ETV Bharat / state

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಚರ್ಚೆ ಆಗಿಲ್ಲ: ಗೃಹ ಸಚಿವ ಪರಮೇಶ್ವರ್

author img

By ETV Bharat Karnataka Team

Published : Dec 18, 2023, 6:07 PM IST

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್​ ಹೆಸರಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ ಎಂದು ಗೃಹಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

Etv Bharat
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಸರ್ಕಾರದಲ್ಲಿ ಚರ್ಚೆ ಆಗಿಲ್ಲ : ಗೃಹ ಸಚಿವ ಪರಮೇಶ್ವರ್

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ವಿಚಾರ ಸರ್ಕಾರದಲ್ಲಿ ಚರ್ಚೆ ಆಗಿಲ್ಲ : ಗೃಹ ಸಚಿವ ಪರಮೇಶ್ವರ್

ತುಮಕೂರು : ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದಲ್ಲಿ ನಾಲ್ಕು ಏರ್​ಪೋರ್ಟ್​ಗಳಿಗೆ ಹೆಸರಿಡಲು ಸದನದಲ್ಲಿ ಅನುಮೋದನೆಯಾಗಿದೆ. ಅದು ಕೂಡ ಸದನಕ್ಕೆ ಬರಬೇಕು. ಅಂತಹ ಪ್ರಸ್ತಾಪ ಇದ್ದರೆ, ಅದನ್ನು ಸದನಕ್ಕೆ‌ ತರುತ್ತೇವೆ ಎಂದು ಹೇಳಿದರು. ಇದನ್ನು ಸದನದಲ್ಲಿ ಮಸೂದೆಯ ರೂಪದಲ್ಲಿ ತರಬೇಕು. ಅಸೆಂಬ್ಲಿಯಲ್ಲಿ ಈ ಬಿಲ್​ ಪಾಸಾಗಬೇಕು. ಅಲ್ಲಿ ಪರ ವಿರೋಧ ಮಾತನಾಡಬಹುದು ಎಂದು ಹೇಳಿದರು.

ಜಾತಿಗಣತಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ನಿನ್ನೆಯೂ ಪ್ರತಿಕ್ರಿಯೆ ನೀಡಿದ್ದೇನೆ. ಜಾತಿಗಣತಿ ವರದಿಯಲ್ಲಿ ಏನಿದೆ ಅಂತಾನೆ ಗೊತ್ತಿಲ್ಲವಲ್ಲ. ಯಾವ ಜಾತಿ ಎಷ್ಟಿದೆ, ಯಾವ ಜಾತಿಯವರು ಕಡಿಮೆ ಇದ್ದಾರೆ. ಅವರ ಅಂಕಿ - ಅಂಶಗಳನ್ನು ಯಾರಾದರೂ ಹೇಳಿದ್ದಾರಾ ಎಂದು ಕೇಳಿದರು. ನಾವು 170 ಕೋಟಿ ಖರ್ಚು ಮಾಡಿ ಒಂದು ಸಮೀಕ್ಷೆ ಮಾಡಿಸಿದ್ದೇವೆ. ಆ ಸಮೀಕ್ಷೆ ಹೊರಗಡೆ ಬರಬೇಕಲ್ಲ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲ್ಲೆಲ್ಲಿ ಬ್ಲಾಕ್ ಸ್ಪಾಟ್ ಗಳಿವೆ ಎಂದು ಪತ್ತೆ ಮಾಡಿ ಕ್ರಮಕೈಗೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯಿಂದ ಮಾಡ್ಬೇಕಾ, ಇಲ್ಲ PWD ಇಲಾಖೆಯಿಂದ ಮಾಡ್ಬೇಕಾ. ಎಲ್ಲವನ್ನೂ ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ತುಮಕೂರು ಎಸ್ ಪಿ ಅವರಿಗೂ ಸೂಚನೆ ಕೊಟ್ಟಿದ್ದೇನೆ. ನಮ್ಮ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹಳಷ್ಟು ಅಪಘಾತಗಳು ನಡೆಯುತ್ತಿವೆ. ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲೂ ಸುಮಾರು ಜನ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಾವು ಆಂತರಿಕ ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವು. ಎಡಿಜಿಪಿ ಅವರೇ ಸ್ಥಳಕ್ಕೆ ಭೇಟಿ ನೀಡಿ ಅಪಘಾತ ತಡೆಯಲು ಏನ್ ಕ್ರಮ ಮಾಡ್ಬೇಕು ಅದನ್ನು ಮಾಡಿದ್ದಾರೆ. ಇದಾದ ಮೇಲೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ರಾಹುಲ್ ಗಾಂಧಿ ಇಡೀ ದೇಶದಲ್ಲಿ ರಿಸರ್ವ್ ಕ್ಷೇತ್ರಗಳನ್ನು ಬಿಟ್ಟು ಎಲ್ಲಿ ಬೇಕಾದರೂ ನಿಲ್ಲಬಹುದು. ನಾನು ಅವರನ್ನು ಆಹ್ವಾನ ಮಾಡೋದೆ ಬೇಕಾಗಿಲ್ಲ. ರಾಹುಲ್ ಗಾಂಧಿ ಬರ್ತಾರೆ ಅಂದ್ರೆ ನಾವ್ಯಾರು ಬೇಡ ಅಂತೀವಾ ಎಂದರು.

