ETV Bharat / state

ಶಿವಮೊಗ್ಗದಲ್ಲಿ ಜೈನ ಸಮುದಾಯದ ಸಲ್ಲೇಖನ ವ್ರತ ಕುರಿತ ಮಹತ್ವದ ಶಿಲಾಶಾಸನ ಪತ್ತೆ... ಏನಿದರ ವಿಶೇಷ?

author img

By

Published : Nov 11, 2019, 5:16 PM IST

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರದ ಹುಂಚದಲ್ಲಿ 2 ಪ್ರಮುಖ ಶಾಸನಗಳು ಪತ್ತೆಯಾಗಿದ್ದು, 12 ನೇ ಶತಮಾನದ ಸಾಂತರಸರ ಕಾಲದ ಶಾಸನಗಳು ಎಂದು ಹೇಳಲಾಗುತ್ತಿದೆ.

ಪದ್ಮಾವತಿ ಕ್ಷೇತ್ರ ಹುಂಚದಲ್ಲಿ ಅಪರೂಪದ ನಿಷಿಧಿ ಶಾಸನ ಪತ್ತೆ

ಶಿವಮೊಗ್ಗ: ಜೈನರ ಅತಿ ಅಪರೂಪದ ನಿಷಿಧಿ‌‌ ಶಾಸನವೊಂದು ಹೊಸನಗರದ ಹುಂಚದಲ್ಲಿ ಪತ್ತೆಯಾಗಿದೆ. ಈ ರೀತಿಯ ನಿಷಿಧಿ ಶಿಲಾ ಶಾಸನ ಈ ಭಾಗದಲ್ಲ ದೂರಕಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಪದ್ಮಾವತಿ ಕ್ಷೇತ್ರ ಹುಂಚದಲ್ಲಿ ಅಪರೂಪದ ನಿಷಿಧಿ ಶಾಸನ ಪತ್ತೆ

ನಿಷಿಧಿ ಶಿಲಾ‌ ಶಾಸನ: ನಿಷಿಧಿ ಶಿಲಾ‌ ಶಾಸನ ಎಂದರೆ ಜೈನ ಸಮುದಾಯದಲ್ಲಿ ಸಲ್ಲೇಖನ ವ್ರತ ಕೈಗೊಳ್ಳುವ ಮಹಿಳೆಗೆ ಬೋಧನೆ ಮಾಡುತ್ತಿರುವ ಶಿಲಾ‌ ಶಾಸನವನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಜೇಶ್ವರ್ ರವರು ಪತ್ತೆ ಮಾಡಿದ್ದಾರೆ.‌ ಇದರಲ್ಲಿ ಒಂದು ಪೀಠದ ಮೇಲೆ ಜೈನ ಮುನಿಯೊಬ್ಬರು ಕುಳಿತು ಕೊಂಡಿದ್ದಾರೆ. ಇವರ ಪಕ್ಕದಲ್ಲಿ ಇಬ್ಬರನ್ನು ಕಾಣಬಹುದಾಗಿದೆ. ಜೈನ ಮುನಿಯ ಮುಂದೆ ಮಹಿಳೆಯೊಬ್ಬಳು ಬೋಧನೆ ಪಡೆಯುತ್ತಿರುವುದು‌ ಕಾಣಬಹುದಾಗಿದೆ.

