ETV Bharat / state

ತುಮಕೂರು; ವಿದ್ಯಾರ್ಥಿಗಳ ಪೋಷಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪ: ಶಿಕ್ಷಕ ಅಮಾನತು

author img

By

Published : Jun 29, 2022, 10:49 AM IST

ವಿದ್ಯಾರ್ಥಿಗಳ ಪೋಷಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಮಧುಗಿರಿ ತಾಲೂಕಿನಲ್ಲಿ ಸಹಶಿಕ್ಷಕರನ್ನು ಅಮಾನತುಗೊಳಿಸಿ ಡಿಡಿಪಿಐ ಆದೇಶಿಸಿದ್ದಾರೆ.

school-teacher-suspended-on-charges-of-sending-lewd-messages
ತುಮಕೂರು: ಪೋಷಕರಿಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದ ಶಿಕ್ಷಕ ಅಮಾನತು

ತುಮಕೂರು: ವಿದ್ಯಾರ್ಥಿಗಳ ಮಹಿಳಾ ಪೋಷಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಮಧುಗಿರಿ ತಾಲೂಕಿನ ದೊಡ್ಡಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ. ಸಹಶಿಕ್ಷಕ ಎಂ.ಸುರೇಶ ಎಂಬುವರನ್ನು ಡಿಡಿಪಿಐ ಎಂ. ರೇವಣ್ಣ ಸಿದ್ದಪ್ಪ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವ್ಯಾಸಂಗ ದೃಢೀಕರಣ ಪತ್ರ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಲುಗೆಯಿಂದ ವರ್ತಿಸಿ ಅವರ ಮೊಬೈಲ್ ಸಂಖ್ಯೆ ಪಡೆದುಕೊಳ್ಳುತ್ತಿದ್ದ ಸಹಶಿಕ್ಷಕ, ಬಳಿಕ ನಿತ್ಯ ಎಸ್​ಎಂಎಸ್, ವಿಡಿಯೋ ಕಳುಹಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಅಶ್ಲೀಲ ಪದ ಬಳಸುತ್ತಾರೆ. ವಿದ್ಯಾರ್ಥಿಗಳನ್ನು ಮಾತನಾಡಿಸುವ ನೆಪದಲ್ಲಿ ಕರೆ ಮಾಡಿ ತಾಯಂದಿರ ಬಳಿ ಮಾತನಾಡುತ್ತಾರೆ ಎಂಬ ಆರೋಪ ಕೇಳಿಬಂದಿತ್ತು.

ಈ ಕುರಿತಂತೆ ಗ್ರಾಮಸ್ಥರು ಮಧುಗಿರಿ ಡಿಡಿಪಿಐಗೆ ತಿಂಗಳ ಹಿಂದೆಯೇ ಮನವಿ ಸಲ್ಲಿಸಿದ್ದರು. ತನಿಖೆ ನಡೆಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಡಿಪಿಐಗೆ ವರದಿ ನೀಡಿದ್ದರು, ಅದರನ್ವಯ ಸಹಶಿಕ್ಷಕ ಸುರೇಶ್ ಅಮಾನತುಗೊಂಡಿದ್ದಾರೆ.

ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತ: ನಿವೃತ್ತಿಗೆ ಒಂದು ದಿನ ಇರುವಾಗಲೇ ಪಿಎಸ್​ಐ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.