ETV Bharat / state

ಶಿವಮೊಗ್ಗ... ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ: ಭಾಸ್ಕರ್ ರಾವ್​

author img

By

Published : Jan 9, 2023, 10:52 PM IST

Updated : Jan 9, 2023, 11:12 PM IST

ಸ್ಯಾಂಟ್ರೋ ರವಿ ಕಾಮುಕ ವ್ಯಾಪಾರಿ ಆತನ ಮೇಲೆ ಮೈಸೂರಿನಲ್ಲಿ ಸಾಕಷ್ಟು ಪ್ರಕರಣಗಳಿವೆ - ರಾಜ್ಯದಲ್ಲಿ ಗೂಂಡಾಗಳಿಗೆ ಬಲಿ ಹಾಕಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್.

Santro Ravi is an amorous merchant
ಸ್ಯಾಂಟ್ರೋ ರವಿ ಒಬ್ಬ ಕಾಮುಕ ವ್ಯಾಪಾರಿ: ಭಾಸ್ಕರ್ ರಾವ್​

ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್

ಶಿವಮೊಗ್ಗ: ಸ್ಯಾಂಟ್ರೋ ರವಿ ಕಾಮುಕ ವ್ಯಾಪಾರಿ ಆತನ ಮೇಲೆ ಮೈಸೂರಿನಲ್ಲಿ ಸಾಕಷ್ಟು ಪ್ರಕರಣಗಳಿವೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಅಶಕ್ತವಾಗಿರುವ ಸರ್ಕಾರ ಹುಳ, ಹುಪ್ಪೆ, ನಾರಿ ಇತವರ ಸಹಾಯ, ಬ್ರೋಕರ್ ಗಳು ಏಜೆಂಟರ ಸಹಕಾರ ತೆಗೆದುಕೊಳ್ಳಲು ಹೋಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರ ಜನರಿಗಷ್ಟೇ ಉತ್ತರಿಸಬೇಕು, ಇಂತಹ ರೌಡಿಗಳು, ತಲೆ ಹಿಡುಕರ ಸಹವಾಸ ಮಾಡುವ ಅಗತ್ಯವಿಲ್ಲ ಎಂದು ರಾವ್​​ ಗರಂ ಆದರು.

ಈ ಹಿಂದೆ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನಲ್ಲಿ ಗೂಂಡಾಗಳಿಗೆ ಪ್ರೋತ್ಸಾಹ ಕೊಟ್ಟರಾ. ಉತ್ತರ ಪ್ರದೇಶದಲ್ಲಿ ಎಲ್ಲಾ ಗೂಂಡಾಗಳಿಗೆ ಆಗ ಬಲಿ ಹಾಕಿದ್ದರು. ನೀವು ಕೂಡ ಈ ರೀತಿಯ ಗೂಂಡಾಗಳಿಗೆ ಬಲಿ ಹಾಕಿ ಎಂದು ರಾಜ್ಯ ಸರ್ಕಾರವನ್ನು ಭಾಸ್ಕರ್​ ರಾವ್​ ಒತ್ತಾಯಿಸಿದರು. ಸಚಿವರ ಹೆಸರುಗಳನ್ನು ನಾನು ವೈಯುಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ, ರಾಜ್ಯದ ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜಕಾರಣಿಗಳ ಬಗ್ಗೆ ಅಗೌರವವಾಗಿ ನೋಡುತ್ತಿದ್ದಾರೆ. ಸಿಡಿ ಪ್ರಕರಣ ಅದು, ಇದು ಅಂತಾ ನೋಡುತ್ತಿದ್ದಾರೆ. ಏನು ಇಲ್ಲದೇ, ಅವರೆಲ್ಲಾ ಯಾಕೆ ಸ್ಟೇ ತೆಗೆದುಕೊಂಡು ಬಂದರು. ಏನಾದರೂ ಇದ್ದರೆ ತಾನೇ ಸ್ಟೇ ತೆಗೆದುಕೊಂಡು ಬರೋದು. ನಮ್ಮ ಮೇಲೆ, ನಿಮ್ಮ ಮೇಲೆ ಸಿಡಿ ಆರೋಪ ಬಂದರೆ, ಏನಾದರೂ ಮಾಡಿಕೊಂಡು ಹೋಗಿ ಅನ್ನುತ್ತೇವೆ. ಏಕೆಂದರೆ ನಾವು ಎಲ್ಲರೂ ಸ್ವಚ್ಛವಾಗಿರುವವರು ಎಂದರು.

