ETV Bharat / state

ಶಿವಮೊಗ್ಗ: ಕಸ ವಿಲೇವಾರಿಯ 51 ಆಟೋ ಟಿಪ್ಪರ್​ಗ​ಳಿಗೆ ಚಾಲನೆ ನೀಡಿದ ಮೇಯರ್

author img

By

Published : Mar 7, 2021, 9:15 PM IST

2016ರ ಮಹಾನಗರ ಪಾಲಿಕೆಗಳ ಕಾಯ್ದೆಯಂತೆ ಪ್ರತಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲೇಬೇಕು. ಈ ಹಿನ್ನೆಲೆ ಬಿಎಸ್ 6 ತಂತ್ರಜ್ಞಾನ ಹೊಂದಿರುವ 51 ಆಟೋ ಟಿಪ್ಪರಗಳನ್ನು ಶಿವಮೊಗ್ಗದಲ್ಲಿ ಕಸ ವಿಲೇವಾರಿ ಮಾಡಲು ಬಳಸಿಕೊಳ್ಳಲಾಗುತ್ತದೆ.

Shimoga Mayor
ಆಟೋ ಟಿಪ್ಪರ್ ಗಳಿಗೆ ಚಾಲನೆ ನೀಡಿದ ಮೇಯರ್

ಶಿವಮೊಗ್ಗ: ನಗರದಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆ ಇದೀಗ 51 ಆಟೋ ಟಿಪ್ಪರ್ ಗಳನ್ನು ಖರೀದಿ ಮಾಡಿದೆ.

ಆಟೋ ಟಿಪ್ಪರ್ ಗಳಿಗೆ ಚಾಲನೆ ನೀಡಿದ ಮೇಯರ್

ಓದಿ: ರಾಜ್ಯದಲ್ಲಿಂದು 622 ಮಂದಿಯಲ್ಲಿ ಸೋಂಕು ಪತ್ತೆ: 3 ಜನ ಕೋವಿಡ್​​ಗೆ ಬಲಿ‌

ಇಂದು ಮಹಾನಗರ ಪಾಲಿಕೆ ಆವರಣದಲ್ಲಿ ಮೇಯರ್ ಸುವರ್ಣ ಶಂಕರ್ 51 ಆಟೋ ಟಿಪ್ಪರಗಳಿಗೆ ಚಾಲನೆ ನೀಡಿದರು. ಟಿಪ್ಪರ ಬಳಸಿಕೊಂಡು ಹಸಿ ಕಸ ಹಾಗೂ ಒಣ ಕಸವನ್ನು ಮನೆಯಿಂದಲೇ ಪ್ರತ್ಯೇಕಿಸಿ ಸಂಗ್ರಹಿಸಲು ಮಹಾನಗರ ಪಾಲಿಕೆ ಕ್ರಮ ಕೈಗೊಂಡಿದೆ.

2016ರ ಮಹಾನಗರ ಪಾಲಿಕೆಗಳ ಕಾಯ್ದೆಯಂತೆ ಪ್ರತಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲೇಬೇಕು. ಈ ಹಿನ್ನೆಲೆ ಬಿಎಸ್ 6 ತಂತ್ರಜ್ಞಾನ ಹೊಂದಿರುವ 51 ಆಟೋ ಟಿಪ್ಪರಗಳನ್ನು ಶಿವಮೊಗ್ಗದಲ್ಲಿ ಕಸ ವಿಲೇವಾರಿ ಮಾಡಲು ಬಳಸಿಕೊಳ್ಳಲಾಗುತ್ತದೆ.

ಈ ವಾಹನಗಳಲ್ಲಿ ಕಸವನ್ನು ಸಂಗ್ರಹಿಸಿ ಬಳಿಕ ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.