ETV Bharat / state

ರಾಜ್ಯದ ಕೇಂದ್ರ ಅನುದಾನಿತ ಹಲವು ಯೋಜನೆಗಳಿಗೆ ಅನುದಾನಕ್ಕೆ ಕತ್ತರಿ

author img

By

Published : Jul 22, 2021, 10:22 PM IST

2020-21ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಅನುದಾನದಲ್ಲಿ ಕಡಿತವಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 18,715 ಕೋಟಿ ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ ಮಾರ್ಚ್ ಅಂತ್ಯಕ್ಕೆ 2,394 ಕೋಟಿ ರೂ. ಅನುದಾನ ಬಿಡುಗಡೆಯಲ್ಲಿ ಕಡಿತವಾಗಿದೆ ಎಂದು ಯೋಜನಾ ಇಲಾಖೆ ಮಾಹಿತಿ ನೀಡಿದೆ.

goi
goi

ಬೆಂಗಳೂರು: ರಾಜ್ಯದಲ್ಲಿ ಹಲವು ಕೇಂದ್ರ ಸರ್ಕಾರ ಅನುದಾನಿತ ಯೋಜನೆಗಳು ಅನುಷ್ಠಾನದಲ್ಲಿವೆ. ಈ ಯೋಜನೆಗಳಿಗೆ ಬಹುಪಾಲು ಅನುದಾನ ಕೇಂದ್ರ ಸರ್ಕಾರದಿಂದ ಹರಿದು ಬರುತ್ತದೆ. ಆದರೆ ಲಾಕ್‌ಡೌನ್​ನ ಆರ್ಥಿಕ ಸಂಕಷ್ಟದಿಂದ ರಾಜ್ಯದಲ್ಲಿನ ಹಲವು ಯೋಜನೆಗಳಿಗೆ ಕೇಂದ್ರದ ಅನುದಾನ ಬಿಡುಗಡೆ ಕಡಿತವಾಗಿದೆ. ಇದರಿಂದ ಆರ್ಥಿಕವಾಗಿ ಸೊರಗಿರುವ ರಾಜ್ಯಕ್ಕೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.

ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗೆ ರಾಜ್ಯ ಸರ್ಕಾರ ಕೇಂದ್ರದ ಅನುದಾನವನ್ನು ನೆಚ್ಚಿಕೊಂಡಿದೆ. ಬಹುತೇಕ ಕೇಂದ್ರದ ಪಾಲಿನಿಂದಲೇ ರಾಜ್ಯದಲ್ಲಿ ಹಲವು ಯೋಜನೆಗಳು ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ 24 ವಿವಿಧ ಇಲಾಖೆಗಳಲ್ಲಿ 96 ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಆದರೆ, ಲಾಕ್‌ಡೌನ್​ನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಕೇಂದ್ರ ಸರ್ಕಾರದಿಂದಲೂ ಅನುದಾನ ಬಿಡುಗಡೆಗೆ ಕತ್ತರಿ ಬಿದ್ದಿದೆ.

2020-21 ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಟ್ಟು ಅನುದಾನ 39,601 ಕೋಟಿ ರೂ. ಆಗಿದೆ. ಇದರಲ್ಲಿ 18,715 ಕೋಟಿ ರೂ. ಕೇಂದ್ರದ ಪಾಲಾಗಿದೆ. ಆದರೆ ಕೇಂದ್ರದ ಪಾಲಿನ ಅನುದಾನ ಬಿಡುಗಡೆಯಲ್ಲಿ ಕಡಿತವಾಗಿದೆ. ಇದರಿಂದ ಈಗಾಗಲೇ ಆರ್ಥಿಕವಾಗಿ ಸೊರಗಿರುವ ರಾಜ್ಯಕ್ಕೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.

ಕೇಂದ್ರದ ಅನುದಾನ ಬಿಡುಗಡೆ ಕಡಿತ:

2020-21ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡಿಗಡೆ ಮಾಡುವ ಅನುದಾನದಲ್ಲಿ ಕಡಿತವಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ 18,715 ಕೋಟಿ ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ ಮಾರ್ಚ್ ಅಂತ್ಯಕ್ಕೆ 2,394 ಕೋಟಿ ರೂ. ಅನುದಾನ ಬಿಡುಗಡೆಯಲ್ಲಿ ಕಡಿತವಾಗಿದೆ ಎಂದು ಯೋಜನಾ ಇಲಾಖೆ ಮಾಹಿತಿ ನೀಡಿದೆ.

