ETV Bharat / state

ಮಳೆಗಾಗಿ ಕೆರೆಯಲ್ಲಿ ನಿಂತು ನಮಾಜ್​​

author img

By

Published : Aug 4, 2019, 9:21 AM IST

ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಸರಿಯಾಗಿ ಮಳೆಯಾಗದ ಕಾರಣ ತುಮಕೂರು ಜಿಲ್ಲೆ ದೊಡ್ಡ ಅಗ್ರಹಾರ ಗ್ರಾಮದ ಮುಸಲ್ಮಾನರು ಕೆರೆಯಲ್ಲಿ ನಿಂತು ನಮಾಜ್​​ ಮಾಡುವ ಮೂಲಕ ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಮಳೆಗಾಗಿ ಕೆರೆಯಲ್ಲಿ ನಿಂತು ನಮಾಜ್ ಮಾಡಿದ ಮುಸ್ಲಿಂ ಬಾಂಧವರು

ತುಮಕೂರು: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಸರಿಯಾಗಿ ಮಳೆಯಾಗದ ಕಾರಣ ಉತ್ತಮ ಮಳೆಗಾಗಿ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ ನಡೆಯಿತು.

ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಅಗ್ರಹಾರ ಗ್ರಾಮದ ಮುಸ್ಲಿಂ ಬಾಂಧವರು ಕೆರೆಯಲ್ಲಿ ನಿಂತು ನಮಾಜ್​​ ಮಾಡುವ ಮೂಲಕ ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಮಾತನಾಡಿ, ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ ಇದುವರೆಗೆ ಮಳೆ ಹನಿ ಭೂಮಿಗೆ ತಲುಪಿಲ್ಲ. ಇದರಿಂದಾಗಿ ನಾಡಿನಲ್ಲಿ ಬರದ ಛಾಯೆ ಮೂಡಿದೆ. ಪ್ರಕೃತಿಗೆ ಯಾವುದೇ ಜಾತಿ, ಧರ್ಮವಿಲ್ಲ. ಆ ದೇವರು ಕರುಣೆಯ ನೋಟ ಬೀರಿದರೆ ದೇಶ ಸುಭಿಕ್ಷವಾಗಲು ಕ್ಷಣ ಸಾಕು ಎಂದರು.

Intro:ಮಳೆಗಾಗಿ ಕೆರೆಯಲ್ಲಿ ನಿಂತು ನಮಾಜ್ ಮಾಡಿದ ಮುಸ್ಲಿಂ ಬಾಂಧವರು

ಶಿರಾ: ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ ಮಳೆ ಹನಿ ಮಾತ್ರ ಭೂಮಿಗೆ ಬರುತ್ತಿಲ್ಲ. ಹೀಗಾಗಿ ಮಳೆ ವಿಫಲವಾಗಿ ನಾಡಿನಲ್ಲಿ ಬರದ ಛಾಯೆ ಮುಂದುವರೆದಿದೆ. ನಾಡಿನಲ್ಲಿ ಸುಭಿಕ್ಷವಾಗಿ ಮಳೆಯಾಗಿ ಹೊಲಗಳಲ್ಲಿ ಸಮೃದ್ಧವಾದ ಬೆಳೆಯಾಗಲಿ ಎಂದು ಆಶಿಸಿ ಶಿರಾ ತಾಲ್ಲೂಕಿನ ದೊಡ್ಡ ಅಗ್ರಹಾರ ಗ್ರಾಮದ ಮುಸ್ಲಿಂ ಬಾಂಧವರು ವಿಶೇಷವಾಗಿ ನಮಾಜ್ ಮಾಡಿದರು.

ಗ್ರಾಮದ ಕೆರೆಯಂಗಳದಲ್ಲಿ ನಿಂತು ಮಳೆಗಾಗಿ ‘ಎರಡು ರಕಾತ್ ನಮಾಜ್’ ಮಾಡುವ ಮೂಲಕ ಪ್ರಾರ್ಥಿಸಿದರು.

ಪ್ರಕೃತಿಗೆ ಯಾವುದೇ ಜಾತಿ ಧರ್ಮವಿಲ್ಲ. ಆ ದೇವರ ಕರುಣೆಯ ಹೊನಲು ಹರಿದರೆ ದೇಶ ಸುಭಿಕ್ಷವಾಗಲು ಕ್ಷಣ ಸಾಕು ಎಂದರು.
ಪ್ರಾರ್ಥನೆಯಲ್ಲಿ ಮಸೀದಿಯ ಮೌಜನ್ ಸಬ್ದರ್ ಹುಸೇನ್ , ಮುತವಲ್ಲಿ ರೆಹಮಾನ್ ಸಾಬ್, ಕಾರ್ಯದರ್ಶಿ ಅಕ್ತರ್ ಸಾಬ್, ಪೇಷುಮಾಮ್ ಖಲೀಲುಲ್ಲಾ ಖಾನ್, ಮಲ್ಲಿಕ್ ರಹಮಾನ್, ಫಯಾಜ್ ಪಾಷ, ನಿಸಾರ್, ಜಬೀಉಲ್ಲಾ ಮತ್ತಿತರರು ಹಾಜರಿದ್ದರು.Body:TumakuruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.