ETV Bharat / state

ಸಾಗರ : ಶ್ವಾನ ಪ್ರದರ್ಶನದಲ್ಲಿ ವೀಕ್ಷಕನ ಮೇಲೆರಗಿ ಕಚ್ಚಿ ಗಾಯಗೊಳಿಸಿದ ರಾಟ್ ವ್ಹೀಲರ್

author img

By ETV Bharat Karnataka Team

Published : Jan 8, 2024, 6:21 PM IST

Updated : Jan 9, 2024, 12:44 PM IST

ಶ್ವಾನ ಪ್ರದರ್ಶನದಲ್ಲಿ ವೀಕ್ಷಣೆಗೆ ಬಂದಿದ್ದ ವ್ಯಕ್ತಿಗೆ ನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ಸಾಗರದ ಗಾಂಧಿ ಮೈದಾನದಲ್ಲಿ ನಡೆದಿದೆ.

ಗಾಯಾಳು ಶರತ್
ಗಾಯಾಳು ಶರತ್

ಗಾಯಾಳು ಶರತ್

ಶಿವಮೊಗ್ಗ: ಸಾಗರದ ಗಾಂಧಿ ಮೈದಾನದಲ್ಲಿ ನಿನ್ನೆ ನಡೆದ ಶ್ವಾನ ಪ್ರದರ್ಶನದಲ್ಲಿ ವೀಕ್ಷಣೆಗೆ ಬಂದಿದ್ದ ವ್ಯಕ್ತಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ನಿನ್ನೆ ಸಾಗರದಲ್ಲಿ ಶರತ್ ಎಂಬುವರು ತಮ್ಮ ಕುಟುಂಬದೊಂದಿಗೆ ಶ್ವಾನ ಪ್ರದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಶರತ್ ಅವರ ಮೈಮೇಲೆ ಎಗರಿದ ರಾಟ್ ವ್ಹೀಲರ್ ಜಾತಿಯ ಶ್ವಾನ ತೊಡೆ ಹಾಗೂ ಕಾಲಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.

ಸಾಗರದ ಸಹ್ಯಾದ್ರಿ ಕೆನಲ್ ಕ್ಲಬ್ ವತಿಯಿಂದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ವಿವಿಧ ಜಾತಿಯ ಶ್ವಾನಗಳು ಆಗಮಿಸಿದ್ದವು. ಶ್ವಾನಗಳ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಶ್ವಾನ ಪ್ರದರ್ಶನ ವೀಕ್ಷಿಸಲು ಬಂದಿದ್ದ ಶರತ್ ಎಂಬುವವರು ತಮ್ಮ ಕುಟುಂಬದ ಜೊತೆ ಆಗಮಿಸಿದ್ದರು. ಈ ವೇಳೆ ಶರತ್ ಅವರ ಮೇಲೆ ರಾಟ್ ವ್ಹೀಲರ್ ಜಾತಿಯ ಶ್ವಾನ ದಾಳಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶರತ್ ಅವರು, ನಾನು ನನ್ನ ಕುಟುಂಬದ ಜೊತೆ ಶ್ವಾನ ಪ್ರದರ್ಶನಕ್ಕೆ ಬಂದಿದ್ದೆ, ಈ ವೇಳೆ ರಾಟ್ ವ್ಹೀಲರ್ ನನ್ನ ಮೇಲೆ ದಾಳಿ ನಡೆಸಿತು. ನನ್ನ ಕೈ ಹಾಗೂ ಕಾಲಿಗೆ ನಾಯಿ ಕಚ್ಚಿದೆ. ಇಷ್ಟಾದರೂ ಸಹ ರಾಟ್ ವ್ಹೀಲರ್ ನಾಯಿಯ ಮಾಲೀಕ ನಾಯಿಯನ್ನು ಹಿಂದಕ್ಕೆ ಕರೆಯದೆ, ನನ್ನ ಮೇಲೆ ದಾಳಿ ಮಾಡುತ್ತಿದ್ದರು ಸಹ ಸುಮ್ಮನಿದ್ದರು. ಅಲ್ಲದೆ ಆಯೋಜಕರು ಸಹ ಸುಮ್ಮನಿದ್ದರು. ನಾನು ಗಾಯಗೊಂಡು ಆಸ್ಪತ್ರೆಗೆ ಬಂದರು ಸಹ ಯಾರು‌ ಸಹ ನಾನು ಹೇಗಿದ್ದೇನೆ ಎಂದು ಕೇಳಲು ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಸದ್ಯ ಗಾಯಾಳು ಶರತ್ ಅವರು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಶ್ವಾನ ದಾಳಿಯ ಕುರಿತು ಪ್ರತಿಕ್ರಿಯೆಗೆ ಈಟಿವಿ ಭಾರತ್ ಸಹ್ಯಾದ್ರಿ ಕೆನಲ್​ನ ಸದಸ್ಯರನ್ನು ಸಂಪರ್ಕ ಮಾಡಲು ಫೋನ್ ಕರೆ ಮಾಡಿದಾಗ ಅವರು ಫೋನ್ ಸ್ವೀಕರಿಸಲಿಲ್ಲ.

ಯುವಕನ ಮೇಲೆ ಬೀದಿ ನಾಯಿ ದಾಳಿ (ಪ್ರತ್ಯೇಕ ಘಟನೆ) : ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಹೋಗಿದ್ದ ವೇಳೆ ಯುವಕನ ಮೇಲೆ ಬೀದಿ ನಾಯಿ ಭಯಾನಕ ದಾಳಿ ನಡೆಸಿರುವ ಘಟನೆ ಸಿಂಧನೂರಿನಲ್ಲಿ ನಡೆದಿತ್ತು.

ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಕಳೆದ ಪೊಲೀಸ್ ಕಾನ್​ಸ್ಟೇಬಲ್​ ಪತ್ನಿ ಮಗನ ಅನಾರೋಗ್ಯದ ಹಿನ್ನೆಲೆ ಆರೋಗ್ಯ ತಪಾಸಣೆಗೆ ಹೋಗಿದ್ದರು. ಈ ಸಮಯದಲ್ಲಿ ಹೊರಗಡೆ ಬಂದು ನಿಂತಾಗ ಅಲ್ಲಿಯೇ ಇದ್ದ ಬೀದಿ ನಾಯಿ ಏಕಾಏಕಿ ಅವರ ಮಗನ ಮೇಲೆ ದಾಳಿ ನಡೆಸಿತ್ತು. ಆಗ ತಾಯಿ ಬಿಡಿಸಲು ಹೋಗಿದ್ದಾರೆ. ಆಗಲೂ ದಾಳಿಯನ್ನು ಮುಂದುವರಿಸಿತ್ತು. ಆಗ ಸ್ಥಳದಲ್ಲಿದ್ದ ಜನರು ಬಿಡಿಸಲು ಮುಂದಾಗಿದ್ದರು. ಕೊನೆಗೆ ಅದನ್ನು ಹೊಡೆದು ಓಡಿಸಿದ್ದರು. ನಾಯಿ ಕಚ್ಚಿದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆಯಿಂದ ನಾಗರಿಕರು ಬೆಚ್ಚಿಬಿದ್ದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ: ರಾಯಚೂರು: ಯುವಕನ ಮೇಲೆ ಬೀದಿ ನಾಯಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Last Updated : Jan 9, 2024, 12:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.