ETV Bharat / state

ವೈಯಕ್ತಿಕ ದ್ವೇಷಕ್ಕೆ ಕಿಡಿಗೇಡಿಗಳಿಂದ ಅಡಕೆ, ತೆಂಗು ನೆಲಸಮ

author img

By

Published : Nov 12, 2020, 4:43 PM IST

ವೈಯಕ್ತಿಕ ದ್ವೇಷದ ಹಿನ್ನೆಲೆ ಬೆಳೆದು ಫಸಲು ನೀಡುವ ಹಂತ ತಲುಪಿದ್ದ ತೆಂಗು, ಅಡಕೆ ಮರಗಳನ್ನು ಕತ್ತರಿಸಿರುವ ಘಟನೆ ನಡೆದಿದೆ. ತೋಟದ ಮಾಲೀಕ ಈ ಕುರಿತು ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ತನಿಖೆ ಮುಂದುವರೆದಿದೆ.

Miscreants destroyed the crop in Shivamogga
ವೈಯಕ್ತಿಕ ದ್ವೇಷಕ್ಕೆ ಕಿಡಿಗೇಡಿಗಳಿಂದ ಅಡಿಕೆ, ತೆಂಗು ನೆಲಸಮ

ಶಿವಮೊಗ್ಗ: ಫಸಲಿಗೆ ಬಂದಿದ್ದ ಅಡಕೆ, ತೆಂಗು ಹಾಗೂ ರಬ್ಬರ್ ತೋಟವನ್ನು ನಾಶ ಮಾಡಿರುವ ಘಟನೆ ಜಿಲ್ಲೆಯ ಬಿದರೂರು ಗ್ರಾಮದಲ್ಲಿ ನಡೆದಿದೆ. ಸಾಗರ ತಾಲೂಕು ಬಿದರೂರು ಗ್ರಾಮದ ಇಲಿಯಾಸ್ ಎಂಬುವವರಿಗೆ ಸೇರಿದ 10 ಎಕರೆಯಲ್ಲಿ ತೆಂಗು, ಅಡಕೆ ಹಾಗೂ ರಬ್ಬರ್ ಬೆಳೆ ನಾಶ ಮಾಡಲಾಗಿದೆ.

ವೈಯಕ್ತಿಕ ದ್ವೇಷಕ್ಕೆ ಕಿಡಿಗೇಡಿಗಳಿಂದ ಅಡಕೆ, ತೆಂಗು ನೆಲಸಮ

ರಾತ್ರಿ ಕೆಲ ಕಿಡಿಗೇಡಿಗಳು ಇವರ ತೋಟಕ್ಕೆ ನುಗ್ಗಿ ಫಸಲಿಗೆ ಬಂದಿದ್ದ ತೆಂಗು, ಅಡಕೆ ಹಾಗೂ ರಬ್ಬರ್ ಬೆಳೆ ನಾಶ ಮಾಡಿದ್ದಾರೆ. ಇದಲ್ಲದೇ, ಪಂಪ್ ಹೌಸ್​​​ಗೆ ಹಾನಿ ಮಾಡಿದ್ದಾರೆ. ತೋಟದ ಒಳಗೆ ಇರುವ ಬಾವಿಗೆ ಕಲ್ಲು ಹಾಕಿ ಮುಚ್ಚುವ ಯತ್ನ ಮಾಡಲಾಗಿದೆ. ಇದರಿಂದ ಸುಮಾರು 10 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ ಎಂದು ಮಾಲೀಕ ಇಲಿಯಾಸ್ ಮಾಹಿತಿ ನೀಡಿದ್ದಾರೆ.

ಸದ್ಯ ಘಟನೆ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.