ETV Bharat / state

ಶಿವಮೊಗ್ಗ: 1.15 ಎಕರೆ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದ ಸಾಗರ ನಗರಸಭೆ...

author img

By

Published : Aug 26, 2020, 12:00 AM IST

ಸಾಗರದ ವಾರ್ಡ್ ನ.3 ರಲ್ಲಿ ಒತ್ತುವರಿಯಾಗಿದ್ದ 1.15 ಎಕರೆ ಭೂಮಿಯನ್ನು ನಗರಸಭೆ ತನ್ನ ವಶಕ್ಕೆ ಪಡೆದುಕೊಂಡಿದೆ.

shivmogga
ಒತ್ತುವರಿ ಭೂಮಿಯನ್ನು ವಶಕ್ಕೆ

ಶಿವಮೊಗ್ಗ: ಸಾಗರದ ವಾರ್ಡ್ ನಂ. 3ರಲ್ಲಿ ಒತ್ತುವರಿಯಾಗಿದ್ದ 1.15 ಎಕರೆ ಭೂಮಿಯನ್ನು ನಗರಸಭೆ ತನ್ನ ವಶಕ್ಕೆ ಪಡೆದುಕೊಂಡಿದೆ.

ಸಾಗರ ನಗರಸಭೆಯ ವಾರ್ಡ್ ನಂಬರ್ 3ರ ಭೀಮನೇರಿಯ ಸರ್ವೆ ನಂಬರ್ ‌36ರಲ್ಲಿ ಆಶ್ರಯ ಮನೆ‌ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ನಗರಸಭೆಯ ಜಾಗವನ್ನು‌ ಖಾಸಗಿ ಲೇಔಟ್​ನವರು ಒತ್ತುವರಿ ಮಾಡಿಕೊಂಡಿದ್ದರು.

sagara city Municipal council
ಸಾಗರ ನಗರಸಭೆ

ನಗರಸಭೆಯ ಪೌರಾಯುಕ್ತ ಹೆಚ್.ಕೆ. ನಾಗಪ್ಪನವರು ತಮ್ಮ ಕಂದಾಯ ಸಿಬ್ಬಂದಿಯೊಂದಿಗೆ ತೆರಳಿ, ನಗರಸಭೆಯ ಮ್ಯಾಪ್ ಪ್ರಕಾರ ಸರ್ವೆ ನಡೆಸಿದಾಗ ಆಶ್ರಯ ಮನೆ ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಒತ್ತುವರಿ ಮಾಡಿದ್ದು ತಿಳಿದು ಬಂದಿದೆ. ಸಾಗರದ ಖಾಸಗಿ ಲೇಔಟ್​ನ ವಿಘ್ನೇಶ್ವರ ಲೇಔಟ್​ನಲ್ಲಿ ಸುಮಾರು 1 ಎಕರೆ 15 ಗುಂಟೆ ಭೂಮಿ ಒತ್ತುವರಿಯಾಗಿದ್ದು ಪತ್ತೆಯಾಗಿದೆ.

1.15 ಎಕರೆ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದ ಸಾಗರ ನಗರಸಭೆ

ಇನ್ನು ನಗರಸಭೆ ಜಾಗವನ್ನು ಒತ್ತುವರಿ ಮಾಡಿದ್ದ ವಿಘ್ನೇಶ್ವರ ಲೇಔಟ್ ಮಾಲೀಕರ ವಿರುದ್ಧ ಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ. ಸಾಗರದಲ್ಲಿ ಇನ್ನಷ್ಟು ಕಡೆ ಖಾಸಗಿ ಲೇಔಟ್​ನವರು ನಗರಸಭೆಯ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ದೂರು ಬಂದಿದೆ. ಮುಂದಿನ ದಿನಗಳಲ್ಲಿ ಅವುಗಳನ್ನು ತೆರವು ಮಾಡಲಾಗುವುದು ಎಂದು ಪೌರಾಯುಕ್ತ ಎಸ್.ಕೆ. ನಾಗಪ್ಪ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.