ETV Bharat / state

ತುಮಕೂರಿನಲ್ಲಿ ಭಾರಿ ಮಳೆ: ನದಿಯಂತಾದ ಬೆಂಗಳೂರು - ಪೂನಾ ರಾಷ್ಟ್ರೀಯ ಹೆದ್ದಾರಿ

author img

By

Published : Oct 20, 2022, 9:22 AM IST

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ತುಮಕೂರು ತಾಲೂಕಿನ ಅಂಚಿಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆರೆ ಪೂರ್ತಿ ತುಂಬಿದ್ದು, ಹೆಚ್ಚುವರಿ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಬಂದು ಸಂಗ್ರಹವಾಗಿದೆ.

bangalore pune national highway
ನದಿಯಂತಾದ ಬೆಂಗಳೂರು - ಪೂನಾ ರಾಷ್ಟ್ರೀಯ ಹೆದ್ದಾರಿ

ತುಮಕೂರು: ನಗರದ ಹೊರವಲಯದಲ್ಲಿ ಹಾದು ಹೋಗಿರುವ ಬೆಂಗಳೂರು - ಪೂನಾ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್​ವರೆಗೂ ಮಳೆ ನೀರು ತುಂಬಿಕೊಂಡಿದ್ದು, ನದಿಯಂತೆ ಭಾಸವಾಗುತ್ತಿದೆ. ಹೀಗಾಗಿ, ಹೆದ್ದಾರಿಯ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ನದಿಯಂತಾದ ಬೆಂಗಳೂರು - ಪೂನಾ ರಾಷ್ಟ್ರೀಯ ಹೆದ್ದಾರಿ

ರಾತ್ರಿಯಿಡೀ ತುಮಕೂರು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದೆ. ತುಮಕೂರು ತಾಲೂಕಿನ ಅಂಚಿಹಳ್ಳಿ ಗ್ರಾಮದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕೆರೆ ಮಳೆಗೆ ಪೂರ್ತಿ ತುಂಬಿದ್ದು, ಹೆಚ್ಚುವರಿ ಕೆರೆ ನೀರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಸಂಗ್ರಹವಾಗಿದೆ. ಹೆದ್ದಾರಿಯಲ್ಲಿ ಸಂಗ್ರಹವಾಗಿರುವ ನೀರು ಹರಿದು ಹೋಗವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ: ಭಾರಿ ಮಳೆಗೆ ಗೋಡೆ ಕುಸಿದು ಹಲವಾರು ಕಾರುಗಳು ಜಖಂ.. ಕೃತಕ ಜಲಪಾತ ಸೃಷ್ಟಿ, ರಸ್ತೆಯಲ್ಲೇ ನಿಂತ ನೀರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.