ಆದರೆ ಈ ಶಿಲಾ ಶಾಸನದ ಮೇಲ್ಬಾಗ ಸ್ವಲ್ಪ ಒಡೆದು ಹೋಗಿದೆ. ಶಾಸನದಲ್ಲಿ ಮಹಿಳೆ ಸಲ್ಲೇಖನ ವ್ರತ ಕೈಗೊಳ್ಳುವುದಕ್ಕೆ ಜೈನ‌ ಮುನಿಯಿಂದ ಬೋಧನೆ ಪಡೆಯುವುದು ಎಂದಿದೆ. ಇದರಲ್ಲಿ ಪಿರಿಯಮ್ಮ ಎಂಬುದು ಮಹಿಳೆಯ ಹೆಸರು ಎಂದು ತಿಳಿದು ಬಂದಿದೆ. ಇದು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿನ ಶಾಸನ ಎಂದು ಅಂದಾಜಿದಲಾಗಿದೆ. ಹೊಸನಗರವನ್ನು ಸಾಂತರಸರು ಎಂಬುವರು ಆಳ್ವಿಕೆ ಮಾಡುತ್ತಿದ್ದರು. ಹುಂಚವನ್ನು(ಹೊಂಬುಜ) ಸಾಂತರಸರು ತಮ್ಮ ರಾಜಧಾನಿಯನ್ನಾಗಿ ಮಾಡಿ ಕೊಂಡಿದ್ದರು. ಈ ನಿಷಿಧಿ ಶಾಸನ 12 ನೇ ಶತಮಾನದ ಕಾಲದ್ದು ಎನ್ನಲಾಗಿದೆ. ಇದು ಬೊಮ್ಮ ಶಾಂತನ ಕಾಲದ ಶಾಸನ ಎಂದು ಅಂದಾಜಿಸಲಾಗಿದೆ. ಈ ಶಾಸನದ ಮೇಲೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ ಎಂದು ಶೇಜೇಶ್ವರ್ ತಿಳಿಸಿದ್ದಾರೆ.

ಕುಮದ್ವತಿ‌ ನದಿ ಉಗಮಸ್ಥಾನದ ಪುಷ್ಕರಣಿಯ ಜಿರ್ಣೋದ್ದಾರದ ಶಾಸನ ಪತ್ತೆ:
ಶಿಕಾರಿಪುರ ತಾಲೂಕಿನ ಜೀವನಾಡಿಯಾಗಿರುವ ಕುಮದ್ವತಿ ನದಿಯು ಹೊಸನಗರ ತಾಲೂಕು ಹುಂಚದಲ್ಲಿ ಹುಟ್ಟುತ್ತದೆ. ಈ ನದಿಯು ಸಣ್ಣದೊಂದು ಪುಷ್ಕರಣಿಯಲ್ಲಿ ಹುಟ್ಟಿ ಸುಮಾರು 60 ಕಿ.ಮೀ ಹರಿಯುತ್ತದೆ. ಪುಷ್ಕರಣಿ ಹುಂಚದ ಹೊರ ಭಾಗದಲ್ಲಿ ಇದೆ. ಇದನ್ನು ತೀರ್ಥಕೊಳ ಎಂದು ಕರೆಯಲಾಗುತ್ತದೆ. ಇದನ್ನು 17-18 ನೇ ಶತಮಾನದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಕಲ್ಯಾಣಿ ರೂಪದಲ್ಲಿ ಇರುವ ಇಲ್ಲಿಗೆ ಎರಡು ಕಡೆ ಇಳಿಯಲು ಮೆಟ್ಟಿಲುಗಳಿವೆ. ಸುತ್ತಾ ಕಲ್ಲಿ‌ನ ಪಟ್ಟಿಗೆಗಳಿವೆ. ಇದರಲ್ಲಿ ಗಜ ಶಿಲ್ಪಾಗಳಿವೆ. ಪಶ್ಚಿಮಕ್ಕೆ ಗೋಮುಖ ಪ್ರನಾಳವಿದೆ. ಇದರ ಮೂಲಕ ನದಿ ಉಗಮವಾಗುತ್ತಿರುತ್ತದೆ.

ಇದು 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, 1718 ರಲ್ಲಿ ನವೀಕರಣ ಮಾಡಲಾಗಿದೆ. ಜಿರ್ಣೋದ್ದಾರ ಮಾಡುವಾಗ ಕಲ್ಲಿನ ದಿಕ್ಕು ತಿಳಿಯಲು ಕಲ್ಲಿಗೆ ಸಂಖ್ಯೆಗಳನ್ನು ನಮೂದಿಸಲಾಗಿದೆ. ಪುಷ್ಕರಣಿ 4 ಸಾಲಿನ ಶಾಸನಗಳಿವೆ. ಈ ಮೂಲಕ ಪುಷ್ಕರಣಿ ಜೀರ್ಣೋದ್ದಾರ ಮಾಹಿತಿ ಲಭ್ಯವಾದಂತೆ ಆಗಿದೆ ಎನ್ನುತ್ತಾರೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಜೇಶ್ವರ್.

