ತುಮಕೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿವೆ 700 ರಸ್ತೆ ಗುಂಡಿಗಳು..

author img

By

Published : Sep 13, 2022, 4:40 PM IST

ತುಮಕೂರು

ತುಮಕೂರು ನಗರದ ಕ್ಯಾತ್ಸಂದ್ರ ಬಡಾವಣೆಯಿಂದ ಶಿರಾವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ತುಮಕೂರು: ನಗರದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರೋಬ್ಬರಿ 700 ಗುಂಡಿಗಳಿವೆ. ತುಮಕೂರು ನಗರದ ಕ್ಯಾತ್ಸಂದ್ರ ಬಡಾವಣೆಯಿಂದ ಶಿರಾವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಗುಂಡಿಗಳು ಇದ್ದು ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರು ಹಿಡಿ ಶಾಪ ಹಾಕುತ್ತಾ ಸಾಗುತ್ತಿದ್ದಾರೆ.

ಈ ಕುರಿತಂತೆ ರೈತ ಸಂಘ, ಕಾಂಗ್ರೆಸ್, ಕೈಗಾರಿಕೋದ್ಯಮಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಈ ರೀತಿ ಗುಂಡಿಗಳು ಕಾಣಿಸಿಕೊಂಡಿದ್ದು, ಗುಂಡಿಗಳನ್ನು ಮುಚ್ಚಲು ಸಹ ಹೆದ್ದಾರಿ ಪ್ರಾಧಿಕಾರದವರು ಗಮನಹರಿಸಿಲ್ಲ.

ಇದಲ್ಲದೇ ಈ ಮಾರ್ಗದಲ್ಲಿ ಇರುವ ಟೋಲ್ ಗೇಟ್ ಗುತ್ತಿಗೆದಾರರು ಕೂಡ ಈ ಗುಂಡಿಗಳನ್ನು ಮುಚ್ಚಲು ವಾಹನ ಸವಾರರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಕೊಟ್ಟಿಲ್ಲ. ಇದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಇದಲ್ಲದೇ ಜಿಲ್ಲಾ ಪೊಲೀಸ್ ಇಲಾಖೆಯೇ ಗುರುತಿಸಿರುವಂತೆ ಇಲ್ಲಿ ಅಪಘಾತ ವಲಯಗಳು ಕೂಡ ಇವೆ. ಇತ್ತೀಚಿಗೆ 206ರಲ್ಲಿ ಅಪಘಾತಗಳ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದನ್ನು ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇನ್ನು ಒಂದು ವಾರದೊಳಗೆ ಹೆದ್ದಾರಿಯಲ್ಲಿರುವ 700ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗುವುದು ಎಂದು ಭರವಸೆ ನೀಡಿದರು.

ಓದಿ: ಮೋದಿಗಾಗಿ ಸರಿಪಡಿಸಿದ ರಸ್ತೆಯಲ್ಲಿ ಹತ್ತೇ ದಿನದಲ್ಲಿ ಹೊಂಡ: ಇದೆಂಥಾ ಕಾಮಗಾರಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.