ETV Bharat / state

9 ನಂಬರ್ ಕಾರು ಕೊಟ್ರೆ ಬಳಸ್ತೀನಿ, ಇಲ್ಲದಿದ್ರೆ ನನ್ನ ಕಾರೇ ಬಳಸುವೆ: ನೂತನ ಸಚಿವ ನಾರಾಯಣಗೌಡ

author img

By

Published : Feb 7, 2020, 10:57 PM IST

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನೂತನ ಸಚಿವ ನಾರಾಯಣಗೌಡ.

new minister Narayanagowda demand for 9th number car
ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ

ತುಮಕೂರು: ಸರ್ಕಾರದಿಂದ ನೀಡುವ ಕಾರಿನಲ್ಲಿ 9ನೇ ನಂಬರ್ ಇದ್ದರೆ ಮಾತ್ರ ಬಳಸುತ್ತೇನೆ. ಆ ನಂಬರ್​ ಕಾರು ಸಿಗದಿದ್ದರೆ ನನ್ನಲ್ಲಿರುವ 9ನೇ ನಂಬರ್​ ಕಾರನ್ನೇ ಬಳಸುತ್ತೇನೆ ಎಂದು ನೂತನ ಸಚಿವ ನಾರಾಯಣ ಗೌಡ ಹೇಳಿದರು.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ನಂತರ ಸಚಿವರು ಸುದ್ದಿಗಾರರ ಜೊತೆ ಮಾತನಾಡಿ, ನಾನು ಉದ್ದೇಶಪೂರ್ವಕವಾಗಿ ಕಾರನ್ನು ನೋಡಲು ಹೋಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ

ಜೆಡಿಎಸ್​ನಲ್ಲಿ ಕುಮಾರಣ್ಣ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಹಾಗಾಗಿ ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಮಂಡ್ಯ ಜೆಡಿಎಸ್​​ನ ಭದ್ರಕೋಟೆಯಾಗಿತ್ತು. ಮುಂದಿನ ದಿನಗಳಲ್ಲಿ ಅದು ಬಿಜೆಪಿಯ ಭದ್ರಕೋಟೆ ಆಗಲಿದೆ ಎಂದು ಭವಿಷ್ಯ ನುಡಿದರು.

ಮಂಡ್ಯದಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಮುಚ್ಚಿ ಹೋಗಿ ನಾಲ್ಕು ವರ್ಷಗಳಾಗಿದೆ. ಅವುಗಳನ್ನು ಪುನರಾರಂಭ ಮಾಡುವುದೇ ಪ್ರಮುಖ ಕೆಲಸವಾಗಿದೆ. ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಶೀಘ್ರದಲ್ಲೇ ಈ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.