ETV Bharat / state

ಶಿವಮೊಗ್ಗದಲ್ಲಿ ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು.. ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ!

author img

By

Published : Oct 11, 2022, 10:11 AM IST

ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು ಉಂಟಾಗಿ ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ನಡೆದ ಬರ್ತ್​ಡೇ ಪಾರ್ಟಿಗೆ ಆಗಮಿಸಿದ ರೌಡಿಶೀಟರ್​ ತನ್ನ ಸ್ನೇಹಿತನಿಗೆ ಚಾಕು ಇರಿದಿರುವ ಘಟನೆ ಬೆಳಕಿಗೆ ಬಂದಿದೆ.

man stabbed his friend  man stabbed his friend in Shivamogga  Birthday party in Shivamogga  ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ  ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು  ಮತ್ತೆ ಚಾಕು ಇರಿತ ಪ್ರಕರಣ ಬೆಳಕಿಗೆ  ರೌಡಿಶೀಟರ್​ ತನ್ನ ಸ್ನೇಹಿತನಿಗೆ ಚಾಕು ಇರಿದ
ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ!

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ ಬೆಳಕಿಗೆ ಬಂದಿದೆ. ಬರ್ತ್​ಡೇ ಪಾರ್ಟಿ ವೇಳೆ ರೌಡಿಶೀಟರ್​ ತನ್ನ ಸ್ನೇಹಿತನಿಗೆ ಚಾಕು ಇರಿದಿರುವ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

ನಿನ್ನೆ ಇಲಿಯಾಸ್​ ನಗರದಲ್ಲಿ ಯುವಕನ ಬರ್ತ್​ಡೇ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಚನ್ನಗಿರಿಯಲ್ಲಿ ನೆಲೆಸಿರುವ ಮೊಹಮ್ಮದ್ ಮುಸೇಬ್ ಬಂದಿದ್ದಾನೆ. ಈ ವೇಳೆ ಸೈಯದ್ ರಜಾಕ್ ಎಂಬಾತ ಮುಸೇಬ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

man stabbed his friend  man stabbed his friend in Shivamogga  Birthday party in Shivamogga  ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ  ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು  ಮತ್ತೆ ಚಾಕು ಇರಿತ ಪ್ರಕರಣ ಬೆಳಕಿಗೆ  ರೌಡಿಶೀಟರ್​ ತನ್ನ ಸ್ನೇಹಿತನಿಗೆ ಚಾಕು ಇರಿದ
ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ!

ಚಾಕು ದಾಳಿಯಾದ ಪರಿಣಾಮ ಮುಸೇಬ್​ನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ತಕ್ಷಣ ಮುಸೇಬ್​ನನ್ನು ಸ್ನೇಹಿತರು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಮುಸೇಬ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬman stabbed his friend  man stabbed his friend in Shivamogga  Birthday party in Shivamogga  ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ  ರೌಡಿಶೀಟರ್​ಗಳ ಮಧ್ಯೆ ವೈಮನಸ್ಸು  ಮತ್ತೆ ಚಾಕು ಇರಿತ ಪ್ರಕರಣ ಬೆಳಕಿಗೆ  ರೌಡಿಶೀಟರ್​ ತನ್ನ ಸ್ನೇಹಿತನಿಗೆ ಚಾಕು ಇರಿದ
ಬರ್ತ್​ಡೇ ಪಾರ್ಟಿಗೆ ಬಂದು ಸ್ನೇಹಿತನಿಗೆ ಚಾಕು ಇರಿದ ಭೂಪ!

ಮುಸೇಬ್ ಹಾಗೂ ರಜಾಕ್ ಇಬ್ಬರಿಗೂ ಹಳೇ ದ್ವೇಷವಿದ್ದು, ಹಲವು ಭಾರಿ ಗಲಾಟೆ ಮಾಡಿಕೊಂಡಿದ್ದರು. ಹಳೇ ದ್ವೇಷದಿಂದಲೇ ಚಾಕುವಿನಿಂದ ಇರಿದಿದ್ದಾರೆ ಎಂದು ಮುಸೇಬ್ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಸಹ ರೌಡಿಶೀಟರ್​ಗಳಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣ: ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.