ETV Bharat / state

ಜೆಡಿಎಸ್​ಗೆ ಮತ ಹಾಕುವಂತೆ ನನಗೆ ಕರೆ ಬಂದಿಲ್ಲ: ಶಾಸಕ ಎಸ್​. ಆರ್​ ಶ್ರೀನಿವಾಸ್

author img

By

Published : Jun 9, 2022, 3:51 PM IST

ನಾನು ಜೆಡಿಎಸ್​ಗೆ ಮತ ಹಾಕಬೇಕು ಅಂದುಕೊಂಡಿದ್ದೇನೆ. ಆದರೆ 40 ಗಂಟೆಗಳಲ್ಲಿ ಏನು ಬೇಕಾದರೂ ಆಗಬಹುದು ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್​. ಆರ್​ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಶಾಸಕ ಎಸ್​. ಆರ್​ ಶ್ರೀನಿವಾಸ್ ಅವರು ಮಾತನಾಡಿದರು
ಶಾಸಕ ಎಸ್​. ಆರ್​ ಶ್ರೀನಿವಾಸ್ ಅವರು ಮಾತನಾಡಿದರು

ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ನನಗೆ ಪಕ್ಷದಿಂದ ಯಾವುದೇ ಕರೆ ಬಂದಿಲ್ಲ. ಜೆಡಿಎಸ್​ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಮ್ಮ ಮನೆಗೆ ಬಂದಿದ್ದರು. ಸಹಾಯ ಕೇಳಿದ್ರು. ನಾನು ಮಾತಾಡ್ತಿನಿ ಅಂದಿದ್ದೇನೆ ಎಂದು ಗುಬ್ಬಿ ಶಾಸಕ ಎಸ್​. ಆರ್​ ಶ್ರೀನಿವಾಸ್ ಅವರು ತಿಳಿಸಿದ್ದಾರೆ.

ಶಾಸಕ ಎಸ್​. ಆರ್​ ಶ್ರೀನಿವಾಸ್ ಅವರು ಮಾತನಾಡಿದರು

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್​ ಶಾಸಕಾಂಕ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ನನ್ನ ಬಳಿ ಮಾತನಾಡಿಲ್ಲ. ರಾಜ್ಯಸಭೆ ಚುನಾವಣೆ ಕುರಿತು ಮಾತಾಡಿಲ್ಲ. ಅದಕ್ಕಿಂತ ಮೊದಲು ಮಾತಾಡಿದ್ರು. ಅವರು ಮತ ಹಾಕುವಂತೆ ಕೇಳಲ್ಲಾ ಅಂದುಕೊಂಡಿದ್ದೇನೆ. ನನ್ನ ಪರ್ಯಾಯ ನಾಯಕರನ್ನು ಈಗಾಗಲೇ ಅವರು ಹುಡುಕಿದ್ದಾರೆ ಎಂದರು.

ಹಾಗಾಗಿ, ಅವರಿಗೆ ನನ್ನ ಅವಶ್ಯಕತೆ ಇಲ್ಲ. ನಾನು ಜೆಡಿಎಸ್​ಗೆ ಮತ ಹಾಕಬೇಕು ಅಂದುಕೊಂಡಿದ್ದೇನೆ. ಆದರೆ 40 ಗಂಟೆಗಳಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯರು ವಿಶ್ಲೇಷಣೆ ಮಾಡಿದ ರೀತಿ ನನ್ನ ಆತ್ಮಸಾಕ್ಷಿ ಮತ ಇಲ್ಲ. ನಾನು ಕುಮಾರಸ್ವಾಮಿ ಹಾಗೂ‌ ನಿಖಿಲ್​​ಗೆ ಬೆನ್ನಿಗೆ ಚೂರಿ ಹಾಕಿದ್ದೇನಂತೆ ಎಂದು ಪಕ್ಷದ ನಾಯಕರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದರು.

ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ. ಡಿಸೆಂಬರ್​ವರೆಗೆ ಕಾದು ನೋಡ್ತಿನಿ. ರೆಸಾರ್ಟ್​ಗೆ ನಾನು ಹೋಗಲ್ಲ. ರೆಸಾರ್ಟ್​ಗೆ ಹೋಗಬೇಕಂತಿಲ್ಲ. ವಿಪ್ ಜಾರಿಯಾಗಿದೆ. ನಾಡಗೌಡರು ಜಾರಿ ಮಾಡಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಏನಾಗಿದೆ? ಎಂದು ಶಾಸಕ ಶ್ರೀನಿವಾಸ್​ ಪ್ರಶ್ನಿಸಿದರು.

ಓದಿ: 'ನಾನು ಬಿಜೆಪಿ ನಾಯಕರನ್ನು ಟೀಕಿಸಿದರೆ ಎಲ್ಲರೂ ನನ್ನ ಮೇಲೆ ಸೀಳುನಾಯಿಗಳ ರೀತಿ ಬೀಳುತ್ತಾರೆ'

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.