ಸಿಡಿ ಬಿಡುಗಡೆ ಮಾಡುತ್ತೆ ಎಂದರೇ ಹೈಕೋರ್ಟಿನಲ್ಲಿ ಹೋಗಿ ಸ್ಟೇ ತೆಗೆದುಕೊಂಡು ಬರುತ್ತಾರೆ. ಹೀಗೆ ಮಾಡಿದರೆ ಕುಂಬಳಕಾಯಿ ಕಳ್ಳ ಎಂದರೇ, ಹೆಗಲು ಮುಟ್ಟಿ ನೋಡಿದ ಎಂಬಂತಾಗುತ್ತದೆ. ಸ್ಯಾಂಟ್ರೋ ರವಿ ನೋಟುಗಳನ್ನಿಟ್ಟುಕೊಂಡು ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಇದೆಲ್ಲದರ ಹಿಂದೆ ರಾಜಕಾರಣಿಗಳಿದ್ದಾರೆ. ಇಂತಹವರನ್ನು ರಾಜಕಾರಣಿಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಎಎಪಿ ಉಪಾಧ್ಯಕ್ಷರು ಒತ್ತಾಯಿಸಿದರು.

ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ: ಕೇಂದ್ರ ಸರ್ಕಾರದಲ್ಲಿ ಒಂದು ಡಿಸಿಪ್ಲಿನ್ ಇದೆ. ಅದೇ ರೀತಿ ಇಲ್ಲಿಯೂ ಇರಬೇಕು. ಯಾರ ಜೊತೆ ಫೋಟೋ ತೆಗೆಸಿಕೊಳ್ಳಬೇಕು ಎಂಬ ಬಗ್ಗೆ ಶಿಸ್ತು ಇರ್ಬೇಕು. ಬೆಂಗಳೂರಿನಲ್ಲಿ ಈ ರೀತಿಯ ಬಹಳಷ್ಟು ಅಫೆನ್ಸ್ ಗಳು ನಡೆಯುತ್ತಿವೆ. ಆತ ನಾನು ಇವರ ಬಳಿ ಬಹಳ ಹತ್ತಿರ ಇದ್ದೆ. ಇವರು ನನ್ನ ಬಳಿ ಚೆನ್ನಾಗಿದ್ದಾರೆ ಎಂದು ಫೋಟೋ ತೋರಿಸುತ್ತಾನೆ. ಒನ್ ಟು ಒನ್ ನಾನು ಇವರ ಬಳಿ ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ. ಇದು ಹೊಸ ರೀತಿಯ ಟ್ರೆಂಡ್ ಆಗಿದೆ. ರಾಜಕೀಯವಾಗಿ ಇವರೆಲ್ಲಾ ಸ್ಟ್ರಾಂಗ್ ಆಗಿ ಇಲ್ಲದೇ ಹೋದರೆ ಇವೆಲ್ಲಾ ನಡೆಯುತ್ತವೆ. ಮೊದಲು ರಾಜಕಾರಣಿಗಳು ಸ್ಟ್ರಾಂಗ್ ಆಗಿ ಇರಬೇಕು ಎಂದು ಹೇಳಿದರು.

ಏನಿದು ಸ್ಯಾಂಟ್ರೋ ರವಿ ಪ್ರಕರಣ? : ಯುವತಿಯೊಬ್ಬಳಿಗೆ ಕೆಲಸ ನೀಡುವ ಭರವಸೆ ನೀಡಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಬಲವಂತವಾಗಿ ವಿವಾಹವಾಗಿ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೆ.ಎಸ್. ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲಸಕ್ಕೆ ಬಂದಾಗ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ ನಡೆಸಿ, ಚಿತ್ರಗಳನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿ ದೂರು ನೀಡಿದ್ದಾರೆ. ಒಡನಾಡಿ ಸೇವಾಸಂಸ್ಥೆಯ ಆಶ್ರಯದಲ್ಲಿರುವ ಯುವತಿಯು ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು.. ಗೃಹಸಚಿವರ ಪ್ರತಿ ಏಟು

Last Updated :Jan 9, 2023, 11:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.