ಪ್ರಮುಖವಾಗಿ ನರೇಗಾ, ಕೇಂದ್ರದ ರಸ್ತೆ ನಿಧಿ, ಪೂರಕ ಪೌಷ್ಟಿಕಾಂಶ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸ್ವಚ್ಛ ಭಾರತ, ಹಿಂದುಳಿದ ವರ್ಗಗಳ ಅಭಿವೃದ್ಧಿ ಕಾರ್ಯಕ್ರಮ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಗಳಿಗೆ ಕೇಂದ್ರದ ಅನುದಾನ ಕಡಿತವಾಗಿದೆ ಎಂದು ಇಲಾಖೆ ತಿಳಿಸಿದೆ.

ನರೇಗಾ ಯೋಜನೆ- 840 ಕೋಟಿ ರೂ. ಕಡಿತ

ಕೇಂದ್ರದ ರಸ್ತೆ ನಿಧಿ- 73.01 ಕೋಟಿ ಕಡಿತ

ಪೂರಕ ಪೌಷ್ಟಿಕಾಂಶ ಯೋಜನೆ- 189.44 ಕೋಟಿ ಕಡಿತ

ಸಮಗ್ರ ಶಿಶು ಅಭಿವೃದ್ಧಿ ಯೋಜನೆ- 131.43 ಕೋಟಿ ಕಡಿತ

ರಾಷ್ಟ್ರೀಯ ಆರೋಗ್ಯ ಅಭಿಯಾನ- 132.28 ಕೋಟಿ ಕಡಿತ

ಸ್ವಚ್ಛ ಭಾರತ ಯೋಜನೆ- 120 ಕೋಟಿ ಕಡಿತ

ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆ- 112.77 ಕೋಟಿ ಕಡಿತ

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ- 97.51 ಕೋಟಿ ಕಡಿತ

ನ್ಯಾಯಾಲಯ ಕಟ್ಟಡಗಳು- 404.62 ಕೋಟಿ ಕಡಿತ

2021-22 ಸಾಲಿನಲ್ಲೂ ಅನುದಾನ ಕಡಿತ:

2021-22 ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಒಟ್ಟು ಅನುದಾನ ಮೊತ್ತ 38,078 ಕೋಟಿ. ಇದರಲ್ಲಿ ಕೇಂದ್ರದ ಪಾಲು 17,536 ಕೋಟಿ ರೂ. ಆಗಿದೆ. ಅಂದರೆ ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಕೇಂದ್ರದ ಪಾಲು 1,179 ಕೋಟಿ ರೂ. ಕಡಿಮೆ ಅನುದಾನ ಹಂಚಿಕೆ ಮಾಡಿದೆ.

ಜೂನ್ ಅಂತ್ಯಕ್ಕೆ ಕೇಂದ್ರ ಸರ್ಕಾರ 4,074 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕಳೆದ ಬಾರಿ ಇದೇ ತಿಂಗಳು 4,191 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು ಎಂದು ಯೋಜನಾ ಇಲಾಖೆ ಅಂಕಿಅಂಶ ನೀಡಿದೆ. ಈ ವರ್ಷ ಜೂನ್ ಅಂತ್ಯದ ವರೆಗೆ ಕಳೆದ ಬಾರಿಗೆ ಹೋಲಿಸಿದರೆ ಆಗಿರುವ ಕೇಂದ್ರದ ಅನುದಾನ ಬಿಡುಗಡೆ ಕಡಿತ ವಿವರ ಹೀಗಿದೆ.

ನರೇಗಾ ಯೋಜನೆ- 327 ಕೋಟಿ ರೂ. ಕಡಿತ

ಪಿಎಂ ಗ್ರಾಮ ಸಡಕ್ ಯೋಜನೆ- 225 ಕೋಟಿ ಕಡಿತ

ಪಿಎಂ ಆವಾಜ್ ಯೋಜನೆ (ನಗರ)- 97 ಕೋಟಿ ಕಡಿತ

ಪಿಎಂ ಆವಾಜ್ ಯೋಜನೆ (ಗ್ರಾಮ)- 75 ಕೋಟಿ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.