ETV Bharat / state

ನಮ್ಮ ಗುರಿ ಮುಟ್ಟೋದಕ್ಕೆ ರಾಹುಲ್​ ಗಾಂಧಿ ಸಹಕಾರ ನೀಡಬೇಕು: ಕೆ ಎಸ್ ಈಶ್ವರಪ್ಪ

author img

By

Published : Apr 24, 2023, 3:50 PM IST

Updated : Apr 24, 2023, 3:58 PM IST

ಶಿವಮೊಗ್ಗದಲ್ಲಿರುವ ಯಡಿಯೂರಪ್ಪನವರ ನಿವಾಸದಲ್ಲಿ ಕೆ ಎಸ್ ಈಶ್ವರಪ್ಪ ಚುನಾವಣೆ ಕುರಿತು ಮಾತನಾಡಿದ್ದಾರೆ.

bjp
ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಕಾಂಗ್ರೆಸ್​ಗೆ ರಾಹುಲ್ ಗಾಂಧಿ ರಾಹು ಇದ್ದಂತೆ, ಇದನ್ನು ನಾನು ಹೇಳುಲು ತಯಾರಿಲ್ಲ. ಆದರೆ ಕಾಂಗ್ರೆಸ್​ನ ದೊಡ್ಡ ಟೀಂ ಹೇಳುತ್ತಿದೆ ಎಂದು ಬಿಜೆಪಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಅವರ ನಿವಾಸದಲ್ಲಿ ಮಾತನಾಡಿದ ಅವರು, ಇಂದು ಎಲ್ಲ ಸಮಾಜದ ಪ್ರಮುಖರ ಸಭೆ ನಡೆಸುತ್ತೇವೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಾಡುತ್ತೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೇಗೆ ಚುನಾವಣೆ ಗೆಲ್ಲಬೇಕು ಅಂತಾ ಚರ್ಚೆ ಮಾಡಿದ್ದೇವೆ. ಭದ್ರಾವತಿಯಲ್ಲಿ ಸ್ವಲ್ಪ ವೀಕ್ ಇದೆ ಅಲ್ಲಿಯೂ ಗೆಲ್ಲಲ್ಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಜಿಲ್ಲೆಯಲ್ಲಿ 7 ಸ್ಥಾನಕ್ಕೆ 7 ಗೆಲ್ಲುತ್ತೇವೆ: ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ಸ್ಥಾನಗಳನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದರು. ಶಿವಮೊಗ್ಗ ಕ್ಷೇತ್ರದಲ್ಲಿ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ ಎಂದರು. ಕಾಂಗ್ರೆಸ್​ಗೆ ಕಾರ್ಯಕರ್ತರೇ ಇಲ್ಲ. ಇದರಿಂದ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಯೋಗೇಶ್​ರವರ ಸಂಬಂಧಿಕರು ಹೊರಗಡೆಯಿಂದ 8-10 ಕಾರಿನಲ್ಲಿ ಬಂದು, ಶಿವಮೊಗ್ಗ ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಕಾರ್ಯಕರ್ತರೇ ಇಲ್ಲ. ಹೀಗಾಗಿ ಹೊರಗಡೆಯಿಂದ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದಲ್ಲಿ ಪ್ರಾಬಲ್ಯಕ್ಕಾಗಿ ರಾಜಕೀಯ ಪಕ್ಷಗಳ ಪೈಪೋಟಿ: ಈ ಬಾರಿ ಕೈ ಮುನ್ನಡೆಗೆ ತಡೆಯೊಡ್ಡುತ್ತಾ ಕಮಲ ಪಡೆ?

ಮೋದಿ, ನಡ್ಡಾ, ಅಮಿತ್ ಶಾ ಯೋಗಿಯಿಂದ ಪ್ರಚಾರ: ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ, ಜೆ.ಪಿ.ನಡ್ಡಾ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು. ನಾಳೆಯಿಂದ 7 ನೇ ತಾರೀಖಿನರವರೆಗೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.

ಇದನ್ನೂ ಓದಿ: ಮಾಜಿ ಸಚಿವ ಎಂ ಪಿ ಪ್ರಕಾಶ್ ಪುತ್ರಿ, ಮೊಮ್ಮಗ ಬಿಜೆಪಿ ಸೇರ್ಪಡೆ

ರಾಹುಲ್ ಗಾಂಧಿ‌ ಭೇಟಿ ವಿಚಾರ: ರಾಜ್ಯದಲ್ಲಿ ಲಿಂಗಾಯತ ಸಮಾಜ ಬಿಜೆಪಿ ಕಡೆ ಇದೆ. ಇದನ್ನು ರಾಹುಲ್ ಗಾಂಧಿಯೇ ಒಪ್ಪಿಕೊಂಡ ಹಾಗೆ ಆಗಿದೆ. ರಾಹುಲ್ ಗಾಂಧಿ ಶಿವಮೊಗ್ಗಕ್ಕೆ ‌ಕಾಲಿಟ್ಟು ಹೋದರೆ ಸಾಕು ನಾವು ಗೆಲ್ಲುತ್ತೆವೆ. ಕಳೆದ ಬಾರಿ 46 ಸಾವಿರ ಅಂತರದಲ್ಲಿ ಗೆದ್ದಿದ್ದೆವು, ಈ ಬಾರಿ 60 ಸಾವಿರ ಅಂತರದಲ್ಲಿ ಗೆಲ್ಲಲ್ಲು ಸಹಕಾರಿ ಆಗುತ್ತದೆ ಎಂದರು. ಅವರು ಬಂದು ಹೋದರೆ ನಾವು ಹೆಚ್ಚಿನ ಅಂತರದಲ್ಲಿ ಗೆಲ್ಲಲು ಸಹಕಾರಿಯಾಗುತ್ತದೆ ಟೀಕಿಸಿ ಮಾತನಾಡಿದರು.

ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಟಿಕೆಟ್​ ಸಿಗಲಿಲ್ಲ. ಅವರು ವರುಣಾದಲ್ಲಿ ಗೆಲ್ಲುವುದೂ ಇಲ್ಲ, ಮುಖ್ಯಮಂತ್ರಿ ಆಗಲ್ಲ ಎನ್ನವುದು ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುತ್ತದೆ ಎಂದರು.

ಇದನ್ನೂ ಓದಿ: ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ : ಸಿಎಂ ಬೊಮ್ಮಾಯಿ

ಇದನ್ನೂ ಓದಿ: ಈ ಬಾರಿ ಸಿದ್ದರಾಮಯ್ಯ ಗೆಲ್ಲುವುದು ಕಷ್ಟವಿದೆ: ಬಿ.ಎಸ್.ಯಡಿಯೂರಪ್ಪ

ಇದನ್ನೂ ಓದಿ: ನಾಳೆಯಿಂದ ಎರಡು ದಿನ ವಿಶೇಷ ಮಹಾ ಪ್ರಚಾರ ಅಭಿಯಾನ - ಮತದಾರರ ಮನೆಗೆ ಬಿಜೆಪಿ ನಾಯಕರ ಭೇಟಿ: ಕಟೀಲ್

Last Updated : Apr 24, 2023, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.