ETV Bharat / state

ಸ್ಮಾರ್ಟ್‌ ಸಿಟಿ ಸಭೆಯಲ್ಲಿ ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ಧ ಸಚಿವ ಈಶ್ವರಪ್ಪ ಗರಂ

author img

By

Published : Dec 4, 2019, 5:04 PM IST

ಶಿವಮೊಗ್ಗದ ಸ್ಮಾರ್ಟ್​ ಸಿಟಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವ ಕೆ.ಎಸ್.ಈಶ್ವರಪ್ಪ ಜನವರಿ ಒಂದರೊಳಗಾಗಿ ನಗರದ ಎಲ್ಲಾ ಗುಂಡಿಗಳ ದುರಸ್ತಿ ಕಾರ್ಯ ಮಾಡಬೇಕು ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ರು.

Minister KS Eshwarappa angry at the officials
ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಸರ್ಕಾರ ಅಭಿವೃದ್ದಿ ಕೆಲಸಗಳಿಗೆ ಅನುದಾನ ಕೊರತೆ ಮಾಡಿಲ್ಲ. ಹಾಗಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಲು ಯಾಕೆ ವಿಳಂಬ? ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜನವರಿ 1ರ ಒಳಗೆ ನಗರದ ಎಲ್ಲ ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಅವರು ಇದೇ ವೇಳೆ ಅಧಿಕಾರಿಗಳಿಗೆ ಗಡುವು ನೀಡಿದ್ರು.

ಸಚಿವ ಕೆ.ಎಸ್.ಈಶ್ವರಪ್ಪ

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಅನುದಾನದ ನೀಡಿದ್ದರೂ, ಕಾಮಗಾರಿಯಲ್ಲಿ ವಿಳಂಬ ನೀತಿ ಯಾಕೆ? ಜನರು ನಮ್ಮನ್ನು ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು? ಎಂದು ಪಾಲಿಕೆ ಆಯುಕ್ತ ಚಿದಾನಂದ ಹಾಗೂ ಪಿಡಬ್ಲೂಡಿ ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಪ್ರಶ್ನಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ, ಉಪ ಮೇಯರ್ ಚನ್ನಬಸಪ್ಪ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗಡೆ ಸೇರಿ ಇತರರು ಹಾಜರಿದ್ದರು.

ಬಳಿಕ ಸಚಿವ ಈಶ್ವರಪ್ಪ, ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ, ರಸ್ತೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

Intro:ರಸ್ತೆ ಗುಂಡಿ ಮುಚ್ಚದ ಅಧಿಕಾರಿಗಳ ವಿರುದ್ದ ಗರಂ ಆದ ಸಚಿವ ಈಶ್ವರಪ್ಪ.

ಶಿವಮೊಗ್ಗ: ಸ್ಮಾರ್ಟ್ ಸಿಟಿ ಮಿಟಿಂಗ್ ನಲ್ಲಿ ಶಿವಮೊಗ್ಗ ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚದ ಅಧಿಕಾರಿಗಳ ವಿರುದ್ದ ಸಚಿವ ಈಶ್ವರಪ್ಪ ಪುಲ್ ಗರಂ ಆದ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಸ್ಮಾರ್ಟ್ ಸಿಟಿ ಸಭೆಯಲ್ಲಿ ಈಶ್ವರಪ್ಪ ಸ್ಮಾರ್ಟ್ ಸಿಟಿ ಕಾಮಗಾರಿಯ ಪ್ರಗತಿ ಪರಿಶೀಲಿಸುವಾಗ ರಸ್ತೆ ವಿಚಾರ ಬಂದಾಗ ರಸ್ತೆ ಗುಂಡಿ ಮುಚ್ಚಲು ಇನ್ನೆಷ್ಟು‌ ದಿನ ಬೇಕು. ಗುಂಡಿ ಮುಚ್ಚಲು ಕೋಟ್ಯಾಂತರ ರೂ ಹಣ ತಂದರು ಗುಂಡಿ ಮುಚ್ಚಲು ನಿಮಗೆ ಆಗಲ್ವಾ ಎಂದು ಪಾಲಿಕೆಯ ಆಯುಕ್ತ ಚಿದಾನಂದ ಹಾಗೂ PWD ಇಂಜಿನಿಯರ್ ವಿರುದ್ದ ಗರಂ ಆದರು.
Body: ಕಳೆದ ತಿಂಗಳ ಸಭೆಯಲ್ಲಿಯೇ ಗುಂಡಿ ಮುಚ್ಚುವಂತೆ ತಿಳಿಸಿದ್ರು ಇನ್ನೂ ಯಾಕೆ ಕಾಮಗಾರಿ ಪ್ರಾರಂಭ ಮಾಡಿಲ್ಲ ಎಂಬ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. ಸ್ಮಾರ್ಟ್ ಸಿಟಿ ಯೋಜನೆಯ ಇಂಜಿನಿಯರ್ ಗಳಿಗೆ ಎರಡು ಮೂರು ಕಾಮಗಾರಿಗಳ ಜವಾಬ್ದಾರಿ ನೀಡಿ ಎಂದು ತಾಕಿತು ಮಾಡಿದರು.Conclusion:ನಂತ್ರ ಶಾಲೆಗಳ ಶೌಚಾಲಯ ನಿರ್ಮಾಣಕ್ಕೆ ಗುತ್ತಿಗೆದಾರರೆ ಮುಂದೆ ಬಾರದೆ ಇರುವುದನ್ನು ಗಮನಿಸಿ ಬೇಗ ಶಾಲೆಗಳ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಿದರು. ನಂತ್ರ ಗಾರ್ಡನ್ ಏರಿಯಾದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.ಸಭೆಯಲ್ಲಿ ಡಿಸಿ, ಉಪ ಮೇಯರ್ ಚನ್ನಬಸಪ್ಪ ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗಡೆ ಸೇರಿ ಇತರರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.