ETV Bharat / state

ಶಿವಮೊಗ್ಗ: 2020ರ ಸಾಲಿಗಿಂತ 2019ರಲ್ಲಿ ಮಳೆಯಿಂದ ಶಾಲೆಗಳಿಗೆ ಅಧಿಕ ಹಾನಿ!

author img

By

Published : Oct 1, 2020, 12:42 PM IST

ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ಕಳೆದೆರಡು ವರ್ಷಗಳಲ್ಲಿ ಉಂಟಾದ ಅವಾಂತರಗಳನ್ನು ಗಮನಿಸಿದರೆ, ಕಳೆದ ಬಾರಿ ಸುರಿದ ಮಳೆಯಿಂದ ಶಾಲೆಗಳಿಗೆ ಉಂಟಾದ ಹಾನಿಯೇ ಹೆಚ್ಚು ಎಂದು ಡಿಡಿಪಿಐ ರಮೇಶ್ ಮಾಹಿತಿ ನೀಡಿದ್ದಾರೆ.

Rain effects on schools; DDPI Ramesh gave complete details of damage
2020ರ ಸಾಲಿಗಿಂತ 2019ರ ಮಳೆಯಿಂದ ಶಾಲೆಗಳಿಗಾದ ಹಾನಿ‌ ಹೆಚ್ಚು!

ಶಿವಮೊಗ್ಗ: ಈ ಬಾರಿ ವರುಣನ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಆದ್ರೆ ಈ ಎರಡು ವರ್ಷಗಳಲ್ಲಿ ಉಂಟಾದ ಅವಾಂತರಗಳನ್ನು ಗಮನಿಸಿದರೆ ಕಳೆದ ಬಾರಿ ಸುರಿದ ಮಳೆಯಿಂದ ಶಾಲೆಗಳಿಗೆ ಉಂಟಾದ ಹಾನಿಯೇ ಹೆಚ್ಚು ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.

2019ರ ಮಳೆಗಾಲದಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿತ್ತು. ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿದಿದ್ದವು. ತಗ್ಗು ಪ್ರದೇಶದ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ವಿಪರೀತ ಮಳೆಯಿಂದ ರಸ್ತೆಗಳು ಹಾನಿಯಾಗಿದ್ದವು. ಮನೆಗಳು ಕುಸಿದಿದ್ದವು. ಅದರಂತೆ ಅನೇಕ‌ ಸರ್ಕಾರಿ ಶಾಲೆಗಳು ಬಿದ್ದಿದ್ದವು. ಮಳೆಯಿಂದ ಶಾಲೆಗಳಿಗೆ ರಜೆ‌‌ ನೀಡಿದ್ದ ಕಾರಣ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ.

ಮಳೆಯಿಂದ ಶಾಲೆಗಳಿಗಾದ ಹಾನಿ‌

ಜಿಲ್ಲೆಯಲ್ಲಿ‌ 828 ಶಾಲೆಗಳಿಗೆ ಹಾನಿ: ಎಡೆಬಿಡದೆ ಸುರಿದ ಮಳೆಯಿಂದ‌ 2019ರಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ 828 ಶಾಲೆಗಳಿಗೆ ಹಾನಿ ಉಂಟಾಗಿತ್ತು. 828 ಶಾಲೆಯಲ್ಲಿ 1,713 ಶಾಲಾ‌ ಕೊಠಡಿಗಳು ಸಂಪೂರ್ಣ ದುರಸ್ತಿಗೆ ಬಂದಿವೆ. ತಾಲೂಕು ಶಾಲೆಯ ಹಾನಿಯ ವಿವರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಗಿತ್ತು.

