ETV Bharat / state

ಘನತ್ಯಾಜ್ಯ ನಿರ್ವಹಣೆ ಮಾಡಲು ಶಾಸಕ ಜ್ಯೋತಿ ಗಣೇಶ್ ಕರೆ

author img

By

Published : Dec 7, 2019, 3:31 AM IST

ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಪ್ರತಿಯೊಬ್ಬರು ನಿರ್ವಹಿಸಬೇಕು ಎಂದು ಶಾಸಕ ಜ್ಯೋತಿ ಗಣೇಶ್ ಹೇಳಿದರು.

ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ಕಾರ್ಯಕ್ರಮ
ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ಕಾರ್ಯಕ್ರಮ

ತುಮಕೂರು: ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಪ್ರತಿಯೊಬ್ಬರು ನಿರ್ವಹಿಸಬೇಕು. ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ಕಸದ ಬೆಟ್ಟವೇ ನಿರ್ಮಾಣವಾಗುತ್ತದೆ ಎಂದು ನಗರ ಬಿಜೆಪಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಹೇಳಿದರು.

ನಗರದ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ವಚ್ಛತೆಯೇ ಸಮೃದ್ಧಿ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಸಮಸ್ಯೆಗಳು ನಮ್ಮ ಹಳ್ಳಿಗಳಲ್ಲಿ ಬರಬಾರದು. ಪಟ್ಟಣ ಹಾಗೂ ನಗರಗಳಲ್ಲಿಯೂ ಕಸದ ಸಮಸ್ಯೆ ಉಂಟಾಗಬಾರದು ಎಂದರು. ಮನೆಯಲ್ಲಿ ಕಸದ ವಿಂಗಡಣೆ ಕಾರ್ಯ ನಡೆದರೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ಕಾರ್ಯಕ್ರಮ

ಇನ್ನು ಕಾರ್ಯಕ್ರಮಕ್ಕೂ ಮುನ್ನ ಘನತ್ಯಾಜ್ಯ ವಿಲೇವಾರಿಗೆ ಆಯ್ಕೆಯಾದ ಗ್ರಾಮಪಂಚಾಯಿತಿಗಳ ತ್ಯಾಜ್ಯ ಸಂಗ್ರಹಣ ವಾಹನಗಳಿಗೆ, ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಚಾಲನೆ ನೀಡಿದರು. ನಂತರ ಘನ ತ್ಯಾಜ್ಯ ವಿಲೇವಾರಿ ಕುರಿತ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಲತಾ ರವಿಕುಮಾರ್ ಉದ್ಘಾಟಿಸಿದರು.

Intro:ತುಮಕೂರು: ಮನೆಗಳಲ್ಲಿಯೇ ಕಸದ ವಿಂಗಡಣೆಯ ಕಾರ್ಯ ನಡೆದರೆ ಹಳ್ಳಿ, ಪಟ್ಟಣ, ನಗರಗಳಲ್ಲಿ ಕಸದ ಬೆಟ್ಟ ಉದ್ಭವವಾಗುವುದಿಲ್ಲ. ಹೀಗಾಗಿ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಪ್ರತಿಯೊಬ್ಬರು ನಿರ್ವಹಿಸಬೇಕು ಎಂದು ಶಾಸಕ ಜ್ಯೋತಿ ಗಣೇಶ್ ಕರೆ ನೀಡಿದರು.


Body:ನಗರದ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಸ್ವಚ್ಛತೆಯೇ ಸಮೃದ್ಧಿ ಎಂಬ ಘೋಷವಾಕ್ಯದಡಿ ಘನ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಮಾಲೋಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೂ ಮುನ್ನ ಘನತ್ಯಾಜ್ಯ ವಿಲೇವಾರಿಗೆ ಆಯ್ಕೆಯಾದ ಗ್ರಾಮಪಂಚಾಯಿತಿಗಳ ತ್ಯಾಜ್ಯ ಸಂಗ್ರಹಣ ವಾಹನಗಳಿಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಚಾಲನೆ ನೀಡಿದರು. ಆನಂತರ ಘನ ತ್ಯಾಜ್ಯ ವಿಲೇವಾರಿ ಕುರಿತ ಪ್ರಾತ್ಯಕ್ಷಿಕೆ ಹಾಗೂ ವಸ್ತುಪ್ರದರ್ಶನದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಲತಾ ರವಿಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಜಿ.ಬಿ ಜ್ಯೋತಿಗಣೇಶ್, ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸದಿದ್ದರೆ ಕಸದ ಬೆಟ್ಟವೇ ನಿರ್ಮಾಣವಾಗುತ್ತದೆ. ಇಂತಹ ಸಮಸ್ಯೆಗಳು ನಮ್ಮ ಹಳ್ಳಿಗಳಲ್ಲಿ ಬರಬಾರದು, ಅಲ್ಲದೆ ಪಟ್ಟಣ ಹಾಗೂ ನಗರಗಳಲ್ಲಿಯೂ ಕಸದ ಸಮಸ್ಯೆ ಉಂಟಾಗಬಾರದು, ಮನೆಯಲ್ಲಿ ಕಸದ ವಿಂಗಡಣೆ ಕಾರ್ಯ ನಡೆದರೆ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೈಟ್: ಜಿ.ಬಿ. ಜ್ಯೋತಿಗಣೇಶ್, ಶಾಸಕ.


Conclusion:ವರದಿ
ಸುಧಾಕರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.