ETV Bharat / state

'10 ತಲೆ ರಾವಣ..' ಉಚ್ಛಾಟಿತ ಶಾಸಕ ಶ್ರೀನಿವಾಸ್‌ ವಿರುದ್ಧ ಸ್ಥಳೀಯ 'ಕೈ' ಮುಖಂಡರ ಆಕ್ರೋಶ

author img

By

Published : Dec 9, 2022, 7:05 PM IST

ಗುಬ್ಬಿ ವಿಧಾನಸಭಾ ಕ್ಷೇತ್ರದ ಉಚ್ಛಾಟಿತ ಜೆಡಿಎಸ್ ಶಾಸಕ ಶ್ರೀನಿವಾಸ್ ವಿರುದ್ಧ ಸ್ಥಳೀಯ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Poster released by congressman
ಕಾಂಗ್ರೆಸ್ಸಿಗರಿಂದ ಪೋಸ್ಟರ್ ಬಿಡುಗಡೆ

ತುಮಕೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆಸಿರುವ ಗುಬ್ಬಿ ವಿಧಾನಸಭಾ ಕ್ಷೇತ್ರದ ಉಚ್ಛಾಟಿತ ಜೆಡಿಎಸ್ ಶಾಸಕ ಶ್ರೀನಿವಾಸ್ ವಿರುದ್ಧ ಸ್ಥಳೀಯ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸ್ ಅವರನ್ನು ರಾವಣನಿಗೆ ಹೋಲಿಸಿ 10 ತಲೆ ಇರುವ ವಾಲ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. ಮಾನ, ಮೌಲ್ಯ ಇಲ್ಲದ ಹತ್ತು ಮುಖದ ರಾಜಕಾರಣಿಯ ಮುಖವಾಡ ಕಳಚೋಣ ಬನ್ನಿ ಎಂಬ ಸಂದೇಶ ಹರಡುತ್ತಿದ್ದಾರೆ.

ಜಂಟಿ ಸುದ್ದಿಗೋಷ್ಠಿ ನಡೆಸಿದ ಗುಬ್ಬಿ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಸನ್ನಕುಮಾರ್ ಹಾಗು ಹೊನ್ನಗಿರಿ ಗೌಡ, ಕಾಂಗ್ರೆಸ್ ಕಾರ್ಯಕರ್ತರನ್ನು ಎಸ್ ಆರ್ ಶ್ರೀನಿವಾಸ್ ಅಗೌರವಯುತವಾಗಿ ನಡೆಸಿಕೊಂಡಿದ್ದಾರೆ. ಸಂಸದ ಜಿ.ಎಸ್.ಬಸವರಾಜ್ ಕಾಂಗ್ರೆಸ್ ಬಿಟ್ಟು ಹೋದಾಗ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಕರೆದುಕೊಂಡು ಹೋದರು. ಆಗಿನಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ನಾವು ಎಂದರು.

ಕಳೆದ ಬಾರಿ ಸೋಲುವ ಭಯದಿಂದ ಬಾಲಾಜಿ ಕುಮಾರ್​ರನ್ನು ಕರೆತಂದು ಟಿಕೆಟ್ ಸಿಗುವ ಹಾಗೆ ಮಾಡಿ ನಂತರ ಚುನಾವಣೆ ಹತ್ತಿರ ಬಂದಾಗ ಅವರನ್ನೇ ಕಿಡ್ನಾಪ್ ಮಾಡಿಸಿದ್ದೀರಿ. ಕಾಂಗ್ರೆಸ್‌ನಿಂದ ಚುನಾವಣೆಗೆ ನಿಂತು ಗೆಲ್ಲಿ ನೋಡೋಣ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ನಾನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ನಿಮ್ಮನ್ನು ಸೋಲಿಸುವುದೇ ನಮ್ಮ ಗುರಿ. ಹೈಕಮಾಂಡ್ ಹೇಳಿದರೂ ಕೇಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆರ್​ಆರ್​ ನಗರಕ್ಕೆ ಮಂಜೂರಾಗಿದ್ದ 10 ಸಾವಿರ ಕೋಟಿ ರೂ ಎಲ್ಲಿ ಹೋಯ್ತು?: ಕಾಂಗ್ರೆಸ್​ ಪೋಸ್ಟರ್ ಪಾಲಿಟಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.