಕಂಡು ಬಂದಿದೆ. ಶಾಸನದ ಮೇಲೆ ಅಕ್ಷರಗಳು ಕಂಡು ಬಂದಿದ್ದು, ಅಸ್ಪಷ್ಟವಾಗಿವೆ. ಇದನ್ನು ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹೆಚ್ಚಿದ್ದು, ಸಂಪೂರ್ಣ ಮಾಹಿತಿ ಅಧ್ಯಯನ ಬಳಿಕವಷ್ಟೆ ಲಭ್ಯವಾಗಲಿದೆ.

Udupi
ಶಿಲಾ ಶಾನಗಳನ್ನು ಪತ್ತೆ ಹಚ್ಚಿದ ಪ್ರದೀಪ ಕುಮಾರ್ ಬಸ್ರೂರು

ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ :
ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕರನಾರಾಯಣ ಸಮೀಪ ಮತ್ತೊಂದು ಶಾಸನ ಪತ್ತೆಯಾಗಿದ್ದು, ಭೋಗರಮಕ್ಕಿ ನವೀನ್ ಕುಲಾಲ್ ಎಂಬುವವರ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಶಾಸನ ಸಿಕ್ಕಿದೆ.

Udupi
ಶಂಕರನಾರಾಯಣ ಸಮೀಪ ಪತ್ತೆಯಾಗಿರುವ ವಿಜಯನಗರ ಕಾಲದ ಶಿಲಾ ಶಾಸನ

ಈ ಶಿಲಾ ಶಾಸನದ ಬಗ್ಗೆ ಪುರಾತತ್ವ ತಜ್ಞರಾದ ಪ್ರೋ.ಮುರುಗೇಶಿ ಅವರು ಮಾಹಿತಿ ನೀಡಿದ್ದು, ಶಾಸನಗಳಲ್ಲಿ ಸೂರ್ಯ, ಚಂದ್ರ, ದೀಪ, ನಂದಿ, ಶಿವ ಲಿಂಗ, ಆಂಜನೇಯನ ಕೆತ್ತನೆ ಇರುವುದು ವಿಶೇಷವಾಗಿದೆ. ಶಾಸನ ಪತ್ತೆ ಮಾಡಿದ ಪ್ರದೀಪ್​ ತಂಡಕ್ಕೆ ಪುರಾತತ್ವ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:ಕುಂದಾಪುರ ತಾಲೂಕಿನ ಗುಳ್ವಾಡಿ ಯಲ್ಲಿ ಅಪರೂಪ ಶಾಸನ ಪತ್ತೆ

ಕುಂದಾಪುರ:ಕುಂದಾಪುರ ತಾಲೂಕಿನ ಗುಳ್ವಾಡಿ ಸೌಕೂರು ಕಂಬಳ ಗದ್ದೆ ಬಳಿ ಬರದ್ಕಲ್ ಗದ್ದೆಯಲ್ಲಿ ಅತೀ ಅಪರೂಪವಾದ ಶಾಸನ ಪತ್ತೆಯಾಗಿದೆ.
ಶಾಸನದಲ್ಲಿ ಆನೆ ಶಿವ ಲಿಂಗದ ಮೇಲೆ ಪುಷ್ಪವನ್ನು ಸಮಪಿ೯ಸುವ ಸನ್ನಿವೇಶ ಇದೆ.ಶಾಸನದಲ್ಲಿ ಶಿವಲಿಂಗ,ಸೂರ್ಯ, ಚಂದ್ರ, ಅಕ್ಷರವು ಅಸ್ಪಷ್ಟವಾಗಿದೆ ಹಾಗೂ ಈ ಶಾಸನವು ಕೆಸರು ತುಂಬಿರುವ ಗದ್ದೆಯಲ್ಲಿ ಇರುವುದರಿಂದ ಸಂರಕ್ಷಿಸುವ ಕಾಯ೯ ವಾಗಬೇಕಿದೆ. ಅಲ್ಲದೆ ಅಪ್ಪಣ್ಣ ಶೆಟ್ಟಿ ಮನೆಯ ಬಳಿ ಇರುವ ಬರದ್ಕಲ್ ಗದ್ದೆಯಲ್ಲಿ ಸಹಾ ಶಾಸನ ಕಾಣಸಿಕ್ಕಿವೆ .ಸಂಪೂರ್ಣ ಮಾಹಿತಿ ಅಧ್ಯಯನ ಬಳಿಕವಷ್ಟೆ ಲಭ್ಯವಾಗಲಿದೆ.
ಈ ಶಾಸನವನ್ನು ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹೆಚ್ಚಿದ್ದು ಇವರಿಗೆ ಶಂಕರನಾರಾಯಣ ಪ್ರವೀಣ,ಅಪ್ಪಣ್ಣ ಶೆಟ್ಟಿ,ಸುರೇಂದ್ರ ಶೆಟ್ಟಿ ಗುಳ್ವಾಡಿ ಸಹಕರಿಸಿದ್ದಾರೆ.

ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

ಕುಂದಾಪುರ:ಶಂಕರನಾರಾಯಣ ಸಮೀಪದ ಭೋಗರಮಕ್ಕಿ ನವೀನ್ ಕುಲಾಲ್ ಇವರ ಅಡಿಕೆ ತೋಟದಲ್ಲಿ ವಿಜಯನಗರ ಕಾಲದ ಅಪರೂಪ ಹಾಗೂ ವಿಶೇಷ ಶಾಸನವನ್ನು ಪ್ರದೀಪ ಕುಮಾರ್ ಬಸ್ರೂರು ಇವರು ಪತ್ತೆ ಹಚ್ಚಿರುತ್ತಾರೆ..ಈ ಬಗ್ಗೆ ಪುರಾತತ್ವ ತಜ್ಞ ಪ್ರೋ!ಮುರುಗೇಶಿ ಶಿಲಾ ಶಾಸನದ ಬಗ್ಗೆ ಮಾಹಿತಿ ನೀಡಿದ್ದು
ಶಾಸನಗಳಲ್ಲಿ ಸೂರ್ಯ, ಚಂದ್ರ, ದೀಪ,ನಂದಿ,ಶಿವ ಲಿಂಗ,ಆಂಜನೇಯ ರ ಕೆತ್ತನೆ ಇರುವುದು ವಿಶೇಷವಾಗಿದೆ. ಶಿಲಾ ಶಾಸನ ಪತ್ತೆ ಮಾಡಿದ ಪ್ರದೀಪ ಕುಮಾರ್ ತಂಡಕ್ಕೆ ಆಸಕ್ತಿಗೆ ಪ್ರೋ! ಮುರುಗೇಶಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆBody:ಶಾಸನConclusion:ಶಾಸನ
Last Updated :Jun 28, 2019, 11:13 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.