ETV Bharat / state

ಹಣಕಾಸು ವ್ಯವಹಾರ: ಕಟ್ಟಡ ಗುತ್ತಿಗೆದಾರನಿಂದ ತಂದೆ ಮಗನಿಗೆ ಚಾಕು ಇರಿತ

author img

By

Published : Aug 27, 2022, 5:08 PM IST

Updated : Aug 28, 2022, 7:46 AM IST

ಹಣಕಾಸಿನ ವಿಚಾರವಾಗಿ ಕಟ್ಟಡ ಗುತ್ತಿಗೆದಾರನೊಬ್ಬ, ತಂದೆ-ಮಗನಿಗೆ ಚಾಕು ಇರಿದು ಪೊಲೀಸರಿಗೆ ಶರಣಾಗಿರುವ ಘಟನೆ ಶಿರಾಳಕೊಪ್ಪದಲ್ಲಿ ನಡೆದಿದೆ.

kn_smg_03_fatharson_chakureitha_av_7204213
ತಂದೆ ಮಗನಿಗೆ ಚಾಕು ಇರಿತ ಪ್ರಕರಣ

ಶಿವಮೊಗ್ಗ: ಹಣಕಾಸು ವ್ಯವಹಾರದ ವಿಚಾರವಾಗಿ ಕಟ್ಟಡ ಗುತ್ತಿಗೆದಾರನೊಬ್ಬ ತಂದೆ ಹಾಗೂ ಮಗನಿಗೆ ಚಾಕುವಿನಿಂದ ಇರಿದು ಬಳಿಕ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿರುವ ಪ್ರಕರಣ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಘಟನೆಯಲ್ಲಿ ಶಿರಾಳಕೊಪ್ಪದ ದಯಾನಂದ(60) ಸಾವನ್ನಪ್ಪಿದ್ದು, ಅವರ ಮಗ ರಾಘವೇಂದ್ರ(35) ಗಂಭೀರವಾಗಿ ಗಾಯಗೊಂಡಿದ್ದು, ನಗರದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೊರಬ ತಾಲೂಕು ಚೆನ್ನಾಪುರದ ನಿವಾಸಿ ಕೋಟೇಶ್ ಚಾಕು ಇರಿದು ಪೊಲೀಸರಿಗೆ ಶರಣಾಗಿದ್ದಾರೆ.​

ಕೋಟೇಶ್ ಕಟ್ಟಡ ಗುತ್ತಿಗೆದಾರರಾಗಿದ್ದು, ದಯಾನಂದ‌ರವರ‌ ಕಟ್ಟಡವನ್ನು ನಿರ್ಮಿಸುರುತ್ತಾರೆ. ಇನ್ನು, ಕೋಟೇಶ್​ಗೆ, ದಯಾನಂದ್​ ಕಟ್ಟಡ ನಿರ್ಮಾಣದ ಹಣ ನೀಡಲು ಬಾಕಿ ಇರುತ್ತದೆ. ದಯಾನಂದ್​ ಹಣ ಕೊಡಲು 2ವರ್ಷಗಳಿಂದ ನಿರಾಕರಿಸುತ್ತಾರೆ. ಕೊಪಗೊಂಡ ಕೋಟೇಶ್​ ದಯಾನಂದ್ ಹಾಗೂ ಮಗ ರಾಘವೇಂದ್ರರನ್ನು ಚಾಕುವಿನಿಂದ ಇರಿದು, ಬಳಿಕ ರಾಳಕೊಪ್ಪ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಘಟನೆಯಲ್ಲಿ ದಯಾನಂದ್​ ಸಾವನ್ನಪ್ಪಿದರೆ ಮಗ ಗಂಭೀರಾವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಹಾವಳಿ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

Last Updated : Aug 28, 2022, 7:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.