ETV Bharat / state

ತುಮಕೂರು: ಕಲ್ಪತರು ನಾಡಲ್ಲಿ 1932 ಮಂದಿ ಕ್ವಾರಂಟೈನ್

author img

By

Published : May 18, 2020, 8:33 AM IST

ಕ್ವಾರಂಟೈನ್​ ಆಗಿರುವ 1932 ಮಂದಿಯಲ್ಲಿ 801 ಮಂದಿಯನ್ನು ಶಂಕಿತರೆಂದು ಗುರುತಿಸಿ ಜಿಲ್ಲಾ ಆಸ್ಪತ್ರೆಯ ಐಸೋಲೋಷನ್ ವಾರ್ಡ್​ನಲ್ಲಿಇರಿಸಲಾಗಿದೆ. ಇದುವರೆಗೂ ಜಿಲ್ಲೆಯಾದ್ಯಂತ 7182 ಜನರ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಅದರಲ್ಲಿ ಈಗಾಗಲೇ 6483 ಮಂದಿಯ ವರದಿ ನೆಗೆಟಿವ್ ಬಂದಿದೆ. 650 ಮಂದಿಯ ಸ್ಯಾಂಪಲ್ ಗಳ ವರದಿ ಬರಬೇಕಿದೆ.

Tumkur: 1932 Quarantine in Kalpataru Nadu
ತುಮಕೂರು: ಕಲ್ಪತರು ನಾಡಲ್ಲಿ 1932 ಮಂದಿ ಕ್ವಾರಂಟೈನ್

ತುಮಕೂರು: ಕೋವಿಡ್19 ಸೋಂಕು ತಡೆಗಟ್ಟುವ ಹಿನ್ನೆಲೆ ಜಿಲ್ಲೆಯಲ್ಲಿ 1932 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಕ್ವಾರಂಟೈನ್​ ಆಗಿರುವ 1932 ಮಂದಿಯಲ್ಲಿ 801 ಮಂದಿಯನ್ನು ಶಂಕಿತರೆಂದು ಗುರುತಿಸಿ ಜಿಲ್ಲಾ ಆಸ್ಪತ್ರೆಯ ಐಸೋಲೋಷನ್ ವಾರ್ಡ್​ನಲ್ಲಿಇರಿಸಲಾಗಿದೆ. ಇದುವರೆಗೂ ಜಿಲ್ಲೆಯಾದ್ಯಂತ 7182 ಜನರ ಸ್ಯಾಂಪಲ್ ಗಳನ್ನು ಪಡೆಯಲಾಗಿದೆ. ಅದರಲ್ಲಿ ಈಗಾಗಲೇ 6483 ಮಂದಿಯ ವರದಿ ನೆಗೆಟಿವ್ ಬಂದಿದೆ. 650 ಮಂದಿಯ ಸ್ಯಾಂಪಲ್ ಗಳ ವರದಿ ಬರಬೇಕಿದೆ.

ಒಂದೇ ದಿನ 304 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 38 ಜನರ ಸ್ಯಾಂಪಲ್ ವರದಿಯನ್ನು ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಕೋವಿಡ್19 ಸೋಂಕು ಧೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ ಮೂವರು ಗುಣಮುಖರಾಗಿದ್ದಾರೆ. ಇನ್ನೂ ಆರು ಮಂದಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.