ಗಾಂಧೀಜಿ ಅಹಿಂಸಾ ಚಳವಳಿ ನಿಂತಾಗ ಬೇಸರಗೊಂಡು ಕಾಂಗ್ರೆಸ್ ತ್ಯಜಿಸಿದ್ರಂತೆ ಹೆಡ್ಗೇವಾರ್.. ರೋಹಿತ್ ಚಕ್ರತೀರ್ಥ ಹೇಳಿಕೆ..

author img

By

Published : May 28, 2022, 3:41 PM IST

rohit-chakra-theertha-said-hedgewar-was-originally-from-the-congress-party

ಗಾಂಧೀಜಿಯ ಅಹಿಂಸಾ ಚಳವಳಿ ಅರ್ಧಕ್ಕೆ ನಿಂತಾಗ ಬೇಸರಗೊಂಡು ಹೆಡ್ಗೇವಾರ್ ಕಾಂಗ್ರೆಸ್‌ನಿಂದ ಹೊರಕ್ಕೆ ಬರುತ್ತಾರೆ. ಹೆಡ್ಗೇವಾರ್ ಅವರು ಕಾಂಗ್ರೆಸ್ ಮೂಲದವರು. ಕಾಂಗ್ರೆಸ್ ಇತಿಹಾಸದಲ್ಲಿ ಹೆಡ್ಗೇವಾರ್ ಹೆಸರಿದೆ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ..

ತುಮಕೂರು : ಸ್ವಾತಂತ್ರ್ಯ ಪೂರ್ವದಲ್ಲಿ ನಾಗ್ಪುರದಲ್ಲಿ ನಡೆದಿದ್ದ ಕಾಂಗ್ರೆಸ್ ಸಮಾವೇಶವನ್ನು ಆಯೋಜನೆ ಮಾಡಿದ್ದು ಇದೇ ಹೆಡ್ಗೇವಾರ್. ಇದನ್ನು ಕಾಂಗ್ರೆಸ್‌ನವರೇ ಒಪ್ಪಿಕೊಳ್ಳುತ್ತಾರೆ. ಈ ಮೂಲಕ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಗಾಂಧೀಜಿ ಅಹಿಂಸಾ ಚಳವಳಿ ಅರ್ಧಕ್ಕೆ ನಿಂತಾಗ ಬೇಸರಗೊಂಡು ಹೆಡ್ಗೇವಾರ್ ಕಾಂಗ್ರೆಸ್‌ನಿಂದ ಹೊರಕ್ಕೆ ಬರುತ್ತಾರೆ. ಹೆಡ್ಗೇವಾರ್ ಅವರು ಕಾಂಗ್ರೆಸ್ ಮೂಲದವರು. ಕಾಂಗ್ರೆಸ್ ಇತಿಹಾಸದಲ್ಲಿ ಹೆಡ್ಗೇವಾರ್ ಹೆಸರಿದೆ ಎಂದು ಹೇಳಿದ್ದಾರೆ.

ಹೆಡ್ಗೇವಾರ್ ಮೂಲತಃ ಕಾಂಗ್ರೆಸ್ ಪಕ್ಷದವರು ಎಂದಿರುವ ರೋಹಿತ್ ಚಕ್ರತೀರ್ಥ..

ಹೆಡ್ಗೇವಾರ್ ಅವರ ಭಾಷಣವನ್ನು ಮಾತ್ರ ಪಾಠದಲ್ಲಿ ತೆಗೆದುಕೊಳ್ಳಲಾಗಿದೆ. ಯಾವುದೇ ಅಜೆಂಡಾ ಇಲ್ಲ. ಕೆಲವರು ಸೂಲಿಬೆಲೆಯವರು ಭಗತ್ ಸಿಂಗ್ ಬಗ್ಗೆ ಮಾತಾಡಿದರೆ ಒಪ್ಪಿಕೊಳ್ಳುವುದಿಲ್ಲ. ರಾಮಕೃಷ್ಣ ಅವರು ಮಾತಾಡಿದರೆ ಒಪ್ಪಿಕೊಳ್ತಾರೆ, ಇದು ಸಂಕುಚಿತ ಮನೋಭಾವನೆಯಾಗಿದೆ. ಪಾಠದಲ್ಲಿ ಭಗತ್ ಸಿಂಗ್ ಬಗ್ಗೆ ಸಮಗ್ರವಾಗಿ ಹೇಳಿದ್ದಾರೆ. ಯಾವ ಸಿದ್ದಾಂತದ ಬಗ್ಗೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

ದೇವನೂರು ಮಹಾದೇವರ ಪಠ್ಯ ಸೇರಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟದ್ದು : ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ಪಠ್ಯ ಸೇರಿಸೋದು ಬಿಡೋದು ಸರ್ಕಾರದ ವಿವೇಚನೆಗೆ‌ ಬಿಟ್ಟಿದ್ದಾಗಿದೆ. ಕೇವಲ ಶಿಫಾರಸು ಮಾಡುವುದು ಮಾತ್ರ ನಮ್ಮ ಕೆಲಸ ಎಂದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಓದಿ : ಕೋಡಿಹಳ್ಳಿ ಚಂದ್ರಶೇಖರ್ ಬಣ - ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.