ETV Bharat / state

ಶಿವಮೊಗ್ಗ: ಎರಡು ಗುಂಪುಗಳ ನಡುವೆ ಮಾರಾಮಾರಿ, ಐವರಿಗೆ ಚಾಕು ಇರಿತ

author img

By ETV Bharat Karnataka Team

Published : Sep 22, 2023, 9:36 AM IST

Updated : Sep 22, 2023, 1:14 PM IST

ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಐವರು ಗಾಯಗೊಂಡ ಘಟನೆ ಶಿವಮೊಗ್ಗದಲ್ಲಿ ಕಳೆದ ರಾತ್ರಿ ನಡೆದಿದೆ.

Shivamogga hospital
ಶಿವಮೊಗ್ಗ ಆಸ್ಪತ್ರೆ

ಶಿವಮೊಗ್ಗ: ಎರಡು ಗುಂಪುಗಳ ನಡುವೆ ಮಾರಾಮಾರಿ ಉಂಟಾಗಿರುವ ಘಟನೆ ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್​ ಸಮೀಪ ಕಳೆದ ರಾತ್ರಿ ನಡೆದಿದೆ. ಘಟನೆಯಲ್ಲಿ ಐವರಿಗೆ ಚಾಕು ಇರಿಯಲಾಗಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪವನ್​ ಮತ್ತು ಕಿರಣ್ ಸ್ನೇಹಿತರಾಗಿದ್ದು, ಇವರ ಗುಂಪುಗಳ ಮಧ್ಯೆ ಸಂಘರ್ಷ ನಡೆದಿದೆ. ಕಳೆದ ಕೆಲವು ವರ್ಷಗಳಿಂದ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳಿದ್ದವು. ಇದೇ ಕಾರಣಕ್ಕೆ ಆಗಾಗ್ಗೆ ಇವರ ಮಧ್ಯೆ ಗಲಾಟೆ ಆಗುತ್ತಿತ್ತು. ನಿನ್ನೆ ರಾತ್ರಿ ನೇತಾಜಿ ಸರ್ಕಲ್​ನಲ್ಲಿ ಇಬ್ಬರಿಗೂ ಜಗಳವಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಎರಡೂ ಕಡೆಯವರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮಧ್ಯ ಕರ್ನಾಟಕದಲ್ಲಿ‌ ಪ್ರಥಮ ಬಾರಿಗೆ ಯಶಸ್ವಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ

ಇತ್ತೀಚೆಗೆ ಮುಂಡಗೋಡದಲ್ಲಿ ಟಿಬೆಟಿಯನ್​ಗಳ ಮಧ್ಯೆ ಮಾರಾಮಾರಿ:

ಇತ್ತೀಚೆಗೆ ಇಬ್ಬರು ಟಿಬೆಟಿಯನ್​ಗಳ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂಬರ್​ 4ರಲ್ಲಿ ಸೆಪ್ಟಂಬರ್ 6 ರಂದು ಘಟನೆ ನಡೆದಿತ್ತು. .

ಹಳೆ ದ್ವೇಷದಿಂದ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದರು. ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಜಮ್ಯಾಂಗ್ ಲಾಕ್ಪಾ (43) ಮೃತಪಟ್ಟಿದ್ದು, ಗೊಂಪಾ ಚೋಡೆಕ್ ಗಂಭೀರವಾಗಿ ಗಾಯಗೊಂಡಿದ್ದರು.

ಇಬ್ಬರೂ ಸಹ 4 ನಂಬರ್ ಕ್ಯಾಂಪನಲ್ಲಿ ವಾಸಿಸುತ್ತಿದ್ದರು. ಗೊಂಪಾ ಚೋಡೇಕ್ ಮನೆಗೆ ಬಂದು ಜಮ್ಯಾಂಗ್ ಲಾಕ್ಪಾ ಬಾಗಿಲು ಬಡೆದಿದ್ದ. ಯಾರೋ ಕಳ್ಳ ಇರುಬಹುದೆಂದು ಗೊಂಪಾ ಚೋಡೇಕ್ ಕೂಗಾಡಿ ಒಳಗೆ ಓಡಿಹೋಗಿದ್ದ. ಅಷ್ಟರಲ್ಲಿ ಜಮ್ಯಾಂಗ್ ಲಾಕ್ಪಾ ತನ್ನ ಕೈಯಲ್ಲಿರುವ ಚಾಕುವಿನಿಂದ ಗೊಂಪಾ ಚೋಡೇಕ್​ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದರು. ಮುಂಡಗೋಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 22, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.