Intro:ಪದ್ಮಾವತಿ ಕ್ಷೇತ್ರ ಹುಂಚದಲ್ಲಿ ಅಪರೂಪದ ನಿಷಿಧಿ ಶಾಸನ ಪತ್ತೆ...

ಶಿವಮೊಗ್ಗ: ಜೈನರ ಅತಿ ಅಪರೂಪದ ನಿಷಿಧಿ‌‌ ಶಾಸನವೊಂದು ಹೊಸನಗರದ ಹುಂಚದಲ್ಲಿ ಪತ್ತೆಯಾಗಿದೆ. ಈ ರೀತಿಯ ನಿಷಿಧಿ ಶಿಲಾ ಶಾಸನ ಈ ಭಾಗದಲ್ಲ ದೂರಕಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ನಿಷಿಧಿ ಶಿಲಾ‌ ಶಾಸನ: ನಿಷಿಧಿ ಶಿಲಾ‌ ಶಾಸನ ಎಂದ್ರೆ, ಜೈನ ದಿಕ್ಷೆ ತೆಗೆದು ಕೊಂಡು ಸಲ್ಲೇಖನ ವೃತ ಕೈಗೊಳ್ಳುವ ಮಹಿಳೆಗೆ ಬೋಧನೆ ಮಾಡುತ್ತಿರುವ ಶಿಲಾ‌ ಶಾಸನವನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಜೇಶ್ವರ್ ರವರು ಪತ್ತೆ ಮಾಡಿದ್ದಾರೆ.‌ ಇದರಲ್ಲಿ ಒಂದು ಪೀಠದ ಮೇಲೆ ಜೈನ ಮುನಿಯೊಬ್ಬರು ಕುಳಿತು ಕೊಂಡಿದ್ದಾರೆ. ಇವರ ಪಕ್ಕದಲ್ಲಿ ಇಬ್ಬರನ್ನು ಕಾಣಬಹುದಾಗಿದೆ. ಜೈನ ಮುನಿಯ ಮುಂದೆ ಮಹಿಳೆಯೊಬ್ಬಳು ಬೋಧನೆ ಪಡೆಯುತ್ತಿರುವುದು‌ ಕಾಣಬಹುದಾಗಿದೆ. ಬೋಧನೆ ಪಡೆದು ನಿಷಿಧಿಗೆ ಹೋಗುತ್ತಿರುವುದು ಎನ್ನಲಾಗಿದೆ. ಆದರೆ ಈ ಶಿಲಾ ಶಾಸನದ ಮೇಲ್ಬಾಗ ಸ್ವಲ್ಪ ಹೊಡೆದು ಹೋಗಿದೆ. ಶಾಸನದಲ್ಲಿ ಮಹಿಳೆ ಸಲ್ಲೇಖನ ವೃತ ತೆಗೆದು ಕೊಳ್ಳುವುದಕ್ಕೆ ಜೈನ‌ ಮುನಿನಿಂದ ಬೋಧನೆ ಪಡೆಯುವುದು ಎಂದಿದೆ. ಇದರಲ್ಲಿ ಪಿರಿಯಮ್ಮ ಎಂಬುದು ಮಹಿಳೆಯ ಹೆಸರು ತಿಳಿದು ಬಂದಿದೆ. ಇದು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿನ ಶಾಸನ ಎಂದು ಅಂದಾಜಿದಲಾಗಿದೆ. ಹೊಸನಗರ ವನ್ನು ಸಾಂತರಸರು ಎಂಬುವರು ಆಳ್ವಿಕೆ ಮಾಡುತ್ತಿದ್ದರು. ಹುಂಚವನ್ನು(ಹೊಂಬುಜ) ಸಾಂತರಸರು ತಮ್ಮ ರಾಜಧಾನಿಯನ್ನಾಗಿ ಮಾಡಿ ಕೊಂಡಿದ್ದರು. ಈ ನಿಷಿಧಿ ಶಾಸನ 12 ನೇ ಶತಮಾನದ ಕಾಲದ್ದು ಎನ್ನಲಾಗಿದೆ.ಇದು ಬೊಮ್ಮ ಶಾಂತನ ಕಾಲದ ಶಾಸನ ಎಂದು ಅಂದಾಜಿಸಲಾಗಿದೆ. ಈ ಶಾಸನದ ಮೇಲೆ ಇನ್ನೂ ಸಂಶೋಧನೆಗಳು ನಡೆಯುತ್ತಿವೆ ಎಂದು ಶೇಜೇಶ್ವರ್ ತಿಳಿಸಿದ್ದಾರೆ.Body:
