ಸಾವಿಗೆ ರಹದಾರಿಯಾದ ರಾಷ್ಟ್ರೀಯ ಹೆದ್ದಾರಿ 48: ತುಮಕೂರು ರಸ್ತೆಯಲ್ಲಿ ಸಾವಿರಾರು ಗುಂಡಿಗಳು

author img

By

Published : Sep 15, 2022, 2:34 PM IST

thousands of potholes on tumkur national highway

ತುಮಕೂರು ನಗರದಲ್ಲಿ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಮ ಗಾತ್ರದ ಗುಂಡಿಗಳದ್ದೇ ಕಾರುಬಾರು. ಕ್ಯಾತ್ಸಂದ್ರ ಬಳಿಯ ಜಾಸ್ ಟೋಲ್​ಗೇಟ್​ನಿಂದ ಶಿರಾ ಟೋಲ್​ಗೇಟ್​ ವರೆಗಿನ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ವಾಹನ ಸವಾರರಿಗೆ ನರಕದ ದರ್ಶನವಾಗುವುದಂತೂ ಗ್ಯಾರಂಟಿ.

ತುಮಕೂರು: ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿಗಳೇ ಸಾವಿನ ರಹದಾರಿಗಳಾಗಿವೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗುವ ಬೆಂಗಳೂರು - ಪುಣೆ ಸಂಪರ್ಕ ಕಲ್ಪಿಸೋ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 48 ಸಾವಿನ ರಸ್ತೆಯಾಗಿ ಪರಿವರ್ತನೆಯಾಗ್ತಿದೆ.

ಹೌದು, ಈ ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ರಾಜ್ಯದ ಬಹುತೇಕ ಜಿಲ್ಲೆಯ ಜನ ಇದೇ ಹೆದ್ದಾರಿ ಮೂಲಕ ರಾಜಧಾನಿಯನ್ನ ತಲುಪುತ್ತಾರೆ. ಆದ್ರೀಗ ಇದು ರಾಷ್ಟ್ರೀಯ ಹೆದ್ದಾರಿಯಾಗಿಲ್ಲ, ಸಾವಿನ ರಹದಾರಿಯಾಗಿದೆ. ಒಂದಲ್ಲ, ಎರಡಲ್ಲ ಸಾವಿರಾರು ಗುಂಡಿಗಳು ಈ ಮಾರ್ಗದಲ್ಲಿ ಕಾಣ ಸಿಗುತ್ತವೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತುಕೊಂಡು ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಗುಂಡಿ ಸಮೀಪ ಕುಳಿತು ನಿವೃತ್ತ ಸರ್ಕಾರಿ ನೌಕರನಿಂದ ಏಕಾಂಗಿ ಪ್ರತಿಭಟನೆ

ತುಮಕೂರು ಜಿಲ್ಲೆ ರಾಜಧಾನಿ ಬೆಂಗಳೂರಿನ ಹೆಬ್ಬಾಗಿಲು. ಹೀಗಾಗಿ, ಜಿಲ್ಲೆಯ ರಸ್ತೆಗಳಲ್ಲಿ ವಾಹನಗಳ ನಿರಂತರ ಓಡಾಟ ಇದ್ದೇ ಇರುತ್ತದೆ. ಒಂದೊಂದರ ಪಕ್ಕ ಒಂದರಂತೆ ಮೂರು ಪಥಗಳಿರುವ ಈ ಹೆದ್ದಾರಿಯಲ್ಲಿ ಬಹುತೇಕ ಭಾಗ ಹೊಂಡಗಳೇ ತುಂಬಿಕೊಂಡಿದ್ದು, ಸ್ವಲ್ಪ ಯಾಮಾರಿದ್ರೂ ಸವಾರರ ಜೀವಕ್ಕೆ ಕುತ್ತು.

ತುಮಕೂರು ರಸ್ತೆಯಲ್ಲಿ ಸಾವಿರಾರು ಗುಂಡಿಗಳು

ಕ್ಯಾತ್ಸಂದ್ರ ಬಳಿಯ ಜಾಸ್ ಟೋಲ್​ಗೇಟ್​ನಿಂದ ಶಿರಾ ಟೋಲ್​ಗೇಟ್​ ವರೆಗಿನ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಸುವ ಸವಾರರಿಗೆ ಸುಮಾರು 20 ಕಿಲೋ ಮೀಟರ್ ನರಕದ ದರ್ಶನವಾಗುದಂತೂ ಗ್ಯಾರಂಟಿ.

ಇದನ್ನೂ ಓದಿ: ಬೆಂಗಳೂರಲ್ಲಿ ಮುಗಿಯದ ರಸ್ತೆ ಗುಂಡಿ ಸಮಸ್ಯೆ.. ಹೊಸದಾಗಿ 4545 ರಸ್ತೆ ಗುಂಡಿಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.