ETV Bharat / state

ಭದ್ರಾವತಿ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಗೆ ಚಾಕು ಇರಿತ

author img

By

Published : Sep 23, 2022, 8:31 AM IST

ಹಳೇ ದ್ವೇಷದ ಹಿನ್ನೆಲೆ ಇಬ್ಬರು ವ್ಯಕ್ತಿಗಳು ಪರಸ್ಪರ ಜಗಳವಾಡಿದ್ದು, ಈ ವೇಳೆ ಓರ್ವ ವ್ಯಕ್ತಿಗೆ ಚಾಕು ಇರಿತವಾಗಿರುವ ಘಟನೆ ನಡೆದಿದೆ.

kn_smg_05
ಭದ್ರಾವತಿಯಲ್ಲಿ ಚಾಕು ಇರಿತ ಪ್ರಕರಣ

ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸೆ.20ರಂದು ಭದ್ರಾವತಿಯ ನಿವಾಸಿಗಳಾದ ನವೀನ್, ಶ್ರೀಕಾಂತ್, ಕಿರಣ್ ಎಂಬುವರು ಸಮೀಪದ ಅಂತರಗಂಗೆ ದೇವಾಲಯಕ್ಕೆ ಹೋಗಿದ್ದರು. ದೇವಸ್ಥಾನದಿಂದ ಹಿಂತಿರುಗುವಾಗ ಮನು ಹಾಗು ಮಹೇಶ್ ಎನ್ನುವವರು ಬಂದಿದ್ದಾರೆ. ಮನು ಕಿರಣ್ ಎಂಬುವವರನ್ನು ಕಂಡು ಬೈಯಲು ಪ್ರಾರಂಭಿಸಿದ್ದಾನೆ. (ಈ ಹಿಂದೆ ಮನು ಮತ್ತು ಕಿರಣ್​ ನಡುವೆ ಜಗಳಗಳಾಗಿದ್ದವು) ಬಳಿಕ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮನು ಕಿರಣ್​ ಎಂಬುವವರ ತೊಡೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.

ಇನ್ನು ಚಾಕು ತೊಡೆಯಲ್ಲೇ ಸಿಲುಕಿಕೊಂಡಿದ್ದು, ತಕ್ಷಣವೇ ಕಿರಣ್​ನನ್ನು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಾಕು ಹೊರಗೆ ಬಾರದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ತೊಡೆ ಭಾಗದಲ್ಲಿ ಸಿಲುಕಿದ್ದ ಚಾಕುವನ್ನು ಹೊರ ತೆಗದು ಚಿಕಿತ್ಸೆ ನಡೆಸಲಾಗಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮುಸುಕುಧಾರಿ ವೇಷದಲ್ಲಿ ಬಂದ ಪುಂಡರ ಗುಂಪು.. ಬೆಂಗಳೂರಲ್ಲಿ ಯುವಕನ ಮೇಲೆ ಹಲ್ಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.