ETV Bharat / state

ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ, ಉಡುಪಿ - ಮಣಿಪಾಲದಲ್ಲಿ ನೈಟ್​​​​ಕರ್ಫ್ಯೂ ಬೇಡ: ಶಾಸಕ ರಘುಪತಿ ಭಟ್

author img

By

Published : Apr 10, 2021, 5:08 PM IST

ಕೊರೊನಾ ಅಲೆ ಹೆಚ್ಚಾದ ಬೆನ್ನೆಲೆ ರಾಜ್ಯದ ಕೆಲವೆಡೆ ನೈಟ್​​ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ, ಉಡುಪಿ - ಮಣಿಪಾಲ ಭಾಗದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಬೇಡಿ ಎಂದು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

mla-raghupathi-batt
ಶಾಸಕ ರಘುಪತಿ ಭಟ್

ಉಡುಪಿ: ಉಡುಪಿ, ಮಣಿಪಾಲ್ ನಗರದಲ್ಲಿ ನೈಟ್ ಕರ್ಫ್ಯೂ ಬೇಡ ಅಂತಾ ಉಡುಪಿ ಶಾಸಕ ರಘಪತಿ ಭಟ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಏಪ್ರಿಲ್, ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ದೈವದ ಕೋಲ, ನಾಗಾರಾಧನೆ, ಯಕ್ಷಗಾನ ನಡೆಯಲಿದೆ ಈ ಹಿನ್ನೆಲೆ ನೈಟ್​​ ಕರ್ಫ್ಯೂ ಬೇಡ ಎಂದಿದ್ದಾರೆ.

ಉಡುಪಿ - ಮಣಿಪಾಲದಲ್ಲಿ ನೈಟ್​​​​ಕರ್ಫ್ಯೂ ಬೇಡ ಎಂದು ಮನವಿ ಮಾಡಿದ ಶಾಸಕ ರಘುಪತಿ ಭಟ್

ಕಳೆದ ವರ್ಷ, ಕೋವಿಡ್ ಲಾಕ್​​ಡೌನ್‌ನಿಂದ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಯಲಿಲ್ಲ. ಸಾಕಷ್ಟು ಜನ ಸಂಕಷ್ಷಕ್ಕೆ ಒಳಗಾಗಿದ್ದಾರೆ, ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ದೈವದ ಕೋಲಗಳು ಮುಂಚಿತವಾಗಿ ನಿಗದಿಯಾಗಿರುತ್ತೆ. ನೈಟ್ ಕರ್ಫ್ಯೂ ಜಾರಿ ಆದರೆ, ರಾತ್ರಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ತೊಂದರೆ ಆಗುತ್ತದೆ. ಎಂಐಟಿ ಹೊರತು ಪಡಿಸಿದರೆ ಉಡುಪಿ ಮಣಿಪಾಲ್​​‌ನಲ್ಲಿ ಯಾವುದೇ ಆತಂಕವಿಲ್ಲ ಎಂದಿದ್ದಾರೆ.

ಎಂಐಟಿಯಲ್ಲಿ ಕಂಟೇನ್ಮೆಂಟ್​ ಝೋನ್ ಮಾಡಿ ಪಾಸಿಟಿವ್ ರೇಟ್ ಕಡಿಮೆ ಆಗಿದೆ. ಜಿಲ್ಲೆಯಲ್ಲಿ ಕೇವಲ 400 ಸಕ್ರೀಯ ಪ್ರಕರಣಗಳಿವೆ. ಕೇವಲ 59 ಮಂದಿ ಆಸ್ಪತ್ರೆಯಲ್ಲಿ ಇದ್ದು, ಯಾರೊಬ್ಬರೂ ಗಂಭೀರ ಸ್ಥಿತಿಯಲ್ಲಿಲ್ಲ. ಡೆತ್ ರೇಟ್ ಕಡಿಮೆ ಇದೆ. ಸರಾಸರಿ ಎರಡೂವರೆ ಸಾವಿರ ಟೆಸ್ಟ್ ಮಾಡುತ್ತಿದ್ದೇವೆ ಕೇವಲ 50 ರಿಂದ 60 ಪಾಸಿಟಿವ್ ಬರುತ್ತಿದೆ. ಹೀಗಾಗಿ ನೈಟ್ ಕರ್ಪ್ಯೂ ಜಾರಿ ಮಾಡದೇ, ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಡಿ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.