ETV Bharat / state

ಚಾಮರಾಜನಗರ ಘಟನೆ ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡ: ದಿನೇಶ್ ಗುಂಡೂರಾವ್

author img

By

Published : May 3, 2021, 3:33 PM IST

ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವೈಫಲ್ಯಕ್ಕೆ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ ಗುಂಡೂರಾವ್ ಆರೋಪಿಸಿದ್ದಾರೆ.

Dinesh gundurao tweet
Dinesh gundurao tweet

ಬೆಂಗಳೂರು: ಚಾಮರಾಜನಗರ ದುರ್ಘಟನೆ ಸರ್ಕಾರದ ಪ್ರಾಯೋಜಿತ ಹತ್ಯಾಕಾಂಡ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ಆಕ್ಸಿಜನ್ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಒಂದೇ ದಿನ 24 ಜನ ಸಾವಿಗೀಡಾಗಿರುವುದು ಅತ್ಯಂತ ದೊಡ್ಡ ದುರಂತ. ಆಕ್ಸಿಜನ್ ಪೂರೈಸದ ರಾಜ್ಯ ಸರ್ಕಾರ ಈ ಸಾವಿನ ನೇರ ಹೊಣೆ ಹೊರಬೇಕು. ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ. ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ? ಎಂದು ಕೇಳಿದ್ದಾರೆ.

ಪ್ರತಿ ಜಿಲ್ಲಾಸ್ಪತ್ರೆಗೂ ಆಕ್ಸಿಜನ್ ಪೂರೈಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ ಆಕ್ಸಿಜನ್ ಇರಲಿ, ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಆಕ್ಸಿಜನ್‌ಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದೆ ಜನರ ಸಾಮೂಹಿಕ ಹತ್ಯೆ ನಡೆಸಿದೆ. ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ ಎಂದು ಅವರು ಕೇಳಿದ್ದಾರೆ.

ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವೈಫಲ್ಯಕ್ಕೆ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ. ರಾಜ್ಯದ ಜನ ಕೊಲೆ ಪಾತಕ ಸರ್ಕಾರದ ದುಷ್ಟ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿದ್ದಾರೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.