ETV Bharat / state

ಕೋವಿಡ್ ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಪಿಡಿಒಗಳ ಸಭೆ..

author img

By

Published : May 4, 2021, 9:07 PM IST

ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ದರ್ಶನ್ ಎಸ್‌ ವಿ ಅವರನ್ನು ಈ ವಿಷಯ ಕುರಿತು ಕೇಳಿದಾಗ ಸಭೆ ನಡೆಸುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಆದೇಶ ಮಾಡುವೆ ಎಂದು ಹೇಳಿದರು..

Athani covid rules break and run pdo meeting
Athani covid rules break and run pdo meeting

ಅಥಣಿ : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಯಾವುದೇ ಅನಾವಶ್ಯಕ ಸಭೆ ನಡೆಸಬಾರದೆಂದು ನಿಯಮವಿದ್ದರೂ ಅಥಣಿಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಉಪ-ಕಾರ್ಯದರ್ಶಿಗಳಾದ ಎ.ಬಿ. ಜಕ್ಕಪ್ಪನವರ ಕೋವಿಡ್ ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಪಿಡಿಒಗಳ ಸಭೆ ನಡೆಸಿದ್ದಾರೆ .

ಜಿಲ್ಲಾ ಪಂಚಾಯತ್ ಉಪ-ಕಾರ್ಯದರ್ಶಿಗಳಾದ ಎ ಬಿ ಜಕ್ಕಪ್ಪನವರ ಕೋವಿಡ್ ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಪಿಡಿಒಗಳ ಸಭೆ ನಡೆಸಿದರು.

ಅಗತ್ಯವಿದ್ದರೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶವಿದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತಿಲ್ಲ ಎನ್ನುವುದಕ್ಕೆ ಇಂದಿನ ಸಭೆಯೇ ಸಾಕ್ಷಿಯಾಗಿದೆ. ಅಲ್ಲದೆ, ಸಭೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಕಂಡು ಬರಲಿಲ್ಲ.

ಸೋಂಕಿತರಿಗೆ ಬೇಡ್ ಸಿಗುತ್ತಿಲ್ಲ ಎಂದು ನರಳಾಡುವ ದೃಶ್ಯ ವಿಷಯ ಗೊತ್ತಿದ್ದರೂ ಅದರ ಬಗ್ಗೆ ಕನಿಷ್ಠ ಚಿಂತಿಸುವ ಗೊಜಿಗೂ ಹೋಗಿಲ್ಲ. ಸಭೆಯಲ್ಲಿ ಗ್ರಾಮ ಪಂಚಾಯತ್‌ ತೆರಿಗೆ ವಸೂಲಿ ಕಡ್ಡಾಯ ಮಾಡಬೇಕು.

ಉದ್ಯೋಗ ಖಾತ್ರಿ ಯೋಜನೆ ಜೋರಾಗಿ ಆರಂಭಿಸಬೇಕು. ಸ್ವಚ್ಛ ಭಾರತ ಯೋಜನೆ ಕ್ರಿಯಾ ಯೋಜನೆ ಕುರಿತು 14ನೇ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಹತ್ತು ಹಲವು ವಿಷಯಗಳನ್ನು ಚರ್ಚೆ ಮಾಡಿದರು.

ಅಥಣಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಎರಡನೆ ಅಲೆ ದಿನೆ ದಿನೆ ಕೈ ಮೀರಿ ಅಬ್ಬರಿಸುತ್ತಿದೆ. ಜನರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯ ಗಳಲ್ಲಿ ಸ್ಥಳ ಸಿಗದೆ ಆಕ್ಷಿಜನ್ ಸಿಗದೆ ಇಂಜೆಕ್ಸನ್ ಸಿಗದೆ ಒದ್ದಾಡಿ ಸಾಯುತ್ತಿರುವಾಗ ಈ ಸಭೆ ಬೇಕಾ? ದಿನಾಲೂ ಸಾವಿನ ಸಂಖ್ಯೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇರಿ ಸುಮಾರು 25 ಗಡಿ ಸಮಿಪಿಸುತ್ತಿದೆ.

ಇದರ ಬಗ್ಗೆ ಚಿಂತನೆ ಮಾಡದೆ ಅನಾವಶ್ಯಕ ವಿಷಯಗಳೇ ಸಭೆಯಲ್ಲಿ ಚರ್ಚೆಯಾದವು. ಜನರ ಕೈಗೆ ಕಳೆದ ಒಂದು ತಿಂಗಳಿಂದ ಕೆಲಸ ಇಲ್ಲ. ಕಳೆದ ಭಾರಿ ಲಾಕ್‌ಡೌನ್ ಈ ಭಾರಿ ಲಾಕ್ಡೌ‌ನ್.

ಆರ್ಥಿಕ ಸಂಕಷ್ಟದಲ್ಲಿ ಇರುವಾಗ ಜನರು ತೆರಿಗೆ ಬೇಡಲು ಹೋದರೆ ಕೊಡಲು ಸಾಧ್ಯವೆ ? ಎಂದು ಅಲ್ಲಿರುವ ಅನೇಕ ಪಿಡಿಒಗಳು ಒಳಗೊಳಗೆ ಗುಸು ಗುಸು ಪಿಸು ಮಾತನಾಡುತಿದ್ದರು.

ಅದಲ್ಲದೆ ಸಾಮಾಜಿಕ ಅಂತರ ಕಾಯುವ ಮೂಲಕ ಚೈನ್ ಕಟ್ಟ ಮಾಡಿ ಪರಿಸ್ಥೀತಿ ಹಿಡಿತದಲ್ಲಿ ತರುವದಕ್ಕೆ ಗುಂಪು ಕೆಲಸಕ್ಕೆ ಸರ್ಕಾರ ಕಡಿವಾಣ ಹಾಕುವಂತೆ ಸರ್ಕಾರದ ಸುತ್ತೋಲೆ ಇದೆ.

ಆದರೆ, ಉದ್ಯೋಗ ಖಾತ್ರಿ ಯೋಜನೆ ಮಾಡಿಸುವುದರ ಮೂಲಕ ಗುಂಪು ಗಾರಿಕೆ ಹೆಚ್ಚಾಗಿ ರೋಗ ಉಲ್ಬಣವಾಗುತ್ತದೆ. ಅದಕ್ಕೆ ಮಹತ್ವ ನೀಡಬಾರದು ಎಂದು ನಿಯಮ ಸಹ ಜಾರಿಗೆ ತಂದಿದ್ದರೂ ಸಹ ಕಡ್ಡಾಯ ಮಾಡಲು ಆದೇಶ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ದರ್ಶನ್ ಎಸ್‌ ವಿ ಅವರನ್ನು ಈ ವಿಷಯ ಕುರಿತು ಕೇಳಿದಾಗ ಸಭೆ ನಡೆಸುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮಕ್ಕೆ ಆದೇಶ ಮಾಡುವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.