ತುಮಕೂರು: ಬಂದೂಕಿನಿಂದ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಡಿ. ಕೊರಟಗೆರೆ ಗ್ರಾಮದಲ್ಲಿ ನಡೆದಿದೆ.
![husband shoots wife](https://etvbharatimages.akamaized.net/etvbharat/prod-images/10210248_tumkur.jpg)
ಶಾರದಾ(28) ಹತ್ಯೆಯಾದ ದುರ್ದೈವಿ. ಈಕೆಯ ಪತಿ ಕೃಷ್ಣಯ್ಯ ನಾಡ ಬಂದೂಕನ್ನು ಬಳಸಿ ಗುಂಡು ಹಾರಿಸಿದ್ದಾನೆ. ನಂತರ ಶವದ ಬಳಿ ಕುಳಿತು ರೋದಿಸುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಬ್ಬೂರು ಪೊಲೀಸ್ ಠಾಣೆಯ ಸಿಬ್ಬಂದಿ ಕೃಷ್ಣಯ್ಯನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈತ ನಾಡ ಬಂದೂಕನ್ನು ಎಲ್ಲಿಂದ ತಂದಿದ್ದ ಎಂಬುದನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು, ಯಾವ ಉದ್ದೇಶಕ್ಕಾಗಿ ಗುಂಡು ಹಾರಿಸಿದ್ದಾನೆ ಎಂಬುದರ ಕುರಿತು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.