ETV Bharat / state

ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಸರಳ ಆಚರಣೆಗೆ ಅನುಮತಿ ನೀಡಲಾಗುತ್ತದೆ : ಎಸ್​ಪಿ ಲಕ್ಷ್ಮಿ ಪ್ರಸಾದ್

author img

By

Published : Aug 23, 2022, 8:43 PM IST

ಗಣೇಶೋತ್ಸವದ ಪ್ರಯುಕ್ತ ನಗರದಲ್ಲಿ ಸರಳವಾಗಿ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದು, ಎಂದಿನಂತೆ ಈ ಬಾರಿಯೂ ಡಿಜೆಗೆ ಅವಕಾಶವಿಲ್ಲ ಎಂದು ಪೊಲೀಸ್​ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

KN_SMG_02_Ganesh_festival_SP_BYTE_KA10011
ಲಕ್ಷ್ಮಿ ಪ್ರಸಾದ್ ಎಸ್​ಪಿ

ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ಗಲಾಟೆ ಮಧ್ಯೆ ಗೌರಿ-ಗಣೇಶ ಹಬ್ಬದ ಸಡಗರ ಆರಂಭವಾಗಿದ್ದು, ಹಿಂದಿನಂತೆಯೇ ಗಣಪತಿ ಪ್ರತಿಷ್ಠಾಪನೆಗೆ ಸರಳವಾಗಿ ಅನುಮತಿ ನೀಡಲಾಗುತ್ತದೆ ಎಂದು ಎಸ್​ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ಯಾವ ತರಹ ಅನುಮತಿ ನೀಡಬೇಕು ಎಂಬುದರ ಕುರಿತು ನಿನ್ನೆ ಹಾಗೂ ಇಂದು ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಸಭೆಗಳಾಗಿವೆ. ಗಣಪತಿ ಕೂರಿಸಲು ಸಿಂಗಲ್ ವಿಂಡೋ (ಏಕಗವಾಕ್ಷಿ ನೀತಿ) ಇಂದಿನಿಂದ ಆರಂಭವಾಗಲಿದೆ.

ನಗರದಲ್ಲಿ ಹಿಂದಿನ ಅಂಕಿ ಅಂಶಗಳನ್ನ ಅವಲೋಕಿಸಿದಾಗ ಸುಮಾರು 826 ಗಣಪತಿಗಳಿಗೆ ಅರ್ಜಿ ಬರಬಹುದು ಎಂದು ಅಂದಾಜಿಸಲಾಗಿದೆ. ಎಂದಿನಂತೆ ಈ ಬಾರಿಯೂ ಡಿಜೆಗೆ ಅನುಮತಿ ಇಲ್ಲ ಎಂದು ತಿಳಿಸಿದರು. ಗಣಪತಿ ಹಬ್ಬದಂದು ಫ್ಲೆಕ್ಸ್ ಹಾಕುವ ವಿಚಾರವನ್ನು ಮಹಾನಗರ ಪಾಲಿಕೆಯವರು ನೋಡಿಕೊಳ್ಳುತ್ತಾರೆ. ಅವರ ಗಮನಕ್ಕೆ ತಂದು ಫ್ಲೆಕ್ಸ್ ಹಾಕಲು ಅನುಮತಿ ಪಡೆದುಕೊಳ್ಳಬೇಕು ಎಂದರು.

ಲಕ್ಷ್ಮಿ ಪ್ರಸಾದ್ ಎಸ್​ಪಿ

ಸಿಸಿಟಿವಿ ಅಳವಡಿಕೆಗೆ ಮನವಿ: ಗಣೇಶೋತ್ಸವ ಹಿನ್ನೆಲೆ ನಗರದಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.‌ ಪೊಲೀಸ್ ಇಲಾಖೆ ಕೂಡ ಸಿಸಿಟಿವಿಗಳನ್ನು ಅಳವಡಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗುತ್ತದೆ. ಗಣಪತಿ ನಿಮಜ್ಜನ ದಿನ ಮೆರವಣಿಗೆ ಸಾಗುವ ಹಾದಿಯಲ್ಲಿ ಕಲ್ಲು ರಾಶಿ, ಅಥವಾ ಯಾವುದೇ ಘನವಸ್ತುಗಳು ಇರದಂತೆ ನೋಡಿಕೊಳ್ಳಲಾಗುತ್ತದೆ ಎಂದರು.

ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ: ಸಿಎಂ ಜೊತೆ ಚರ್ಚಿಸಿ ನಿರ್ಧಾರವೆಂದ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.