ತುಮಕೂರಿನ ನೂತನ ಜಿಲ್ಲಾಧಿಕಾರಿಗೆ ತುಂಬಾ ಅನುಭವವಿದೆ. ಹಿಂದೆ ಜಿಲ್ಲಾ ಪಂಚಾಯತ್​ ಸಿಇಒ ಆಗಿದ್ದರು. ಯಾವುದೇ ತೊಂದರೆ ಆಗಲ್ಲ.
ಅಭಿವೃದ್ದಿ ಕೆಲಸ‌ ಮುಂದುವರೆಸುತ್ತೇವೆ. ತುಮಕೂರು ಬ‌ಹಳ‌ ವೇಗವಾಗಿ ಬೆಳೆಯುತ್ತಿದೆ. ಕಾರ್ಪೋರೇಷನ್ ಏರಿಯಾವನ್ನು ವಿಸ್ತರಿಸುತ್ತೇವೆ. ಡಿಸಿ - ಕಮಿಷನರ್​ಗೆ ಈ ಬಗ್ಗೆ ಯೋಜನೆ ತಯಾರಿಸಲು ಹೇಳಿದ್ದೇವೆ. ಈಗ ಭೀಮಸಂದ್ರದವರೆಗೂ ವಾರ್ಡ್ ವ್ಯಾಪ್ತಿಯಿದೆ, ಅದನ್ನು ಮಲ್ಲಸಂದ್ರವರೆಗೂ ವಿಸ್ತರಿಸುತ್ತೇವೆ. ತುಮಕೂರು ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿಕೊಂಡು ವಿಸ್ತರಣೆ ಮಾಡಲಾಗುವುದು ಎಂದರು.

ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರಗಳಿಲ್ಲ. ಎಲ್ಲವನ್ನು ವಿವರಿಸಿದ್ದೇವೆ. ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಹೇಳಿದ್ದೇವೆ. ಈಗಾಗಲೇ ಸದನದಲ್ಲಿ ಸಿಎಂ ಉತ್ತರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಹಣ ಒಂದು ರೂಪಾಯಿ ಬಂದಿಲ್ಲ.‌ ನೀವೇನು ಖರ್ಚು ಮಾಡಿದ್ದೀರಾ ಎಂದು ಹೇಳ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಇಲ್ಲಸಲ್ಲದ ಅಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : ಎಸ್ ಟಿ ಸೋಮಶೇಖರ್ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು: ಬಿ ಸಿ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.