ETV Bharat / state

ಪುನೀತ್ ಅಭಿಮಾನ: ಕೇಶಮುಂಡನ ಮಾಡಿಸಿಕೊಂಡ ತಿಪಟೂರಿನ ಅಪ್ಪ-ಮಗ

author img

By

Published : Nov 5, 2021, 9:06 PM IST

ತಿಪಟೂರಿನ ವಿವೇಕಾನಂದ ನಗರದ ನಿವಾಸಿ ರವಿಕುಮಾರ್ ಹಾಗೂ ಅವರ ಮಗ ನಟರಾಜ ಎಂಬುವವರು ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ ಆರತಿ ಬೆಳಗಿ, ಎಡೆ ಇರಿಸಿದರು. ನಂತರ ವಿಧಿ-ವಿಧಾನದಂತೆ ಪೂಜೆ ಸಲ್ಲಿಸಿದರು.

father-and-son-tonsured-for-final-rites-of-punith-rajkumar
ಕೇಶಮುಂಡನ ಮಾಡಿಸಿಕೊಂಡ ಅಪ್ಪ-ಮಗ

ತುಮಕೂರು: ಚಿತ್ರನಟ ಪುನೀತ್ ರಾಜ್​ಕುಮಾರ್ ನಿಧನದ ಹಿನ್ನೆಲೆಯಲ್ಲಿ ತಿಪಟೂರಿನಲ್ಲಿ ಇಬ್ಬರು ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಂಡಿದ್ದಾರೆ.

ಕೇಶಮುಂಡನ ಮಾಡಿಸಿಕೊಂಡ ಪುನೀತ್ ರಾಜ್​ಕುಮಾರ್​ ಅಭಿಮಾನಿಗಳು

ತಿಪಟೂರಿನ ವಿವೇಕಾನಂದ ನಗರದ ನಿವಾಸಿ ರವಿಕುಮಾರ್ ಹಾಗೂ ಅವರ ಮಗ ನಟರಾಜ ಎಂಬುವವರು ಕೇಶಮುಂಡನ ಮಾಡಿಸಿಕೊಂಡರು. ನಂತರ ಪುನೀತ್​ ರಾಜ್​ಕುಮಾರ್​ ಭಾವಚಿತ್ರಕ್ಕೆ ಆರತಿ ಬೆಳಗಿ, ಎಡೆ ಇರಿಸಿದರು. ನಂತರ ವಿಧಿ-ವಿಧಾನದಂತೆ ಪೂಜೆ ಸಲ್ಲಿಸಿದರು.

ಈ ವೇಳೆ ನೆರೆದಿದ್ದ ಬಡಾವಣೆಯ ನಾಗರಿಕರು ಸ್ಥಳಕ್ಕೆ ತೆರಳಿ ಭಾವಚಿತ್ರದ ಎದುರು ಇರಿಸಲಾಗಿದ್ದ ಧೂಪ ಬೆಳಗಿದರು. 11ನೇ ದಿನದ ಕಾರ್ಯಕ್ಕೆ ನಾವು ಸಮಾಧಿ ಬಳಿಗೆ ಹೋಗಬೇಕಾದ ಕಾರಣ, ಇಂದು ಕೇಶಮುಂಡನ ಕಾರ್ಯ ನಡೆಸಿದ್ದೇವೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ನಟನೆಯಲ್ಲಿ ಪಳಗಿದ್ದ ಪುನೀತ್​: ಹಿರಿಯ ನಟ ಹೊನ್ನವಳ್ಳಿ ಕೃಷ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.