ಶಾಲಾ ದುರಸ್ತಿಗೆ 38.84 ಕೋಟಿ ರೂ. ಬಜೆಟ್: ಮಳೆಯಿಂದ ಹಾನಿಗೊಳಗಾದ ಶಾಲೆಗಳ ದುರಸ್ತಿಗೆ 38.84 ಕೋಟಿ ರೂ. ಬಜೆಟ್ ವರದಿ ಮಾಡಿ‌ ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಲಾಗಿತ್ತು. ಶಾಲಾ ದುರಸ್ತಿಗೆ ಅನುದಾನ ಹಂತ ಹಂತವಾಗಿ ಬಂದು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದುವರೆಗೂ ಶಾಲಾ ದುರಸ್ತಿಗೆ ಮೂರು ಹಂತದಲ್ಲಿ‌ ಅನುದಾನ ಬಿಡುಗಡೆಯಾಗಿದೆ. ಈಗಾಗಲೇ 828 ಶಾಲೆಯಲ್ಲಿ‌ 622 ಶಾಲೆಗಳ ದುರಸ್ತಿ ಕಾರ್ಯ‌ ಪೂರ್ಣಗೊಂಡಿದೆ. ಈ ದುರಸ್ತಿ ಜವಾಬ್ದಾರಿಯನ್ನು‌ ಪಿಆರ್​​ಇಡಿಎಲ್ ಹಾಗೂ ಲ್ಯಾಂಡ್ ಆರ್ಮಿಗೆ ನೀಡಲಾಗಿತ್ತು. ಉಳಿದ ಶಾಲಾ ಕಾಮಗಾರಿಗೆ ಕೋವಿಡ್ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಅಡಚಣೆಯಾಗಿತ್ತು. ಸದ್ಯ ಆ ಕಾಮಗಾರಿಗಳನ್ನು ಸಹ ನಡೆಸಲಾಗುತ್ತಿದೆ. ಬಾಕಿ ಬರಬೇಕಿದ್ದ 1.4 ಕೋಟಿ ರೂ. ಅನುದಾನ ಸಹ ಜೂನ್ ಅಂತ್ಯಕ್ಕೆ ಬಂದಿದೆ.

2020ರಲ್ಲಿ ಸುರಿದ ಮಳೆಯಿಂದ ಹೆಚ್ಚಿನ ಹಾನಿಯಾಗಿಲ್ಲ: ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಮಳೆ ಪ್ರಮಾಣ‌ ಕಡಿಮೆಯಾಗಿದ್ದು, ಹೆಚ್ಚಿನ ಹಾನಿಯಾಗಿಲ್ಲ. ಜಿಲ್ಲೆಯ ಏಳು ತಾಲೂಕಿನಲ್ಲೂ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಈ ವರ್ಷದ ಹಾನಿಯ ವರದಿ ಬಂದಿಲ್ಲ: ಈ ವರ್ಷದ ಹಾನಿಯ ಅಂದಾಜು ಇನ್ನೂ‌ ತಿಳಿದಿಲ್ಲ. ಎಲ್ಲಾ ತಾಲೂಕಿನ ಬಿಇಒಗಳಿಗೆ ನಷ್ಟವಾಗಿರುವ ಬಗ್ಗೆ ವರದಿ ಕೇಳಿದ್ದು, ಇನ್ನೂ ವರದಿ ನೀಡಿಲ್ಲ. ಸಾಗರ, ತೀರ್ಥಹಳ್ಳಿಯಲ್ಲಿ ಮಳೆಯಾಗಿದ್ದರೂ ಸಹ ಹೆಚ್ಚಿನ ಹಾನಿಯಾಗಿಲ್ಲ. ಕೆಲವು ಕಡೆ ಒಂದು ಕೊಠಡಿ ಕುಸಿದಿದೆ. ಮತ್ತೆ ಕೆಲವು ಕಡೆ ಮೇಲ್ಛಾವಣಿ ಹಾರಿ ಹೋಗಿದೆ. ಮತ್ತೆ ಕೆಲವು ಕಡೆ ಗೋಡೆ ಮೇಲೆ ನೀರು ಇಳಿದಿದೆ. ಇದರಿಂದ ನಷ್ಟದ ಅಂದಾಜು ಪಟ್ಟಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಕೇಳಿದ್ದು, ಅದಷ್ಟು ಬೇಗ ನೀಡಲಾಗುವುದು ಎಂದು ಡಿಡಿಪಿಐ ರಮೇಶ್ ತಿಳಿಸಿದ್ದಾರೆ.

ಜಿಲ್ಲಾ‌ ಉಸ್ತುವಾರಿ ಕೆ.ಎಸ್.ಈಶ್ವರಪ್ಪನವರ ಆಸಕ್ತಿಯಿಂದ ಶಾಲೆಗಳ ದುರಸ್ತಿ: ಕಳೆದ ವರ್ಷ ಸುರಿದ ಮಳೆಯಿಂದ ಹಾನಿಗೊಳಗದ ಶಾಲೆಗಳ ಮಾಹಿತಿ ಕೇಳಿ ಅನುದಾನ ನೀಡಿ ಶಾಲೆಗಳನ್ನು ಜಿಲ್ಲಾ‌ ಉಸ್ತುವಾರಿ ಕೆ.ಎಸ್.ಈಶ್ವರಪ್ಪನವರು ದುರಸ್ತಿ ಮಾಡಿಸಿದ್ದಾರೆ. ಈ ವರ್ಷದ ಹಾನಿಯ ಬಗ್ಗೆಯೂ ಸಹ ಮಾಹಿತಿ ಕೇಳಿದ್ದು, ಅನುದಾನ ತರುವ ಜವಾಬ್ದಾರಿಯನ್ನು ತೆಗೆದು‌ಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.