ಕುಮದ್ವತಿ‌ ನದಿ ಉಗಮದ ಪುಷ್ಕರಣಿಯ ಜಿರ್ಣೋದ್ದಾರದ ಶಾಸನ ಪತ್ತೆ:
ಇಂದು‌ ಶಿಕಾರಿಪುರ ತಾಲೂಕಿನ ಜೀವನಾಡಿಯಾಗಿರುವ ಕುಮದ್ವತಿ ನದಿಯು ಹೊಸನಗರ ತಾಲೂಕು ಹುಂಚದಲ್ಲಿ ಹುಟ್ಟುತ್ತದೆ. ಈ ನದಿಯು ಸಣ್ಣದೊಂದು ಪುಷ್ಕರಣಿಯಲ್ಲಿ ಹುಟ್ಟಿ ಸುಮಾರು 60 ಕಿ.ಮೀ ಹರಿಯುತ್ತದೆ. ಪುಷ್ಕರಣಿ ಹುಂಚದ ಹೊರ ಭಾಗದಲ್ಲಿ ಇದೆ. ಇದನ್ನು ತೀರ್ಥಕೊಳ ಎಂದು ಕರೆಯಲಾಗುತ್ತದೆ. ಇಲ್ಲಿನ ಪದ್ಮಾವತಿ ದೇವತೆಯ ಪೊಜೆಗೆ ನೀರು ತೆಗೆದು ಕೊಂಡು ಹೋಗಲಾಗುತ್ತದೆ. ಇದನ್ನು 17-18 ನೇ ಶತಮಾನದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಕಲ್ಯಾಣಿ ರೂಪದಲ್ಲಿ ಇರುವ ಇಲ್ಲಿಗೆ ಎರಡು ಕಡೆ ಇಳಿಯಲು ಮೆಟ್ಟಿಲುಗಳಿವೆ. ಸುತ್ತಾ ಕಲ್ಲಿ‌ನ ಪಟ್ಟಿಗೆಗಳಿವೆ. ಇದರಲ್ಲಿ ಗಜ ಶಿಲ್ಪಾಗಳಿವೆ. Conclusion:ಪಶ್ಚಿಮಕ್ಕೆ ಗೋಮುಖ ಪ್ರನಾಳವಿದೆ. ಇದರ ಮೂಲಕ ನದಿ ಉಗಮವಾಗುತ್ತಿರುತ್ತದೆ. ಇದು 12 ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, 1718 ರಲ್ಲಿ ನವೀಕರಣ ಮಾಡಲಾಗಿದೆ. ಜಿರ್ಣೋದ್ದಾರ ಮಾಡುವಾಗ ಕಲ್ಲಿನ ದಿಕ್ಕು ತಿಳಿಯಲು ಕಲ್ಲಿಗೆ ಸಂಖ್ಯೆಗಳನ್ನು ನಮೂದಿಸಲಾಗಿದೆ. ಪುಷ್ಮರಣಿ 4 ಸಾಲಿನ ಶಾಸನಗಳಿವೆ. ಈ ಮೂಲಕ ಪುಷ್ಕರಣಿ ಜೀರ್ಣೋದ್ದಾರ ಮಾಹಿತಿ ಲಭ್ಯವಾದಂತೆ ಆಗಿದೆ ಎನ್ನುತ್ತಾರೆ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಶೇಜೇಶ್ವರ್..

ಬೈಟ್: ಶೇಜೇಶ್ವರ್. ಸಹಾಯಕ‌ ನಿರ್ದೇಶಕರು, ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.