ETV Bharat / state

ಕೇಂದ್ರಕ್ಕೆ 45 ರೂಪಾಯಿಗೆ ಪೆಟ್ರೋಲ್ ನೀಡಲು ಸಾಧ್ಯವಿದೆ: ವೀರಪ್ಪ ಮೊಯ್ಲಿ

author img

By

Published : Oct 23, 2021, 10:56 AM IST

2014ರ ನಂತರ ತೈಲದ ಮೇಲಿನ ತೆರಿಗೆಯೂ ಹೆಚ್ಚಳವಾಗಿದೆ. ನಾವಿರುವಾಗ ಇದ್ದ ಸಿಲಿಂಡರ್ ದರ ಈಗ ದುಪ್ಪಟ್ಟಾಗಿದೆ. ಈ ಬಗ್ಗೆ ನಾನು ಹಲವು ಬಾರಿ ಹೇಳಿದ್ದೇನೆ. ತೈಲ ಬ್ಯಾರಲ್ ದರ ಇಳಿಕೆಯಾದರೂ ಸಹ ಕೇಂದ್ರ ಸರ್ಕಾರ ದರ ಇಳಿಸುತ್ತಿಲ್ಲ ಎಂದಿದ್ದಾರೆ.

veerappa-moily
ವೀರಪ್ಪ ಮೊಯ್ಲಿ

ಕಾರ್ಕಳ (ಉಡುಪಿ): ಕೇಂದ್ರ ಸರ್ಕಾರ ಮನಸು ಮಾಡಿದರೆ 45 ರೂಪಾಯಿಗೆ ಪೆಟ್ರೋಲ್ ನೀಡಬಹುದು. ನಾವು ಅಧಿಕಾರದಲ್ಲಿದ್ದರೆ ಲೀಟರ್​​ಗೆ ಇಷ್ಟೊಂದು ದುಬಾರಿ ದರ ಇರುತ್ತಿರಲಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕಾರ್ಕಳದಲ್ಲಿ ಮಾತನಾಡಿದ ಅವರು, ಕಳೆದ ಆರೇಳು ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ವಿಪರೀತ ಹೆಚ್ಚುತ್ತಿದೆ. ನಾವಿರುವಾಗ 350-400 ಇದ್ದ ಸಿಲಿಂಡರ್ ಬೆಲೆ ಈಗ ಸಾವಿರ ದಾಟಿದೆ. ಇದಲ್ಲದೆ ಯುಪಿಎ ಸರ್ಕಾರವಿದ್ದಾಗ ಬ್ಯಾರಲ್​​ಗೆ ಹೆಚ್ಚಿನ ದರ ಇತ್ತು. ಈಗ ಬ್ಯಾರಲ್ ದರ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಜನರಿಂದ ಕೋಟ್ಯಂತರ ರೂಪಾಯಿ ತೆರಿಗೆ ವಸೂಲಿ ಮಾಡುತ್ತಿದೆ ಎಂದರು.

ಕೇಂದ್ರಕ್ಕೆ 45 ರೂಪಾಯಿಗೆ ಪೆಟ್ರೋಲ್ ನೀಡಲು ಸಾಧ್ಯವಿದೆ: ವೀರಪ್ಪ ಮೊಯ್ಲಿ

ಗಾಂಧಿ ನಡಿಗೆ ಕಾರ್ಯಕ್ರಮ

ಕಾಂಗ್ರೆಸ್ ಪಕ್ಷವನ್ನು ತಳ ಮಟ್ಟದಿಂದ ಗಟ್ಟಿಗೊಳಿಸಲು, ಬೂತ್ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ ಬಲಪಡಿಸಲು ಗಾಂಧಿ ನಡಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ನನ್ನ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ನಡೆದಿದ್ದು ನವೆಂಬರ್​​​ನಲ್ಲಿ ಎಲ್ಲಾ ಕ್ಷೇತ್ರದಲ್ಲಿ ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ಮೊಯ್ಲಿ ತಿಳಿಸಿದರು.

ಇದನ್ನೂ ಓದಿ: ವಾಹನ ಸವಾರರ ಜೇಬಿಗೆ ಮತ್ತೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.